ಶಿವಮೊಗ್ಗ,ಡಿ.15:
ಇಲ್ಲಿನ ವಿನೋಬನಗರ ಸಾಯಿಬಾಬಾ ಮಂದಿರದ ನಿರ್ಮಾತೃ ಹಾಗೂ ಪೋಲಿಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿ ಸ್ವಯಂ ನಿವೃತ್ತಿ ಪಡೆದಿದ್ದ ASI ಕೃಷ್ಣಮೂರ್ತಿ ಅವರು ಇಂದು ಶಿವಮೊಗ್ಗದ ಮೆಟ್ರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ.
ಅವರಿಗೆ 61 ವರ್ಷ ವಯಸ್ಸಾಗಿತ್ತು. ಅವರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಮತ್ತು ಸ್ನೇಹಿತರನ್ನು ಬಿಟ್ಟು ಅಗಲಿದ್ದಾರೆ.
ಪೊಲೀಸ್ ಇಲಾಖೆಯಲ್ಲಿ ಸುಮಾರು 20 ವರ್ಷಗಳ ಕಾಲ ಸೇವೆ ಸಲ್ಲಿಸಿ, ಸಾಗರ ಪೊಲೀಸ್ ಠಾಣೆಯಲ್ಲಿ ಸ್ವಯಂ ನಿವೃತ್ತಿ ಪಡೆದಿದ್ದರು. ಮೊದಲಿನಿಂದಲೂ ದೈವ ಭಕ್ತರಾಗಿದ್ದ ಅವರು ನಿವೃತ್ತಿ ನಂತರ ದಿನಗಳಲ್ಲಿ ಸಾಯಿಬಾಬಾರ ಭಕ್ತರಾಗಿದ್ದು, ಅವರ ಭಕ್ತಿಗೆ ಪೂರಕವಾಗಿ ವಿನೋಬನಗರದ ಶುಭ ಮಂಗಳ ಕಲ್ಯಾಣ ಮಂದಿರಕ್ಕೆ ಹೋಗುವ ರಸ್ತೆಯಲ್ಲಿ ಸುಂದರವಾದ ಸಾಯಿಬಾಬಾ ದೇಗುಲವನ್ನು ಹಾಗೂ ಸಾಯಿಬಾಬರನ್ನು ಪ್ರತಿಷ್ಠಾಪಿಸಿದ್ದರು.
ಈಗಲೂ ಅಲ್ಲಿಗೆ ನಿರಂತರ ಅಪಾರ ಭಕ್ತರು ಆಗಮಿಸುತ್ತಾರೆ. ಅವರ ಅಂತ್ಯಕ್ರಿಯೆ ಇಂದು ಸಂಜೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಅವರ ಮನೆಯಲ್ಲಿ ಸಂಜೆಯೊಳಗೆ ಅಂತಿಮ ದರ್ಶನಕ್ಕೆ ಅವಕಾಶವಿದೆ.