Site icon TUNGATARANGA

ಭದ್ರಾ ಜಲಾಶಯದಿಂದ 50 ಸಾವಿರ ಕ್ಯೂಸೆಕ್ಸ್‌ ನೀರು ಬಿಡುಗಡೆ


ಭದ್ರಾವತಿ: ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಮುಂಜಾನೆ ಒಟ್ಟು 50 ಸಾವಿರ ಕ್ಯೂಸೆಕ್ಸ್‌ ನೀರನ್ನು ಹೊರಬಿಡಲಾಗುತ್ತಿದೆ.
ಎಂದುಬಿ.ಆರ್.ಪಿಯ ಸಹಾಯಕ ಕಾರ್ಯಪಾಲಕ ಅಭಿಯಂತರ ಮಂಜುನಾಥ್ ತಿಳಿಸಿದ್ದಾರೆ.
ಆರಂಭದಲ್ಲಿ ಕ್ರಸ್ಟ್‌ ಗೇಟ್ ಮೂಲಕ 10 ಸಾವಿರ ಕ್ಯೂಸೆಕ್ಸ್‌ ನೀರು ಹೊರಬಿಡಲಾಗಿದ್ದು, ಆನಂತರ 30 ಸಾವಿರ ಕ್ಯೂಸೆಕ್ಸ್‌ ಬಿಡಲಾಯಿತು. ಆದರೆ, ಒಳಹರಿವಿನ ಪ್ರಮಾಣ ಹೆಚ್ಚಾದ ಕಾರಣ ಮತ್ತೆ 5 ಸಾವಿರ ಕ್ಯೂಸೆಕ್ಸ್‌ ಬಿಡಲಾಗುತ್ತಿದ್ದು, ಒಟ್ಟು ನದಿಗೆ 45 ಸಾವಿರ ಕ್ಯೂಸೆಕ್ಸ್‌ ನೀರನ್ನು ಕ್ರಸ್ಟ್‌ ಗೇಟ್ ಮೂಲಕ ಬಿಡಲಾಗುತ್ತಿದೆ. ಇನ್ನು, ಇದೇ ವೇಳೆಯಲ್ಲಿ 5 ಸಾವಿರ ಕ್ಯೂಸೆಕ್ಸ್‌ ನೀರನ್ನು ಕೆನಾಲ್ ಮೂಲಕ ಹರಿಸಲಾಗುತ್ತಿದೆ ಎಂದರು.

ತುಂಬಿದ ಭದ್ರೆ


ಮಲೆನಾಡು ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿರುವ ಪರಿಣಾಮ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ 50 ಸಾವಿರ ಕ್ಯೂಸೆಕ್ಸ್‌ ನೀರು ಹರಿದು ಬಂದಿದೆ ಎಂದು ಭದ್ರಾ ಅಣೆಕಟ್ಟಿನ ಮೂಲಗಳು ತಿಳಿಸಿವೆ.

ಇಂದಿನ ನೀರಿನ ಮಟ್ಟ

Date:20.09.2020
Bhadra damlevel 186′ 0 “
MSL:2158.00 ft
Capacity:71.535 TMC
Inflow:9336 cusecs
Total outflow: 5401 cusecs
RBC: 2425 avg., cusecs
LBC: 450 Cusecs
River sluices:50 cusecs
River bed: 1025 avg.,
Crest gate: 630 avg., Cusecs
UBP: 700 cusecs
Evaporation:121 cusecs
LastyearLevel:185’8¼”
Capacity:71.142 tmc
RF. : 38.0 mm

Exit mobile version