Site icon TUNGATARANGA

ಸರ್ಕಾರಿ ‌ನೌಕರರು  ಅಭಿಯಾನ ಯಶಸ್ವಿಯಾಗಿಸಿ: ಸಿ.ಎಸ್.ಷಡಾಕ್ಷರಿ

ಶಿವಮೊಗ್ಗ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ನಾಗರೀಕ ಸೌಲಭ್ಯಗಳ ಮಾಹಿತಿ ದಾಖಲೀಕರಣದ ಅರಿವು ಮೂಡಿಸುವ ಕಾರ್ಯಕ್ರಮ ನಡೆಯುತ್ತಿದ್ದು, ಎಲ್ಲ ವರ್ಗದ ಜನರು ಪಾಲ್ಗೊಳ್ಳುತ್ತಿದ್ದು, ನಗರ ವ್ಯಾಪ್ತಿಯಲ್ಲಿ ಇರುವ ಎಲ್ಲ ಸರ್ಕಾರಿ ನೌಕರರು ಪಾಲ್ಗೊಳ್ಳಬೇಕು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದರು.

     ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಶಿವಮೊಗ್ಗ ನಗರದ ನಾಗರಿಕ ಅಭಿಪ್ರಾಯ ಸಂಗ್ರಹಣೆಯ ಸಮೀಕ್ಷೆಯಲ್ಲಿ  ಭಾಗವಹಿಸಿ‌ ಮಾತನಾಡಿದರು.

     ವಿವಿಧ ಶೀರ್ಷಿಕೆಗಳಡಿ, ವಿವಿಧ ಇಲಾಖೆಗಳಡಿ ಇರುವ ಸೌಲಭ್ಯಗಳ ಪ್ರಗತಿ ಮೌಲ್ಯಮಾಪನ ಮಾಡಿ ಮುಖ್ಯ ನಗರಗಳ ಅಭಿವೃದ್ಧಿ ಸೂಚ್ಯಂಕವನ್ನು ಸಿದ್ಧಪಡಿಸಲಾಗುತ್ತಿದೆ. ನೌಕರರು ವೈಯಕ್ತಿಕವಾಗಿಯು‌ ಅಭಿಪ್ರಾಯ ದಾಖಲಿಸಬೇಕು ಎಂದು ತಿಳಿಸಿದರು. 

    ಶಿಕ್ಷಣ, ಆರೋಗ್ಯ, ವಸತಿ, ಘನತ್ಯಾಜ್ಯ ವಿಲೇವಾರಿ, ಸಾರಿಗೆ ವ್ಯವಸ್ಥೆ, ನಾಗರೀಕರ ಸುರಕ್ಷತೆ ಮತ್ತು ಭದ್ರತೆ, ಪರಿಸರ ಸಂರಕ್ಷಣ ಕ್ರಮಗಳು, ಮನೋರಂಜನೆ, ನಗರದ ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆ, ಆರ್ಥಿಕ ಅಭಿವೃದ್ಧಿಯ ಮಟ್ಟ, ಆರ್ಥಿಕ ಅಭಿವೃದ್ಧಿಯ ಅವಕಾಶಗಳು, ಹಸಿರೀಕರಣಗೊಂಡ ಪ್ರದೇಶಗಳು ಮತ್ತು ಹಸಿರೀಕರಣ ಅಳವಡಿಸಿದ ಕಟ್ಟಡಗಳು, ಇಂಧನ ಬಳಕೆ, ನಗರವು ಸವಾಲಿನ ಸನ್ನಿವೇಶದಲ್ಲಿ ಚೇತರಿಸಿಕೊಳ್ಳುವಿಕೆಯ ಮಟ್ಟ ಇತ್ಯಾದಿಗಳ‌ ಬಗ್ಗೆ ದಾಖಲಿಸಬೇಕು ಎಂದರು.

“ಸಾರ್ವಜನಿಕ ಭಾಗವಹಿಸುವಿಕೆ ಸಮೀಕ್ಷೆ” ಮೂಲಕ ಶಿವಮೊಗ್ಗ ನಗರದ ನಾಗರೀಕರು ತಮ್ಮ ನಗರದಲ್ಲಿ ಲಭ್ಯ ಸೌಲಭ್ಯಗಳ ಬಗ್ಗೆ ದಾಖಲಿಸಲು ಅವಕಾಶ ಮಾಡಲಾಗಿದೆ. ಇದರಿಂದ “ಸಾರ್ವಜನಿಕ ಭಾಗವಹಿಸುವಿಕೆ ಸಮೀಕ್ಷೆ” ಜೀವನ ಗುಣಮಟ್ಟ ಸೌಕರ್ಯ ಕುರಿತು ಮಾಹಿತಿ ಸಂಗ್ರಹಣ ತಯಾರಿಸುವಾಗ ಶೇಕಡ 30 ಅಂಕಗಳು ಲಭ್ಯವಾಗುತ್ತದೆ ಎಂದು ತಿಳಿಸಿದರು.

   ಈ ಸಂದರ್ಭದಲ್ಲಿ ಸ್ಮಾರ್ಟ್ ಸಿಟಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಬ್ರಿಜೀಟ್ ವರ್ಗೀಸ್, ಸಮನ್ವಯ ಕಾಶಿ  ನಿರ್ವಾಹಕ ನಿರ್ದೇಶಕರಾದಂತಹ ಸಮನ್ವಯ ಟ್ರಸ್ಟ್ ಹಾಗೂ ಇತರರು ಉಪಸ್ಥಿತರಿದ್ದರು.

Exit mobile version