Site icon TUNGATARANGA

ಜ.5ರಂದು ಅತ್ಯುತ್ತಮ ತನಿಖಾ ಕೇಂದ್ರ ಗೃಹಮಂತ್ರಿಗಳ ಪ್ರಶಸ್ತಿಯನ್ನು ಸ್ವೀಕರಿಸಲಿರುವ ಶಿವಮೊಗ್ಗ DYSP ಬಾಲರಾಜ್

ಶಿವಮೊಗ್ಗ, ಡಿ.17:

ಶಿವಮೊಗ್ಗ ಉಪ ವಿಭಾಗದ ಡಿವೈಎಸ್ಪಿ ಹಾಗೂ ಪೊಲೀಸ್ ಅಧಿಕಾರಿ ಎಂಬ ಗತ್ತಿಲ್ಲದೆ ಮಾನವೀಯ ನೆಲೆಗಟ್ಟಿನಲ್ಲಿ ಕರ್ತವ್ಯ ನಿರ್ವಹಿಸುವ ಹಾಗೂ ಅಷ್ಟೇ ಕಟೋರವಾಗಿ ಅಪರಾಧ ಚಟುವಟಿಕೆಗಳನ್ನು ಹತ್ತಿಕ್ಕುವ ಬಿ. ಬಾಲರಾಜ್ ಅವರು ಬರುವ 2023ರ ಜನವರಿ 5ರಂದು ಕೇಂದ್ರ ಗೃಹ ಮಂತ್ರಿಗಳು ಕೊಡ ಮಾಡಿರುವ ದೇಶದ ಅತ್ಯುತ್ತಮ ತನಿಖಾ ರಾಷ್ಟ ಮಟ್ಟದ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.


ಬರುವ ಜನವರಿ 5ರಂದು ಬೆಂಗಳೂರಿನ ಕೆಎಸ್‌ಆರ್‌ಪಿ ಮೂರನೇ ಪಡೆ, ಕೋರಮಂಗಲದ ಸಭಾಂಗಣದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಹಾಗೂ ರಾಜ್ಯಪಾಲರು ಮತ್ತು ಗೃಹ ಸಚಿವರು ನೀಡುವರೆನ್ನಲಾದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ರಾಷ್ಟ್ರದ ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಎನ್ನುವ ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ ಎಂದು ತಿಳಿದು ಬಂದಿದೆ.


ಶಿವಮೊಗ್ಗ ಎಂದರೆ ಬಿ.ಬಾಲರಾಜ್ ಅವರಿಗೆ ಒಂದಿಷ್ಟು ಪ್ರೀತಿ. ಹಾಗೆಯೇ ಶಿವಮೊಗ್ಗ ತೀರ್ಥಹಳ್ಳಿ ಸೇರಿದಂತೆ ಹಲವೆಡೆ ಹಿಂದೆಯೂ ಪೊಲೀಸ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಹಾಗೆಯೇ ಶಿವಮೊಗ್ಗ ಜನಮಾನಸದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದು ಮತ್ತು ಅಕ್ರಮ ಚಟುವಟಿಕೆಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತಿದ್ದ ಬಾಲರಾಜ ಶಿವಮೊಗ್ಗ ಉಪ ವಿಭಾಗದ ಡಿವೈಎಸ್ಪಿ ಯಾಗಿ ಸೇವೆ ಸಲ್ಲಿಸುತ್ತಿರುವಾಗ ಈ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯುತ್ತಿರುವುದು ಶಿವಮೊಗ್ಗ ಜಿಲ್ಲೆಯ ಜನರ ಪ್ರೀತಿಗೆ ಕಾರಣವಾಗಿದೆ.


ಕೇಂದ್ರದ ಗೃಹ ಸಚಿವರಾಗಿ ಅಮಿತ್ ಶಾ ಅವರು ಅಧಿಕಾರ ಸ್ವೀಕರಿಸಿದ ನಂತರ ಪೊಲೀಸರು ತನಿಖಾ ವಿಷಯದಲ್ಲಿ ಕೈಗೊಳ್ಳಬಹುದಾದ ಉತ್ತಮ ಸೇವೆಯನ್ನು ಗುರುತಿಸಿ ಗೌರವಿಸಲು ಕೇಂದ್ರ ಸರ್ಕಾರದಿಂದ “ಯೂನಿಯನ್ ಹೋಂ ಮಿನಿಸ್ಟರ್ ಮಾಡೆಲ್ ಫಾರ್ ಎಕ್ಸಲೆನ್ಸಿ ಇನ್ ಇನ್ವೆಸ್ಟಿಗೇಷನ್ ” ಅಂದರೆ ಅತ್ಯುತ್ತಮ ತನಿಖೆಯ ಆಧಾರದಲ್ಲಿ ಪ್ರಶಸ್ತಿ ನೀಡಲು ನಿರ್ಧರಿಸಿ 2018ರ ಹೊತ್ತಿನಲ್ಲಿ ನಿರ್ಧರಿಸಿದ್ದರು.


ಇಡೀ ದೇಶದ ಪೊಲೀಸ್ ಇಲಾಖೆಯ ಅತ್ಯುತ್ತಮ ತನಿಖೆಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಗುರುತಿಸಿ, ಗೌರವಿಸುವ ಹಿನ್ನೆಲೆಯಲ್ಲಿ ಸಮೀಕ್ಷೆ ನಡೆಸಿ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಹಮ್ಮಿಕೊಳ್ಳಲು ಯೋಚಿಸಿದ್ದರು ಅ ಮೊದಲ ಪ್ರಶಸ್ತಿ ಬಾಲರಾಜ್ ಸೇರಿದಂತೆ ಇಬ್ಬರು ಎಸ್ಪಿ ಹಾಗೂ ಮೂವರು ಡಿವೈಎಸ್ ಪಿ, ಓರ್ವ ಸಿಪಿಐ ಸೇರಿ ರಾಜ್ಯದ ಆರು ಅಧಿಕಾರಿಗಳಿಗೆ ಈ ಪುರಸ್ಕಾರ ಸಿಕ್ಕಿದೆ.
ಕೊರೋನಾ ಹಿನ್ನೆಲೆಯಲ್ಲಿ ಈ ಪ್ರಶಸ್ತಿ ಪ್ರಧಾನ ಸಮಾರಂಭಗಳು ಹಿಂದೆ ನಡೆದಿರಲಿಲ್ಲ. ಹಾಗೆಯೇ 2018 ರಿಂದ ಇಂದಿನವರೆಗೆ ಪ್ರಶಸ್ತಿ ಪಡೆದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಗೌರವಿಸಲು ನಿರ್ಧರಿಸಲಾಗಿದೆ.


ಶಿವಮೊಗ್ಗ ಡಿವೈಎಸ್ಪಿ ಆಗಿರುವ ಬಾಲರಾಜ್ ಅವರು 2018 ಹಾಗೂ 19ರ ಸಾಲಿನ ರಾಷ್ಟ್ರದ ಅತ್ಯುತ್ತಮ ತನಿಖಾಧಿಕಾರಿ ವಿಷಯದ ಅಮೂಲ್ಯ ಪ್ರಶಸ್ತಿಯನ್ನು ಪಡೆದಿದ್ದಾರೆ. ಅವರು ಈ ಪ್ರಶಸ್ತಿಯನ್ನು ಬರುವ 2023ರ ಜನವರಿ ಐದರಂದು ಸ್ವೀಕರಿಸಲಿದ್ದಾರೆ

Exit mobile version