ಶಿವಮೊಗ್ಗ.
ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಒಕ್ಕೂಟ(ಶಿಮುಲ್)ದಿಂದ ಇಂದಿನಿಂದ ಒಂದು ತಿಂಗಳ ಕಾಲ ನಂದಿನಿ ಸಿಹಿ ಉತ್ಸವವನ್ನು ಆಯೋಜಿಸಲಾಗಿದ್ದು, ನಂದಿನಿಯ ಎಲ್ಲಾ ಸಿಹಿ ಉತ್ಪನ್ನಗಳ ಮೇಲೆ ಶೇ.20ರಷ್ಟು ರಿಯಾಯಿತಿ ಲಭ್ಯವಿದ್ದು, ಜಿಲ್ಲಾ ಪಂಚಾಯತ್ ಆವರಣದಲ್ಲಿರುವ ನಂದಿನಿ ಮಿಲ್ಕ್ ಪಾರ್ಲರ್‌ನಲ್ಲಿ ಸಿಹಿ ಉತ್ಸವಕ್ಕೆ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಂದಿನಿ ಉತ್ಪನ್ನಗಳು ರಾಷ್ಟ್ರದಲ್ಲೇ ಹೆಸರುವಾಸಿಯಾಗಿದೆ. ಯಾವುದೇ ಹೊಸ ಉತ್ಪನ್ನಗಳು ಹೊರಬಂದರು ಒಂದು ತಿಂಗಳ ಕಾಲ ಶಿಮುಲ್‌ನಿಂದ ರಿಯಾಯಿತಿ ಘೋಷಿಸಲಾಗಿದೆ. ಅದೇ ರೀತಿ ಸರ್ಕಾರಿ ಸಮಾರಂಭ ಗಳಲ್ಲಿ ನಂದಿನಿ ಉತ್ಪನ್ನಗಳನ್ನು ಬಳಸುವಂತೆ ಶಿಮುಲ್ ಬೇಡಿಕೆಯನ್ನು ಪುರಸ್ಕರಿಸಿ ಜಿಲ್ಲೆಯೊಳಗೆ ಸೂಚನೆ ಕೂಡ ನೀಡುತ್ತೇನೆ. ಗ್ರಾಹಕರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ ರೈತರಿಗೆ ಹೆಚ್ಚಿನ ನೆರವು ಶಿಮುಲ್ ಸಂಸ್ಥೆಯಿಂದ ಸಿಗುವುದರಿಂದ ಸಾರ್ವಜ ನಿಕರು ನಂದಿನಿ ಉತ್ಪನ್ನಗಳನ್ನೇ ಖರೀದಿಸುವಂತೆ ಜಿಲ್ಲಾಧಿಕಾರಿಗಳು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ತೊಗಲಬಾವಿ, ಶಿಮುಲ್ ಅಧ್ಯಕ್ಷರಾದ ಶ್ರೀಪಾದ್‌ರಾವ್ ನಿಸರಾಣಿ, ವಿಭಾಗ ನಿರ್ದೇಶಕರಾದ ಬುಳ್ಳಾಪುರ ದಿನೇಶ್, ವ್ಯವಸ್ಥಾಪಕ ನಿರ್ದೇಶಕರಾದ ಬಸವರಾಜ್, ಮಾರ್ಕೆಟಿಂಗ್ ಮ್ಯಾನೇಜರ್ ಹೆಚ್.ಎಂ.ಮೂರ್ತಿ, ವಾಣಿಜ್ಯ ಕೈಗಾರಿಕಾ ಸಂಘದ ನಿರ್ದೇಶಕರಾದ ವಾಸುದೇವ್ ಹಾಗೂ ನಂದಿನಿ ಬೂತ್‌ನ ಫ್ರಾಂಚೈಸಿದಾರರು ಉಪಸ್ಥಿತರಿದ್ದರು.