Site icon TUNGATARANGA

ಸೋನಿಯ ಗಾಂಧಿ ಹುಟ್ಟುಹಬ್ಬದ ಅಂಗವಾಗಿ ಬಡವರಿಗೆ ಉಚಿತ ಅರೋಗ್ಯ ಶಿಬಿರದ ಮೂಲಕ ಆಚರಿಸಿದ ಕಾಂಗ್ರೆಸ್

ನಿನ್ನೆ ನಗರದ ಸೈನ್ಸ್ ಕಾಲೇಜಿನ ಆವರಣದಲ್ಲಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಹಾಗೂ ಜಿಲ್ಲಾ ಕಾಂಗ್ರೆಸ್ ವೈದ್ಯ ಘಟಕದ ಅಧ್ಯಕ್ಷರಾದ ಡಾ.ಪ್ರದೀಪ್ ಡಿಮೆಲ್ಲೋ ಸಹಭಾಗಿತ್ವದಲ್ಲಿ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಲಿಸ್ಟ್ ಆಸ್ಪತ್ರೆ, ಶಂಕರ ಕಣ್ಣಿನ ಆಸ್ಪತ್ರೆ, ಮಲ್ನಾಡ್ ಆಸ್ಪತ್ರೆ, ಹೈಲೇಟ್ಸ್ ಡಯಾಬಿಟಿಸ್ ಆಸ್ಪತ್ರೆ, ಶರಾವತಿ ಡೆಂಟಲ್ ಆಸ್ಪತ್ರೆ, ಆಸರ ಬೆಂಗಳೂರು ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣೆ ನಡೆಯಿತು.


ಸೋನಿಯಾ ಗಾಂಧಿಯವರ ಹುಟ್ಟು ಹಬ್ಬವನ್ನು ಮಾಜಿ ಸಚಿವ ಕಾಗೋಡು ತಿಮ್ಮಪ್ಪನವರ ಉಪಸ್ಥಿತಿಯಲ್ಲಿ ಕೇಕ್ ಕಟ್‌ಮಾಡಿ ವಿವಿಧ ಸಾಮಾಜಿಕ ಚಟುವಟಿಕೆಗಳ ಮೂಲಕ ಆಚರಿಸಲಾಯಿತು. ಆರೋಗ್ಯ ತಪಾಸಣಾ ಶಿಬಿರದಲ್ಲಿ ರಕ್ತದಾನ ಶಿಬಿರ, ನೇತ್ರದಾನ ಶಿಬಿರ, ಹೃದಯ ಸಂಬಂಧಿತ ಖಾಯಿಲೆಗಳ ತಪಾಸಣೆ ಹಾಗೂ ಚಿಕಿತ್ಸೆ, ದಂತ ವೈದ್ಯಕೀಯ ತಪಾಸಣೆ ಹಾಗೂ

ಚಿಕಿತ್ಸೆ, ಮಧುಮೇಹ, ರಕ್ತದೊತ್ತಡ, ಚರ್ಮರೋಗ, ಮೂಗು,ಗಂಟಲು ತೊಂದರೆಗಳ ತಪಾಸಣೆ ಹಾಗೂ ಚಿಕಿತ್ಸೆ, ಸ್ತ್ರೀರೋಗ ಮತ್ತು ಚರ್ಮರೋಗ ತಜ್ಞರಿಂದ ತಪಾಸಣೆ ಮತ್ತು ಚಿಕಿತ್ಸೆ, ಇಸಿಜಿ ಮತ್ತು ಎಕೋ ಟೆಸ್ಟ್ ಪರೀಕ್ಷೆ ಮುಂತಾದ ಅನೇಕ ಆರೋಗ್ಯಕ್ಕೆ ಸಂಬಂಧಿಸಿದ ತಪಾಸಣೆ ಮತ್ತು ಚಿಕಿತ್ಸೆಯನ್ನು ನೀಡಲಾಯಿತು ಹಾಗೂ ಉಚಿತ ಔಷಧವನ್ನು ನೂರಾರು ಜನರಿಗೆ ನೀಡಲಾಯಿತು. ಅಗತ್ಯವಿರುವವರಿಗೆ ರಿಯಾಯಿತಿ ದರದಲ್ಲಿ ಹೆಚ್ಚಿನ ಚಿಕಿತ್ಸೆಗೆ ಶಿಫಾರಸ್ಸು ಮಾಡಲಾಯಿತು.


ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕರಾದ ಆರ್.ಪ್ರಸನ್ನಕುಮಾರ್, ಪ್ರಮುಖರಾದ ಇಸ್ಮಾಯಿಲ್‌ಖಾನ್, ಎನ್.ರಮೇಶ್, ಕಲಗೋಡು ರತ್ನಾಕರ್, ಪಲ್ಲವಿ, ಚಂದ್ರಶೇಖರ್,ಕವಿತರಾಘವೇಂದ್ರ, ಸ್ಟೆಲಾಮಾರ್ಟಿನ್, ಡಾ.ರಾಘವೇಂದ್ರ, ತಂಗರಾಜ್, ಸೌಗಂಧಿಕ, ಪ್ರವೀಣ್‌ಕುಮಾರ್ ಮತ್ತಿತರರಿದ್ದರು.

Exit mobile version