Site icon TUNGATARANGA

ಮಕ್ಕಳ ಪ್ರತಿಭೆಗಳನ್ನು ಸರಿಯಾಗಿ ಗುರುತಿಸಿ ವೇದಿಕೆ ಕಲ್ಪಿಸೋಣ ಶಿಕ್ಷಣ ಸಚಿವ ಬಿ.ಸಿ.ನಾಗೇಶ್

ಮಕ್ಕಳ ಪ್ರತಿಭೆಗಳ ಅನಾವರಣವೇ ಪ್ರತಿಭಾ ಕಾರಂಜಿ. ಪ್ರತಿಭೆಗಳನ್ನು ಗುರುತಿಸದಿದ್ದರೆ ಮುಂದೊಂದು ದಿನ ಪ್ರತಿಭೆಗಳೇ ಇಲ್ಲವಾಗಬಹುದು ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದರು


ಅವರು ಇಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಕುವೆಂಪು ರಂಗಮಂದಿರ ಹಾಗೂ ಡಿವಿಎಸ್ ಶಾಲಾ ಆವರಣದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ೨೦೨೨-೨೩ನೇ ಸಾಲಿನ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಉದ್ಘಾಟಿಸಿ ಮಾತನಾಡಿದರು.
ಭಾರತೀಯ ವ್ಯವಸ್ಥೆಯಲ್ಲಿ ಬದಲಾವಣೆಯಿಂದಗಾಗಿ ಕಲೆಗಳು ನಶಿಸಿಹೋಗುತ್ತಿದ್ದು, ಇದಕ್ಕೆ ಮಾರ್ಗದರ್ಶನದ ಕೊರತೆ ಇಲ್ಲದಂತಾಗಿದ್ದು, ಪ್ರಸ್ತುತ ತಂತ್ರಗಾರಿಕೆಯಿಂದಾಗಿ ಪ್ರತಿಭೆಗಳಿಗೆ ಸ್ಪರ್ಧಿಸಲು ಅವಕಾಶ ಹೆಚ್ಚಾಗುತ್ತಿದೆ. ಈ ಪ್ರತಿಭೆಗಳನ್ನು ವಾಪಾಸು ಕರೆತರಲು ಶಿಕ್ಷಣ ಇಲಾಖೆಯು ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ಪ್ರತಿಭೆಗಳಿಗೆ ಇದರಿಂದಾಗಿ ಧೈರ್ಯ ಬಂದು ಸ್ಪರ್ಧೆಗಳಲ್ಲಿ ಭಾಗವಹಿಸಲು ಉತ್ತೇಜನ ಸಿಗುತ್ತಿದೆ ಎಂದರು.


ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿದಲ್ಲಿ ಅವರು ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಲು ಅವಕಾಶ ಸಿಕ್ಕಂತಾಗುತ್ತದೆ. ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಲ್ಲಿ ಗೆಲುವು ಮತ್ತು ಸೋಲು ಮುಖ್ಯವಲ್ಲ. ಸೋತವರಿಗೆ ಮತ್ತೆ ಮತ್ತೆ ಅವಕಾಶ ಸಿಗುತ್ತದೆ. ಪ್ರತಿಭೆ ಉಳ್ಳವರು ಇಂತಹ ಬೇರೆ ಬೇರೆ ಕಾರ್ಯಕ್ರಮಗಳನ್ನು ನೋಡಿ ತಮ್ಮ ತಪ್ಪನ್ನು ತಿದ್ದಿಕೊಂಡು ಮುನ್ನಡೆಯಲು ಸಾಧ್ಯ ಎಂದರು.


ಅಧ್ಯಕ್ಷತೆ ವಹಿಸಿ ಶಾಸಕ ಕೆ.ಎಸ್. ಈಶ್ವರಪ್ಪ ಮಾತನಾಡಿ, ಮಕ್ಕಳು ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ರಾಜ್ಯ, ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸಬೇಕು. ಪ್ರತಿಭೆಗಳನ್ನು ಪ್ರದರ್ಶಿಸುವುದು ಕೂಡ ಒಂದು ಸವಾಲು. ತಾವು ವಿದ್ಯಾರ್ಥಿ ಜೀವನದಲ್ಲಿದ್ದಾಗ ಮೊದಲ ಬಾರಿ ಭಾಷಣ ಮಾಡಲು ಹೋಗಿ ಕುಸಿದು ಬಿದ್ದಿದ್ದೆ. ಎರಡು ನಿಮಿಷ ಮಾತನಾಡಲೂ ಆಗಲಿಲ್ಲ. ಈಗ ಬೇಕಾದರೆ ಎರಡು ಗಂಟೆ ಮಾತನಾಡಬಲ್ಲೆ ಎಂದರು.


ವೇದಿಕೆಯಲ್ಲಿ ಶಾಸಕ ಡಿ.ಎಸ್. ಅರುಣ್, , ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ. ಆರ್. ವಿಶಾಲ್, ಡಿವಿಎಸ್ ಸಂಸ್ಥೆಯ ಅಧ್ಯಕ್ಷ ಕೊಳಲೆ ರುದ್ರಪ್ಪ ಗೌಡ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ, ಅಲ್ಪಸಂಖ್ಯಾತ ಭಾಷಾ ಶಾಲೆಗಳ ನಿರ್ದೇಶನಾಲಯದ ನಿರ್ದೇಶಕಿ ಸಿರಿಯಣ್ಣವರ್ ಲಲಿತಾ ಚಂದ್ರಶೇಖರ್, ಜಿಲ್ಲಾಧಿಕಾರಿ ಡಾ. ಆರ್ ಸೆಲ್ವಮಣಿ, ಜಿ.ಪಂ. ಸಿಇಒ ಎನ್.ಡಿ. ಪ್ರಕಾಶ್, ವಿವಿಧ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರುಗಳಾದ ಪಿ. ಮಹದೇವಯ್ಯ, ಬಿ. ಸಿದ್ದಬಸಪ್ಪ, ಶಂಭುಲಿಂಗನಗೌಡ ಪಾಟೀಲ್ ಡಿಡಿಪಿಐ ಸಿ.ಆರ್. ಪರಮೇಶ್ವರಪ್ಪ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Exit mobile version