Site icon TUNGATARANGA

ಜ.8ರಂದು ಹೊನಲು ರಾಜ್ಯ ಮತ್ತು ರಾಷ್ಟ್ರಮಟ್ಟದಬೆಳಕಿನ ಬಯಲು ಕುಸ್ತಿ ಪಂದ್ಯ

ಜಿಲ್ಲಾ ಕುಸ್ತಿ ಪೈಲ್ವಾನರ ಅಭಿವೃದ್ಧಿ ಸಂಘ (ರಿ) ಸೀಗೆಹಟ್ಟಿ, ಅರಳಿಮರ ಹತ್ತಿರ ಮಂಡಕ್ಕಿಭಟ್ಟಿ ಕಾಲೋನಿ, ಶಿವಮೊಗ್ಗ ಇವರ ವತಿಯಿಂದ ಜ.೦೮ರ ಭಾನುವಾರ ನಗರದ ನೆಹರು ಕ್ರೀಡಾಂಗಣದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಹೊನಲು ಬೆಳಕಿನ ಎರಡು ಬೆಳ್ಳಿ ಗದೆಯುಳ್ಳ ಬಯಲು ಕುಸ್ತಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.


ಬೆಳ್ಳಿ ಗದೆ ಅಲ್ಲದೆ ನಗದು ಪುರಸ್ಕಾರವ ನೀಡಲಾಗುತ್ತಿದ್ದು, ಪಂದ್ಯದ ಸಮಾರಂಭವು ಶಿವಮೊಗ್ಗ ನಗರದ ಸೀಗೆಹಟ್ಟಿಯ ಕುಂಬಾರ ಗರಡಿಯಿಂದ ಪೈಲ್ವಾನರುಗಳ ಮೆರವಣಿಗೆ ಮೂಲಕ ಮಧ್ಯಾಹ್ನ ೨.೩೦ ಘಂಟೆಯಿoದ ಹೊರಟು ಶಿವಮೊಗ್ಗ ನಗರದ ನೆಹರು ಕ್ರೀಡಾಂಗಣವನ್ನು ೪.೦೦ ಘಂಟೆಗೆ ತಲುಪಲಿದ್ದು, ತದನಂತರ ಅಖಾಡ ಪೂಜೆ ಮುಗಿದ ನಂತರ ಕುಸ್ತಿ ಪಂದ್ಯಾವಳಿಗಳು ಪ್ರಾರಂಭಗೊಳ್ಳಲಿದೆ.


ಮಹಾನಗರಪಾಲಿಕೆ ಸದಸ್ಯರು, ಸಂಸದರು, ಶಾಸಕರುಗಳು ಆಗಮಿಸಲಿರುವರು. ಹಾಗೂ ಎಲ್ಲಾ ಹಿರಿಯ ಕುಸ್ತಿಪೈಲ್ವಾನರುಗಳು ಈ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.

Exit mobile version