Site icon TUNGATARANGA

ಕುಡ್ಕೊಂಡ್ ಮನೆಗೆ ನೆಡ್ಕೊಂಗೋಗಿ…!, ಪೊಲೀಸರಿಂದ ಡ್ರಿಂಕ್ & ಡ್ರೈವ್ ಅಸಾಮಿಗಳ ವಿರುದ್ದ ಕೇಸ್


Shimoga Special News/TungaTaranga Daily: 17-12-2022


ಎಣ್ಣೆ ಹೊಡಿಯೋದು ನಿಮ್ಮಿಷ್ಟ ಆದರು ಸಹ ಎಣ್ಣೆ ಹೊಡೆದ್ಮೇಲೆ ನಿಮ್ಮ ವಾಹನದಲ್ಲಿ ನೀವು ಬರುವಂತಿಲ್ಲ ಇದು ಕಾನೂನು ಪ್ರಕಾರ ಅಕ್ರಮ.
ಇಂತಹ ಪ್ರಕರಣಗಳು ಅಪಘಾತಗಳನ್ನು ಹೆಚ್ಚಿಸುತ್ತವೆಯಲ್ಲವೇ? ಇಂತಹ ಘಟನೆಗಳಿಂದ ಸಮಾಜದಲ್ಲಿ ನಾನಾ ಅವಘಡಗಳು ಸಂಭವಿಸುತ್ತವೆ ಅಲ್ಲವೇ ?
ಈ ಪೀಠಿಕೆ ಯಾಕೆ ಎಂದು ಯೋಚಿಸುತ್ತಿದ್ದೀರಾ? ನಿನ್ನೆ ರಾತ್ರಿ ಶಿವಮೊಗ್ಗ ಜಿಲ್ಲೆಯ ಪೊಲೀಸರು ವಿಶೇಷವಾಗಿ ಈ ಬಗ್ಗೆ ಗಮನಹರಿಸಿ ಮಧ್ಯಪಾನ ಮಾಡಿ ವಾಹನ ಚಲಾಯಿಸುವವರನ್ನು ಹುಡುಕಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಂಡಿರುವ ಘಟನೆ ವರದಿಯಾಗಿದೆ.
ನಿನ್ನೆ ಒಂದೇ ದಿನ ಶಿವಮೊಗ್ಗ ಭದ್ರಾವತಿ ಸಾಗರ ತೀರ್ಥಹಳ್ಳಿ ಹಾಗೂ ಶಿಕಾರಿಪುರ ಪೊಲೀಸ್ ಉಪ ವಿಭಾಗ ನಡೆಸಿದ ದಾಳಿಯಲ್ಲಿ 46 ಜನರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.


ವಿವರ: ದಿನಾಂಕ: 16-12-2022 ರಂದು ಸಂಜೆ ಶಿವಮೊಗ್ಗ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಒಟ್ಟು 20 Check Post ಗಳನ್ನು ಹಾಕಿ ವಾಹನಗಳ ತಪಾಸಣೆಯನ್ನು ಮಾಡಲಾಯಿತು ಮತ್ತು ಮಧ್ಯಪಾನ ಮಾಡಿ ವಾಹನ ಚಾಲನೆ ಮಾಡುವ ಚಾಲಕರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿ ಶಿವಮೊಗ್ಗ ವಿಭಾಗ -16, ಭದ್ರಾವತಿ ಉಪ ವಿಭಾಗ – 03, ಸಾಗರ ಉಪ ವಿಭಾಗ – 06, ಶಿಕಾರಿಪುರ ವಿಭಾಗ – 05 ಮತ್ತು ತೀರ್ಥಹಳ್ಳಿ ಉಪ ವಿಭಾಗ – 16 ಸೇರಿದಂತೆ ಒಟ್ಟು 46 Drunk and Drive ಪ್ರಕರಣಗಳನ್ನು ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದ ಚಾಲಕರ ವಿರುದ್ಧ ದಾಖಲಿಸಲಾಗಿದೆ.

Exit mobile version