Site icon TUNGATARANGA

ಗೃಹಸಚಿವರ ತವರು ತೀರ್ಥಹಳ್ಳಿ ಡಿವೈಎಸ್ಪಿ ಆಗಿ ಗಜಾನನ ವಾಮನ, ಶಾಂತವೀರ ಅವರಿಗೆ ಜಮಖಂಡಿ


ಶಿವಮೊಗ್ಗ,ಡಿ.18:
ಕರ್ನಾಟಕ ರಾಜ್ಯ ಸರ್ಕಾರ 45 ಡಿವೈಎಸ್ಪಿ ಹಾಗೂ ಎಂಟು ಜನ ಪೊಲೀಸ್ ಇನ್ಸ್ಪೆಕ್ಟರ್ ಗಳನ್ನು ವರ್ಗಾವಣೆ ಮಾಡುವ ಜೊತೆಗೆ 9 ಹೆಚ್ಚುವರಿ ಪೋಲಿಸ್ ಅಧಿಕ್ಷಕರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.


ಆಡಳಿತಾತ್ಮಕ ಬದಲಾವಣೆ ಹಾಗೂ ತ್ವರಿತ ಗತಿಯ ಕಾರ್ಯಕ್ಕೆ ಈ ಬದಲಾವಣೆಯನ್ನು ಮಾಡಲಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಉಪಭಾಗದ ಡಿವೈಎಸ್ಪಿ ಈ ಶಾಂತವೀರ ಅವರನ್ನು ಜಮಖಂಡಿ ಉಪ ವಿಭಾಗದ ಡಿವೈಎಸ್ಪಿ ಆಗಿ ವರ್ಗಾಯಿಸಿದೆ.
ಸಿಐಡಿ ಯಲ್ಲಿ ಡಿವೈಎಸ್ಪಿ ಯಾಗಿದ್ದ ಗಜಾನನ ವಾಮನ ಅವರನ್ನು ತೀರ್ಥಹಳ್ಳಿ ಉಪ ವಿಭಾಗಕ್ಕೆ ಬದಲಾಯಿಸಿದೆ‌.


ಇನ್ನು ಪೊಲೀಸ್ ಇನ್ಸ್ ಸ್ಪೆಕ್ಟರ್ ಗಳಲ್ಲಿ ಎಂಟು ಅಧಿಕಾರಿಗಳನ್ನು ವರ್ಗಾಯಿಸಿದ್ದು, ಕಾರ್ಗಲ್ ಪೊಲೀಸ್ ಇನ್ಸ್ಪೆಕ್ಟರ್ ಕೃಷ್ಣಪ್ಪ ಕೆ ವಿ ಅವರ ಹಿಂದಿನ ವರ್ಗಾವಣೆ ಆದೇಶದ ಟಿ ನರಸೀಪುರ ಆದೇಶವನ್ನು ರದ್ದುಗೊಳಿಸಲಾಗಿದೆ. ಹಾಗಾಗಿ ಕೃಷ್ಣಪ್ಪ ಅವರು ಕಾರ್ಗಲ್ ಇನ್ಸ್ಪೆಕ್ಟರ್ ಆಗಿ ಮುಂದುವರೆಯಲಿದ್ದಾರೆ.

Exit mobile version