ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿಯವರ ವಿಜೃಂಭಣೆಯ ತೆಪ್ಪೋತ್ಸವವು ಜ.೬ ರಂದು ಶುಕ್ರವಾರ ರಾತ್ರಿ ೭.೩೦ಕ್ಕೆ ಪ್ರಾರಂಭವಾಗಲಿದ್ದು, ಅದಕ್ಕೂ ಮುನ್ನ ತುಂಗಾ ನದಿಯ ಮಂಟಪದ ಬಳಿ ಸಂಜೆ ೬.೩೦ ರಿಂದ ಭಕ್ತಿ ಸಂಗೀತ ಕಾರ್ಯಕ್ರಮವಿರುತ್ತದೆ.
ಕಳೆದ ೨೨ ವರ್ಷಗಳಿಂದ ತೆಪ್ಪೋತ್ಸವ ಸಮಿತಿ ವತಿಯಿಂದ ಈ ಕಾರ್ಯಕ್ರಮ ನಡೆಯುತ್ತಿದ್ದು, ಜಗಜಗಿಸುವ ವಿದ್ಯುತ್ ದೀಪಾಲಂಕಾರ, ಬಣ್ಣ ಬಣ್ಣದ ಹೂವು ಬೆಳಕಿನ ಸಿಡಿಮದ್ದುಗಳು, ಸುಶ್ರಾವ್ಯವಾದ ಮಂಗಳ ವಾದ್ಯ, ಭಕ್ತಿ ಸಂಗೀತ,
ಭಜನೆ, ಇವುಗಳೆಲ್ಲದರ ಮಧ್ಯೆ ಸರ್ವಾಲಂಕಾರ ಭೂಷಿತ ಶ್ರೀ ಕೋದಂಡರಾಮನ ಉತ್ಸವ ಬಿಂಬದೊಂದಿಗೆ ತೆಪ್ಪೋತ್ಸವ ನಡೆಯಲಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ತೆಪ್ಪೋತ್ಸವ ಸಮಿತಿ ತಿಳಿಸಿದೆ.