ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆಯ ಹೆರಿಗೆ ವಾರ್ಡಿಗೆ ಹೋಗುವ ಮುಂಭಾಗದ ಮುಖ್ಯದ್ವಾರವನ್ನು ಸಾರ್ವಜನಿಕರಿಗೆ ಬಂದ್ ಮಾಡಿರುವುದನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಮೆಗ್ಗಾನ್ ಆಸ್ಪತ್ರೆಗೆ ಸಾವಿರಾರು ಸಂಖ್ಯೆಯಲ್ಲಿ ರೋಗಿಗಳು ಬರುತ್ತಾರೆ. ಅದರಲ್ಲೂ ಗರ್ಭಿಣಿಯರು ಮತ್ತು ಹೆರಿಗೆಗೆಂದು ಬರುವವರ ಸಂಖ್ಯೆಯೂ ಹೆಚ್ಚಾಗಿದೆ. ಇದಕ್ಕೆ ಸಂಬAಧಿಸಿದAತೆ ಮೆಗ್ಗಾನ್ ಆಸ್ಪತ್ರೆಯ ಆಡಳಿತ ಮಂಡಳಿ ಹೆರಿಗೆ ವಾರ್ಡ್ಗೆ ಹೋಗುವ ಮುಖ್ಯ ಗೇಟ್ ಬಂದ್ ಮಾಡಿದ್ದಾರೆ. ಇದರಿಂದ ರೋಗಿಗಳಿಗೆ, ರೋಗಿಗಳ ಜೊತೆ ಇರುವವರಿಗೆ ಹಾಗೂ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದೆ. ಅಷ್ಟೇ ಅಲ್ಲ, ಆಂಬುಲೆನ್ಸ್ ಗಳು ಒಳಗಡೆ ಹೋದರೂ ಕೂಡ ತೊಂದರೆಯಾಗುತ್ತಿದೆ. ಡಿವೈಡರ್ ಗಳು ಇರುವುದರಿಂದ ಆಂಬುಲೆನ್ಸ್ ವಾಹನಗಳನ್ನು ತಿರುಗಿಸಲು ಸಾಧ್ಯವಾಗುವುದಿಲ್ಲ ಎಂದು ಪ್ರತಿಭಟನಾಕಾರರು ತಿಳಿಸಿದರು.
ಹೆರಿಗೆ ವಾರ್ಡ್ನ ಎರಡೂ ಬದಿಗಳಲ್ಲಿಯೂ ಅವೈಜ್ಞಾನಿಕ ಪಾರ್ಕಿಂಗ್ ವ್ಯವಸ್ಥೆ ಇದೆ. ಇದರಿಂದ ಜನರಿಗೆ ಮತ್ತು ಆಂಬುಲೆನ್ಸ್ ವಾಹನಗಳಿಗೆ ತೊಂದರೆಯಾಗುತ್ತಿದೆ. ಈಗ ತೆರದಿರುವ ಗೇಟ್ ಜೊತೆಗೆ ಮುಚ್ಚಿರುವ ಗೇಟ್ ತೆರೆದರೆ ಯಾವ ಟ್ರಾಫಿಕ್ ಸಮಸ್ಯೆಯೂ ಆಗುವುದಿಲ್ಲ. ಮೆಗ್ಗಾನ್ ಆಸ್ಪತ್ರೆ ಸರ್ಕಾರಿ ಆಸ್ಪತ್ರೆಯಾಗಿದ್ದರೂ ಕೂಡ ಖಾಸಗಿ ಸ್ವತ್ತಿನ ರೀತಿ ಬಳಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಅವೈಜ್ಞಾನಿಕವಾಗಿ ಬಂದ್ ಮಾಡಿರುವ ಮುಖ್ಯ ದ್ವಾರವನ್ನು ತಕ್ಷಣವೇ ತೆರವುಗೊಳಿಸಿ ಸಾರ್ವಜನಿಕರಿಗೆ ಆಗುತ್ತಿರುವ ಕಿರಿಕಿರಿ ತಪ್ಪಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಪ್ರತಿಭಟನೆಯಲ್ಲಿ ವೇದಿಕೆಯ ಜಿಲ್ಲಾಧ್ಯಕ್ಷ ಕಿರಣ್ ಕುಮಾರ್ ಹೆಚ್.ಎಸ್., ಪ್ರಮುಖರಾದ ಶಂಭುಲಿAಗಯ್ಯ, ಶಿವಕುಮಾರ್, ಸತೀಶ್, ರವಿ, ರಮೇಶ್ ಮೊದಲಾದವರಿದ್ದರು.