Site icon TUNGATARANGA

ಚರಂಡಿ ರಸ್ತೆಗಳೇ ದೇಶದ ಅಭಿವೃದ್ದಿಯ ಕೆಲಸವಲ್ಲ ಸತ್ಯ ಧರ್ಮ ನ್ಯಾಯ ಒದಗಿಸುವುದು ಅಭಿವೃದ್ಧಿಯೇ ಇದು ಈಗ ಬಿ.ಜೆ.ಪಿ ಮಾಡುತ್ತಿದೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ

ದೇಶ , ಧರ್ಮ ಅಭಿವೃದ್ಧಿಯೇ ಬಿಜೆಪಿಯ ಮಂತ್ರ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿದರು.
ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ರಾಜ್ಯದಲ್ಲಿ ಸಂಪೂರ್ಣ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ. ಎಲ್ಲಾ ವರ್ಗದ ಹಿತವನ್ನು ಕಾಪಾಡುವುದರ ಜೊತೆಗೆ ಧರ್ಮ ಮತ್ತು ಸಂಸ್ಕೃತಿಯನ್ನು ಉಳಿಸುತ್ತದೆ. ಜೊತೆಗೆ ಅಭಿವೃದ್ಧಿಯನ್ನೂ ಮಾಡುತ್ತದೆ. ಸರ್ವ ಸ್ವಂತಂತ್ರವಾದ ಸರ್ಕಾರ ಬರಲು ರಾಜ್ಯದ ಎಲ್ಲಾ ನಾಯಕರು ರಾಷ್ಟ್ರ ನಾಯಕರ ಜೊತೆ ಸೇರಿಕೊಂಡು ಪಕ್ಷವನ್ನು ಗಟ್ಟಿಗೊಳಿಸುತ್ತಿದ್ದಾರೆ. ಬೂತ್ ಮಟ್ಟದಿಂದ ಈಗಾಗಲೇ ಸಂಘಟನೆ ಆರಂಭವಾಗಿದೆ. ವರಿಷ್ಠರ ಅಪೇಕ್ಷೆಯಂತೆ ಎಲ್ಲಾ ೨೨೪ ಕ್ಷೇತ್ರಗಳಲ್ಲು ಕೂಡ ಬಿಜೆಪಿ ಶಕ್ತಿಶಾಲಿಯಾಗಿ ಬೆಳೆಯುತ್ತಿದೆ. ರಾಷ್ಟ್ರೀಯ ನಾಯಕರಾದ ಅಮಿತ್ ಷಾ., ಜೆ.ಪಿ, ನಡ್ಡಾ ಕೂಡ ಆಗಮಿಸುತ್ತಿದ್ದಾರೆ.


ಚರಂಡಿ, ರಸ್ತೆಗಳೇ ಮಾತ್ರ ಅಭಿವೃದ್ಧಿಯಲ್ಲ. ಈ ದೇಶದ ಧರ್ಮವನ್ನು ಕಾಪಾಡುವುದೂ ಅಭಿವೃದ್ಧಿಯೇ. ಹಾಗಾಗಿಯೇ ಬಿಜೆಪಿ ಧರ್ಮದ ರಾಜಕಾರಣ ಮಾಡುತ್ತಿದೆ. ಬ್ರಿಟೀಷರ ಕಾಲದಲ್ಲಿ ಚರಂಡಿ, ರಸ್ತೆಗಳು ಆಗಿರಲಿಲ್ಲವೇ. ಆದರೆ ವಿಷಯ ಅದಲ್ಲ. ನಮ್ಮ ಶ್ರದ್ಧಾ ಕೇಂದ್ರಗಳು ಧ್ವಂಸವಾದವು. ದೇವಾಲಯಗಳು ನಾಶಗೊಂಡವು. ನಮ್ಮ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರಗಳು ನಡೆದವು. ಇದರ ವಿರುದ್ಧ ಸಾವಿರಾರು ಸಂಖ್ಯೆಯಲ್ಲಿ ನಮ್ಮ ಹಿರಿಯರ ಬಲಿದಾನವಾಗಿದೆ. ನಮ್ಮ ಗೋಮಾತೆ ನಮಗೆ ಉಳಿಯಬೇಕು. ಧ್ವಂಸಗೊಂಡ ದೇವಾಲಯಗಳು ಮರುನಿರ್ಮಾಣಗೊಳ್ಳಬೇಕು. ಅಯೋಧ್ಯೆ, ಮಥುರಾ, ಕಾಶಿ, ಮುಂತಾದ ಸ್ಥಳಗಳು ಮತ್ತೆ ಶ್ರದ್ಧಾಕೇಂದ್ರಗಳಾಗಬೇಕು. ಹೀಗೆ ಧರ್ಮದ ಜೊತೆಗೆ ಅಭಿವೃದ್ಧಿ, ಅಭಿವೃದ್ದಿಗೋಸ್ಕರ ಬಿಜೆಪಿ ಕೆಲಸ ಮಾಡುತ್ತಿದೆ ಎಂದರು.


ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದವರು. ಒಬ್ಬ ಮುಖ್ಯಮಂತ್ರಿಗೆ ಹೇಗೆ ಸಂಬೋಧಿಸಬೇಕೆಂಬ ಕಲ್ಪನೆಯೂ ಇಲ್ಲ. ನಾಯಿಮರಿಗೆ ಹೋಲಿಸುತ್ತಾರೆ. ನಮಗೂ ಹೋಲಿಕೆ ಮಾಡಲು ಬೇಕಾದಷ್ಟು ಪ್ರಾಣಿಗಳಿವೆ. ಹಂದಿಯೂ ಇದೆ. ನಿಂದನೆ ಮಾಡಲು ನಮಗೆ ಬರುವುದಿಲ್ಲವೇ ಎಂದ ಅವರು, ಸಿದ್ದರಾಮಯ್ಯ ಅವರಿಗೆ ಒಂದಿಷ್ಟು ಪ್ರಜ್ಞೆ ಇದ್ದರೆ ಕೂಡಲೇ ಮುಖ್ಯಮಂತ್ರಿಗಳೀಗೆ ನಾನು ಅವಮಾನ ಮಾಡಿದ್ದೇನೆ. ನನ್ನ ನಾಲಿಗೆಯಿಂದ ಬಂದ ಪದ ತಪ್ಪಾಗಿದೆ ಎಂದು ರಾಜ್ಯದ ಜನತೆಯಲ್ಲಿ ಕ್ಷಮೆಯಾಚಿಸಲಿ ಎಂದರು.


ಬಿ.ಎಸ್. ಯಡಿಯೂರಪ್ಪ ಅವರನ್ನು ರಾಜೀನಾಮೆ ಕೊಡಿಸಿದರು ಎಂದು ಕಾಂಗ್ರೆಸ್ಸಿಗರು ಹೇಳುವಲ್ಲಿ ಅರ್ಥವಿಲ್ಲ. ಯಡಿಯೂರಪ್ಪನವರೇ ತಾವಾಗಿಯೇ ರಾಜೀನಾಮೆ ಕೊಟ್ಟಿದ್ದಾರೆ. ಆದರೆ ಈ ಸಿದ್ದರಾಮಯ್ಯ ಅವರನ್ನು ಜನರೇ ಓಡಿಸಿದ್ದಾರೆ. ಯಾವ ಕಾರಣಕ್ಕೂ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರ ಹಿಡಿಯಲು ಸಾಧ್ಯವಿಲ್ಲ. ಬಿಜೆಪಿ ಸರ್ಕಾರದಲ್ಲಿ ಪರಿಶಿಷ್ಟರ ಅಭಿವೃದ್ಧಿಯಾಗಿಲ್ಲ ಎಂದು ಕಾಂಗ್ರೆಸ್ಸಿಗರು ಹೇಳುತ್ತಾರೆ. ಆದರೆ ಬಿಜೆಪಿ ಸರ್ಕಾರ ಅವರ ಅಭಿವೃದ್ಧಿಗಾಗಿ ಏನೆಲ್ಲಾ ಮಾಡಿದೆ ಎಂದು ತಿಳಿದುಕೊಳ್ಳಲಿ ಎಂದರು.

Exit mobile version