Site icon TUNGATARANGA

ಶಿವಮೊಗ್ಗದಲ್ಲಿ “ವೈಕುಂಟ ಏಕಾದಶಿ” ಸಂಭ್ರಮ, ಶ್ರೀನಿವಾಸನ ಅಲಂಕಾರಗಳನ್ನು ಕಣ್ತುಂಬಿಕೊಳ್ಳಿ..,

ಶಿವಮೊಗ್ಗ, ಜ.೦೨:
ವೈಕುಂಠ ಏಕಾದಶಿಯ ಪ್ರಯುಕ್ತ ವಿವಿಧ ದೇವಾಲಯಗಳಲ್ಲಿ ದೇವರಿಗೆ ವಿಶೇಷ ಅಲಂಕಾರ ಮತ್ತು ಪೂಜೆಯನ್ನು ಏರ್ಪಡಿಸಲಾಗಿದ್ದು, ಬೆಳಿಗ್ಗೆ ಯಿಂದಲೇ ಭಕ್ತಾದಿಗಳು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.


ಇಂದು ಬೆಳಿಗ್ಗೆಯಿಂದಲೇ ನಗರದ ಗೌಡಸಾರಸ್ವತ ಸಮಾಜದ ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯ, ಕೋಟೆ ಶ್ರೀ ಸೀತಾರಾಮಾಂಜನೇಯ ದೇವಾಲಯ, ವೆಂಕಟೇಶ ನಗರದ ವೆಂಕಟರಮಣ, ಎಲ್‌ಬಿಎಸ್ ನಗರದ ದೇವಗಿರಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಾ ಲಯ, ನವುಲೆ ಶ್ರೀ ವೆಂಕಟರಮಣ ಸ್ವಾಮಿ ದೇವಾ ಲಯ, ಹೊಳೆಹಟ್ಟಿ ಹಳೇ ಗ್ರಾಮದ ಶ್ರೀ ರಂಗನಾಥ ಸ್ವಾಮಿ, ಜಯನಗರ ರಾಮಮಂದಿರದಲ್ಲಿ ವಿಶೇಷ ಅಲಂಕಾರ ಏರ್ಪಡಿಸಲಾಗಿದೆ.


ದೇವಗಿರಿ ವೆಂಕಟರಮಣ ದೇವಾಲಯದಲ್ಲಿ ಸಪ್ತದ್ವಾರ ನಿರ್ಮಾಣ ಮಾಡಿ ಶೇಷಶಯನ ಲಕ್ಷ್ಮೀ ನಾರಾಯಣ ಅಲಂಕಾರ ಮಾಡಲಾಗಿದೆ. ಭಕ್ತರು ನೂರಾರು ಸಂಖ್ಯೆಯಲ್ಲಿ ಆಗಮಿಸಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ವೈಕುಂಠ ಏಕಾದಶಿ ದಿನದಂದು ಭಕ್ತರ ಕೋರಿಕೆ ಈಡೇರಿ ಸಲು ಸಾಕ್ಷಾತ್ ವಿಷ್ಣುವೆ ಲಕ್ಷ್ಮೀ ಸಹಿತನಾಗಿ ಭೂ ಲೋಕಕ್ಕೆ ಬರುತ್ತಾನೆ ಎಂಬ ಪ್ರತೀತಿ.


ಸೂರ್ಯನು ಉತ್ತ ರಾಯಣಕ್ಕೆ ಬದಲಾಗುವ ಮೊದಲು ಬರುವ ಧನುರ್ಮಾಸದ ಶುದ್ದ ಏಕಾದಶಿಯನ್ನು ವೈಕುಂಠ ಏಕಾದಶಿ ಎನ್ನುತ್ತಾರೆ. ಶ್ರದ್ದಾಭಕ್ತಿಗಳಿಂದ ಸನಾತನ ಧರ್ಮಿಗಳು ವಿಷ್ಣುವನ್ನು ಪೂಜಿಸುವ ಮಹತ್ವದ ದಿನ.
ಏಕಾದಶಿಯ ಪವಿತ್ರ ದಿನವಾದ ಹಬ್ಬದ ವಾತಾ ವರಣ ಕಂಡು ಬಂದಿತು. ಎಲ್ಲಾ ದೇವಾ ಲಯಗಳಲ್ಲೂ ಪ್ರಸಾದ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ.

Exit mobile version