ಶಿವಮೊಗ್ಗ
ಜಿಲ್ಲೆಯ ವಿವಿಧ ಗೃಹರಕ್ಷಕ ದಳದ ಘಟಕಗಳಲ್ಲಿ ಖಾಲಿ ಇರುವ ಸೇವೆಗಳನ್ನು ಸಲ್ಲಿಸು ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳನ್ನು ಗೃಹರಕ್ಷಕ ಸದಸ್ಯರನ್ನಾಗಿ ನೋಂದಾಯಿಸುವ ಸಂಬಂಧ ಡಿಸೆಂಬರ್ 17 ರಂದು ಆಯ್ಕೆ ಸಮಿತಿಯಿಂದ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಆಯ್ಕೆ ಸಂದರ್ಶನವು ಡಿ.17 ರ ಬೆಳಿಗ್ಗೆ 9.30 ರಿಂದ ಸಂಜೆ 5 ಗಂಟೆವರೆಗೆ ನಗರದ ಸಾಗರ ರಸ್ತೆಯ ಡಿ.ಎ.ಆರ್ ಕವಾಯತು ಮೈದಾನ ಇಲ್ಲಿ ನಡೆಯಲಿದೆ. ಆಯ್ಕೆ ಸಮಿತಿಯಲ್ಲಿ ಜಿಲ್ಲಾ ರಕ್ಷಣಾಧಿಕಾರಿಗಳು, ಅಪರ ಜಿಲ್ಲಾಧಿಕಾರಿಗಳು,
ಡಿಡಿಪಿಐ ಮತ್ತು ಜಿಲ್ಲಾ ಸಮಾದೇಷ್ಟರು ಆಯ್ಕೆ ಸಮಿತಿಯಲ್ಲಿ ಇರುವರು. ಆ ದಿನ ಅಭ್ಯರ್ಥಿಗಳು ಮೂಲ ದಾಖಲಾತಿಗಳೊಂದಿಗೆ ಹಾಜರಾಗಲು ಸೂಚಿಸಿದೆ. ಹೆಚ್ಚಿನ ಮಾಹಿತಿಗೆ ಜಿಲ್ಲಾ ಕಚೇರಿ ದೂ.ಸಂ; 08182-295630 ನ್ನು ಸಂಪರ್ಕಿಸಬಹುದೆಂದು ಗೃಹರಕ್ಷಕ ದಳ ಕಚೇರಿ ಜಿಲ್ಲಾ ಸಮಾದೇಷ್ಟರು ತಿಳಿಸಿದ್ದಾರೆ.