ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕಿ ಬಾತ್‌ನಲ್ಲಿ ಶಿವಮೊಗ್ಗದ ವಿನೋಬನಗರ ಉದ್ಯಮಿ ಸುರೇಶ್ ಭಟ್ ಹಾಗೂ ಮೈಥಿಲಿ ದಂಪತಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಸ್ಥಳೀಯ ಉತ್ಪನ್ನಗಳನ್ನೇ ಬಳಸಿಕೊಂಡು ಸ್ವಯಂ ಉದ್ಯೋಗದಲ್ಲಿ ಯಶಸ್ಸು ಕಂಡಿರುವ ದಂಪತಿಯನ್ನು ಮುಕ್ತಕಂಠದಿAದ ಶ್ಲಾಘಿಸಿದ್ದಾರೆ.
ಭೂಮಿ ಅಗ್ರಿ ವೆಂಚರ್ಸ್ ಸ್ಥಾಪಕ ಸುರೇಶ್ ಭಟ್ ಅಡಕೆ ಹಾಳೆಯಿಂದ ಅನೇಕ ಉತ್ಪನ್ನಗಳನ್ನು ಸಿದ್ಧಪಡಿಸಿ ವಿದೇಶಗಳಿಗೂ ರಫ್ತು ಮಾಡುತ್ತಿದ್ದಾರೆ. ಇದು ಹೆಮ್ಮೆಯ ಸಂಗತಿ. ಅಡಕೆ ಹಾಳೆಯಿಂದ ತಟ್ಟೆಗಳು, ಅಲಂಕಾರಿಕ ಉತ್ಪನ್ನ ತಯಾರಿಸುತ್ತಿದ್ದಾರೆ. ಅಡಕೆ ಹಾಳೆಯನ್ನು ಚಪ್ಪಲಿಗಳ ಉತ್ಪಾದನೆಗೂ ಬಳಸಿಕೊಳ್ಳುತ್ತಿದ್ದಾರೆ. ಸಗಟು, ಚಿಲ್ಲರೆ ವ್ಯಾಪಾರಿಗಳು ಮಾತ್ರವಲ್ಲದೆ ಬಹುರಾಷ್ಟ್ರೀಯ ಕಂಪನಿಗಳೊAದಿಗೂ ವ್ಯವಹರಿಸುತ್ತಿರುವುದು ಎಲ್ಲರಿಗೂ ಮಾದರಿ ಎಂದು ಮೋದಿ ಹೇಳಿದ್ದಾರೆ.
ಚರ್ಮ, ರಬ್ಬರ್ ಮುಂತಾದವುಗಳಿಗೆ ಪರ್ಯಾಯವಾಗಿ ಅಡಕೆ ಹಾಳೆ ಬಳಸಿ ಉತ್ಪನ್ನಗಳನ್ನು ಸಿದ್ಧಪಡಿಸುತ್ತಿರುವುದು ಇವರ ವಿಶೇಷ. 2015ರಿಂದಲೂ ಈ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಈ ದಂಪತಿ, ಸ್ವಸಹಾಯ ಸಂಘಗಳ ಮಹಿಳೆಯರನ್ನು ತೊಡಗಿಸುವ ಮೂಲಕ ಅನೇಕರಿಗೆ ಉದ್ಯೋಗವನ್ನೂ ನೀಡಿದ್ದಾರೆ. ಇಂಗ್ಲೆAಡ್ ಹಾಗೂ ನೆದರ್‌ಲೆಂಡ್‌ಗೆ ಉತ್ಪನ್ನಗಳು ರಫ್ತಾಗುತ್ತಿವೆ.