ಶಿವಮೊಗ್ಗ: ಗೀತಾ ಶಿವರಾಜ್ ಕುಮಾರ್ ನಿರ್ಮಾಣದ ಮೊದಲ ಚಿತ್ರ ಹಾಗೂ ಡಾಕ್ಟರ್. ಶಿವರಾಜ್ಕುಮಾರ್ ನಟನೆಯ 125ನೇ ವೇದ ಚಿತ್ರ ತಂಡವು ಜ.6ರ ಶುಕ್ರವಾರ ಶಿವಮೊಗ್ಗ ನಗರಕ್ಕೆೆ ಆಗಮಿಸಲಿದ್ದು, ರಾತ್ರಿಿ 8 ಗಂಟೆಗೆ ಡಿವಿಎಸ್ ಕಾಲೇಜಿನ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಿದೆ.
ಜ.7.ರ ಶನಿವಾರ ಬೆಳಗ್ಗೆ 10.30 ಗಂಟೆಗೆ ಸಿಂಗಾರ ಸಭಾಂ ಗಣದಲ್ಲಿ ವೇದ ಚಲನಚಿತ್ರ ವೀಕ್ಷಿಸಿದ ರಂಗಭೂಮಿ ಕಲಾವಿದೆ ಯರು, ಕಾಲೇಜು ವಿದ್ಯಾಾರ್ಥಿನಿ ಯರು, ಆಶಾ ಕಾರ್ಯಕರ್ತೆಯರು, ಪೌರಕಾರ್ಮಿಕ ಮಹಿಳೆಯರು, ಹಾಗೂ ಆಯ್ದ ಕೆಲವು ಚಿತ್ರ ವೀಕ್ಷಕ ಮಹಿಳೆಯರೊಂದಿಗೆ ಸಂವಾದ ನಡೆಸಲಿದ್ದಾಾರೆ.
ಕೇವಲ 250 ವೀಕ್ಷರಿಗೆ ಅವ ಕಾಶವಿದ್ದು ಪಾಸ್ ಕಡ್ಡಾಾಯವಾಗಿರುತ್ತದೆ. ನಂತರ 12:30 ಗಂಟೆಗೆ ಶಿವಪ್ಪ ನಾಯಕ ಸರ್ಕಲ್ಗೆ ಆಗಮಿಸಿ ಶಿವಪ್ಪ ನಾಯಕ ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸಿ ಚಿತ್ರತಂಡದ ಎಲ್ಲಾಾ ನಟ ನಟಿಯರು ಹಾಗೂ ಅಪಾರ ಅಭಿಮಾನಿಗಳೊಂದಿಗೆ ತೆರೆದ ವಾಹನದ ಮೂಲಕ ಅಮೀರ್ ಅಹ್ಮದ್ ಸರ್ಕಲ್, ನೆಹರು ರಸ್ತೆ ಮೂಲಕ ಮಲ್ಲಿಕಾರ್ಜುನ ಚಿತ್ರಮಂದಿರಕ್ಕೆ ಆಗಮಿಸಲಿದ್ದಾಾರೆ.
ಚಿತ್ರದ ಯಶಸ್ಸಿಿಗೆ ಸಹಕರಿಸಿದ ಅಭಿಮಾನಿಗಳು, ಚಿತ್ರ ರಸಿಕರು, ಹಾಗೂ ಸಾರ್ವಜನಿಕರು ಆಶೀರ್ವದಿಸಿರುವುದನ್ನು ಸ್ಮರಿಸಿ, ಕೃತಜ್ಞತೆ ಸಲ್ಲಿಸಲಿದ್ದಾಾರೆ. ಈ ಕಾರ್ಯಕ್ರಮಕ್ಕೆೆ ಹೆಚ್ಚಿಿನ ಸಂಖೆಯಲ್ಲಿ ಆಗಮಿಸುವಂತೆ ವೇದಾ ತಂಡದ ಪರವಾಗಿ ಜಿ.ಡಿ. ಮಂಜುನಾಥ್ ಕೋರಿದ್ದಾಾರೆ.