Site icon TUNGATARANGA

 ಪಾಕಿಸ್ತಾನದ ಸಿಂಝೋರ್‌ನಲ್ಲಿ 40 ವರ್ಷದ ವಿಧವೆಯಾ ಬರ್ಬರವಾಗಿ ಹತ್ಯೆ /ಆರೋಪಿಗಳಿಗೆ ಉಗ್ರ ಶಿಕ್ಷ ನೀಡುವಂತೆ ಮನವಿ

 ಪಾಕಿಸ್ತಾನದ ಸಿಂಝೋರ್‌ನಲ್ಲಿ 40 ವರ್ಷದ ಅಬಲೆ ಹಿಂದು ವಿಧವೆ
ದಯಾಬೇಲ್ ಎಂಬುವವರ ಶಿರಚ್ಛೇದನ ಮಾಡಿ ಸ್ತನಗಳನ್ನು ಕತ್ತರಿಸಿ ಹತ್ಯೆಮಾಡಿರುವುದನ್ನು
ಖಂಡಿಸಿ ಶಿವಮೊಗ್ಗ ನಗರ ಮಹಿಳಾ ಮೋರ್ಚಾದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ
ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟçಪತಿಗಳಿಗೆ ಮನವಿ ಸಲ್ಲಿಸಲಾಯಿತು.

 ಹತ್ಯೆ ಮಾಡಿದ್ದಲ್ಲದೆ ದುರುಳರು ಆಕೆಯ ರುಂಡ,ಮುAಡ ಬೇರ್ಪಡಿಸಿ ಗೋಧಿಯ ಹೊಲದಲ್ಲಿ
ಮೃತದೇಹ ಎಸೆದು ತಲೆಯ ಚರ್ಮವನ್ನು ತೆಗೆಯಲು ಪ್ರಯತ್ನಿಸಿದ್ದಾರೆ. ಈ ಘಟನೆಯು
ಪಾಕಿಸ್ತಾನದಲ್ಲಿರುವ ಹಿಂದುಗಳ ಸುರಕ್ಷತೆ ಬಗ್ಗೆ ಕಳವಳವನ್ನು ಹೆಚ್ಚಿಸಿದ್ದು, ಕಳೆದ
ಮಾರ್ಚ್ನಲ್ಲಿ ಸಿಂಧ್ ಪ್ರಾಂತ್ಯದಲ್ಲಿ 18 ವರ್ಷದ ಹಿಂದು ಯುವತಿಯನ್ನು ಬರ್ಬರವಾಗಿ
ಹತ್ಯೆಮಾಡಿ ರಸ್ತೆಗೆ ಎಸೆಯಲಾಗಿತ್ತು.

 ಈ ಘಟನೆಗಳ ಹಿಂದಿರುವ ಆರೋಪಿಗಳನ್ನು ಪಾಕಿಸ್ತಾನ ಸರ್ಕಾರ ಬಂಧಿಸಿ ಕೂಡಲೇ ಶಿಕ್ಷೆಗೆ
ಒಳಪಡಿಸಬೇಕು. ಹಾಗೂ ಪಾಕಿಸ್ತಾನದಲ್ಲಿರುವ ಹಿಂದುಗಳ ರಕ್ಷಣೆಗೆ ಅಂತರ್‌ರಾಷ್ಟಿçÃಯ
ಮಟ್ಟದಲ್ಲಿ ಒತ್ತಡ ತರುವಂತೆ ರಾಷ್ಟçಪತಿಗಳಲ್ಲಿ ಮಹಿಳಾ ಮೋರ್ಚಾ ಆಗ್ರಹಿಸಿದೆ.
ಮಹಿಳೆಯರ ಮೇಲೆ ಆಗುತ್ತಿರುವ ಎಲ್ಲಾ ದೌರ್ಜನ್ಯಗಳ ವಿರುದ್ಧ ಮಹಿಳಾ ಮೋರ್ಚಾ ತೀವ್ರ
ಖಂಡನೆ ವ್ಯಕ್ತಪಡಿಸಿದೆ.

 ಈ ಸಂದರ್ಭದಲ್ಲಿ ಬಿಜೆಪಿ ಮಹಿಳಾ ಮೋರ್ಚಾದ ನಗರಾಧ್ಯಕ್ಷೆ ಸುರೇಖಾ ಮುರುಳೀಧರ್,
ಪ್ರಧಾನ ಕಾರ್ಯದರ್ಶಿಗಳಾದ ರಶ್ಮಿ ಶ್ರೀನಿವಾಸ್,ಆರತಿ ಅ.ಮ.ಪ್ರಕಾಶ್, ಖಜಾಂಚಿ
ರಶ್ಮಿಶಿವಕುಮಾರ್ ಹಾಗೂ ಮಹಿಳಾ ಮೋರ್ಚಾದ ಕಾರ್ಯಕರ್ತೆಯರು ಭಾಗವಹಿಸಿದ್ದರು

Exit mobile version