Site icon TUNGATARANGA

ಹೊಸ ವರ್ಷಾಚರಣೆಗೆ ಗಾಯನ ರಸಮಂಜರಿ, ಆಫೀಸರ್ಸ್ ಕ್ಲಬ್ ನಲ್ಲಿ ಸಿದ್ದತೆ: ಸಿಎಸ್ ಷಡಾಕ್ಷರಿ

ಶಿವಮೊಗ್ಗ,ಡಿ.25: ಸರ್ಕಾರಿ ನೌಕರರ ಸಂಘದಿಂದ ಬಸವನಗುಡಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಆಫಿಸರ್ಸ್‌ ಕ್ಲಬ್‌ನಲ್ಲಿ ಹೊಸ ವರ್ಷಾಚರಣೆಗೆ ನವ ಸಂವತ್ಸರ 2023 ವಿನೂತನ ಗಾಯನ ರಸಮಂಜರಿ ಕಾರ್ಯಕ್ರಮವನ್ನು ಡಿ.31ರಂದು ಹಮ್ಮಿಕೊಳ್ಳಲಾಗಿದೆ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ತಿಳಿಸಿದರು.


ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆಫಿಸರ್ಸ್‌ ಕ್ಲಬ್ ಸರ್ಕಾರಿ ನೌಕರರ ವೈವಿಧ್ಯಮಯ ಮನೋರಂಜನ ಕೇಂದ್ರವಾಗಿ ಆಧುನಿಕರಣಗೊಂಡಿದೆ. ಇನ್ನು ಹದಿನೈದು ದಿನದಲ್ಲಿ ಇದರ ಉದ್ಘಾಟನೆ ನೆರವೇರುವುದು, ಅಷ್ಟರೊಳಗೆ ಹೊಸವರ್ಷವನ್ನು ಸ್ವಾಗತಿಸುವ ನವ ಸಂವತ್ಸರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸಂಜೆ 7 ಗಂಟೆಗೆ ಆರಂಭವಾಗುವ ನವ ಸಂವತ್ಸರ ಕಾರ್ಯಕ್ರಮದಲ್ಲಿ ಗಾನ ಕೋಗಿಲೆ ಕೆ. ಯುವರಾಜ್, ಸರಿಗಮಪ ಖ್ಯಾತಿಯ ಸುಬ್ರಹ್ಮಣ್ಯ ( ಪೋಲೀಸ್), ದರ್ಶನ್, ಅಂಕಿತ ಕೊಂಡು ಇವರಿಂದ ಗಾಯನ, ಸಂದೀಪ್‌ರಿಂದ ಸ್ಯಾಕ್ಸೋಪೋನ್ ವಾದನ ಇರುವುದು.


ಸುಮಾರು 1 ಸಾವಿರ ಜನರಿಗೆ ಈ ಕಾರ್ಯಕ್ರಮಕ್ಕೆ ಪ್ರವೇಶ ಕಲ್ಪಿಸುವ ಉದ್ದೇಶ ಹೊಂದಿ ಸಿದ್ಧತೆ ನಡೆಸಲಾಗುತ್ತಿದೆ. ಸರ್ಕಾರಿ ನೌಕರರ ಕುಟುಂಬಗಳಿಗೆ ಮಾತ್ರ ಪ್ರವೇಶವಿದ್ದು, ಪ್ರತಿಯೊಬ್ಬರಿಗೆ 500ರೂ. ಪ್ರವೇಶ ಶುಲ್ಕವಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ, ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ. ಮಿಥುನ್ ಕುಮಾರ್, ಜಿ.ಪಂ. ಸಿಇಓ ಎನ್.ಡಿ. ಪ್ರಕಾಶ್ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಆಫಿಸರ್ಸ್‌ ಕ್ಲಬ್: ಡಿ.ಸಿ. ಕಾಂಪೌಂಡ್‌ಗೆ ಹೊಂದಿಕೊಂಡಿರುವ ಆಫಿಸರ್ಸ್‌ ಕ್ಲಬ್ 1ವರೆ ಎಕರೆ ಜಾಗದಲ್ಲಿ ವಿವಿಧ ಮನೋರಂಜನ ಕೇಂದ್ರವಾಗಿ ಅಭಿವೃದ್ಧಿಗೊಂಡಿದೆ.
ಇದರಲ್ಲಿ ಷಟಲ್ ಬ್ಯಾಡ್ಮಿಂಟನ್, ಕೇರಂ, ಚೆಸ್, ಟೇಬಲ್ ಟೆನ್ನಿಸ್, ಮಲ್ಟಿ ಜಿಮ್, ಮಕ್ಕಳ ಕ್ರೀಡೆಗಳು, ರೆಸ್ಟೋರೆಂಟ್, 6 ಕೊಠಡಿಗಳ ಅತಿಥಿಗೃಹ, ಮಿನಿ ಪಾರ್ಟಿ ಹಾಲ್ ಇದೆ. ಸರ್ಕಾರಿ ನೌಕರರು ಇಲ್ಲಿನ ಸದಸ್ಯತ್ವಕ್ಕೆ 50 ಸಾವಿರರೂ. ನೀಡಬೇಕು, ಇತರ ಸದಸ್ಯರಿಗೆ 1 ಲಕ್ಷ ರೂ.ಗಳ ಸದಸ್ಯತ್ವ ನೀಡುವ ಉದ್ದೇಶವಿದೆ ಈ ಬಗೆ ಅಂತಿಮ ತೀರ್ಮಾನವಾಗಿಲ್ಲ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಮುಖರಾದ ಅರುಣ್‌ಕುಮಾರ್ ಕೆ, ಕೃಷ್ಣಮೂರ್ತಿ, ಮಾರುತಿ ಮತ್ತಿತರರಿದ್ದರು

Exit mobile version