ಶಿವಮೊಗ್ಗ, ಡಿ.14:
ಅಧಿಕಾರ ಎಂಬುದಕ್ಕಿಂತ ಆತ್ಮೀಯತೆ, ಸರಳತೆ ಹಾಗೂ ವಿಶ್ವಾಸಾರ್ಹತೆಗೆ ಬದ್ಧರಾದ ಶಿವಮೊಗ್ಗದ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರಾದ ಡಿ ಎಚ್ ಶಂಕರಮೂರ್ತಿ ಅವರ ಪುತ್ರ ಅದೇ ಸರಳತೆ, ಸೌಜನ್ಯ, ಪ್ರೀತಿ, ವಿಶ್ವಾಸದ ಮೂಲಕ ಎಲ್ಲರ ಗಮನ ಸೆಳೆದ ಡಿ.ಎಸ್. ಅರುಣ್ ಅವರು ವಿಧಾನ ಪರಿಷತ್ ಶಾಸಕರಾಗಿ ಇಂದಿಗೆ ಒಂದು ವರ್ಷ ಪೂರೈಸಿದ ಸಂಭ್ರಮ.
ಕಾಂಗ್ರೆಸ್‌ಗೆ ಮುಸ್ಲಿಂ ಒಟಿನ ಬಗ್ಗೆ ಈಗ ಭಯ ಶುರು / . ಬಿಜೆಪಿಗೆ ಆ ಭಯವಿಲ್ಲ. ಹಿಂದುತ್ವದ ಮೇಲೆಯೇ ಬಿಜೆಪಿ ಹೋರಾಟ ಮಾಡಿ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ: ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ https://tungataranga.com/?p=16951 ಇದನ್ನೂ ಓದಿ
ಡಿ.23 ರಂದು ಮಕ್ಕಳ ಸಾಹಿತ್ಯ ಸಮ್ಮೇಳನ https://tungataranga.com/?p=16942
ಕೊಟ್ಟಿರುವ 👆👆ಲಿಂಕ್ ಬಳಸಿ ಸಂಪೂರ್ಣ ಸುದ್ದಿ ಓದಿ
ತಂದೆ ವಿಧಾನಪರಿಷತ್ ನ ಸಭಾಪತಿಯಾಗಿ ಕಾರ್ಯನಿರ್ವಹಿಸುತ್ತಿದ್ದರೂ ಸಹ ತಮ್ಮಷ್ಟಕ್ಕೆ ತಾವು ಜನಸ್ನೇಹಿಯಾಗಿ ಗೆಳೆಯರ ಬಳಗದೊಂದಿಗೆ ಸಿಗುವ ಸರ್ಕಾರದ ಅನುದಾನಗಳಲ್ಲಿ ಬಡವರ ನೊಂದವರ ಹಿಂದುಳಿದ ಗ್ರಾಮಗಳ ಅಭಿವೃದ್ಧಿಗೆ ಮುಂದಾಗುವಂತಹ ಕಾರ್ಯಕ್ರಮಗಳಿಗೆ ಸಹಾಯ ನೀಡುತ್ತಿದ್ದ ಡಿಎಸ್ ಅರುಣ್ ಅವರು ಹೆಚ್ಚಾಗಿ ಬೆಳೆದದ್ದು ಜಿಲ್ಲೆಯ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿಶೇಷವಾಗಿ ಸಂಗೀತ ಸಾಹಿತ್ಯದ ನೂತನ ಆವಿಷ್ಕಾರಗಳ ಚಿತ್ರರೂಪಣೆಯ ಪ್ರತಿಭೆಗಳನ್ನು ಗುರುತಿಸುವಲ್ಲಿ ಯಶಸ್ವಿಯಾಗಿದ್ದರು.
ಕ್ರೀಡಾರಂಗಕ್ಕೂ ಸಾಕಷ್ಟು ಯಶಸ್ವಿ ಎನಿಸುವಂತಹ ಕಾರ್ಯಕ್ರಮದ ಮುಂದಾಳತ್ವ ವಹಿಸಿದ್ದರು. ಹಿಂದೆ ಶಿವಮೊಗ್ಗ ಜಿಲ್ಲೆ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷರಾಗಿ ಜಿಲ್ಲೆಯ ಎಲ್ಲಾ ವಾಣಿಜ್ಯೋದ್ಯಗಳಿಗೆ ಹಾಗೂ ಜಿಲ್ಲೆಯ ಅಭಿವೃದ್ಧಿಗೆ ಅನುಕೂಲವಾಗುವಂತಹ ಹತ್ತಾರು ಮಹತ್ತರ ಯೋಜನೆಗಳನ್ನು ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈಗಲೂ ಬೆಳ್ಳಿ ಮಂಡಲ ಹಾಗೂ ಕ್ರಿಕೇಟ್ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಡಿಎಸ್ ಅರುಣ್ ಅವರು ಆರ್ಥಿಕವಾಗಿ ಸದೃಢರಾಗಿದ್ದು, ಶಕ್ತಿ ಮೀರಿ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಲು ನೆರವಾಗಿದ್ದಾರೆ. ಸರ್ಕಾರದ ಸವಲತ್ತುಗಳನ್ನು ಅನುದಾನವನ್ನು ನೊಂದ ಹಾಗೂ ಹಿಂದುಳಿದ ಜನಗಳಿಗೆ ಸಮುದಾಯದ ತಳಮಟ್ಟದ ನೊಂದವರಿಗೆ ಕೊಡಿಸಿದ, ಕೊಡಿಸುವ ಉದ್ದೇಶದಿಂದಲೇ ಕರ್ತವ್ಯ ನಿರ್ವಹಿಸುತ್ತಾರೆ. ಶಿವಮೊಗ್ಗ ವಿಧಾನಪರಿಷತ್ ಚುನಾವಣೆಯಲ್ಲಿ ತಂದೆಯ ನಂತರದ ಚುನಾವಣೆಗೆ ಬಿಜೆಪಿ ಟಿಕೆಟ್ ನೀಡದಿದ್ದಾಗಲೂ ಬೇಸರ ವ್ಯಕ್ತಪಡಿಸದ ಅವರು ಪಕ್ಷದ ಪರವಾಗಿ ಕೆಲಸ ಮಾಡಿದ್ದರು.
ಅವರಿಗೆ ಅದೃಷ್ಟವೆಂಬುದಕ್ಕಿಂತ ಹೆಚ್ಚಾಗಿ ಅವರ ಅರ್ಹತೆ ಆಧಾರದ ಮೇಲೆ ಜನ ಪ್ರತಿನಿಧಿಗಳ ಅಂದರೆ ಜಿಲ್ಲಾ ಪಂಚಾಯತ್ ಗ್ರಾಮ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಸದಸ್ಯರುಗಳಿಂದ ಮತ ಪಡೆಯಬಹುದಾದ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಸಿಕ್ಕಿತ್ತು. ಕಾಂಗ್ರೆಸ್ ನ ಅಂದಿನ ವಿಧಾನ ಪರಿಷತ್ ಶಾಸಕರ ವಿರುದ್ಧ ಸ್ಪರ್ಧಿಸಿದ್ದ ಡಿ ಎಸ ಅರುಣ್ ನಿರೀಕ್ಷೆ ಮೀರಿದ ಅಂತರದ ಗೆಲುವು ಸಾಧಿಸಿದರು.
ನಂತರ ವಿಧಾನಪರಿಷತ್ ನಲ್ಲಿ ತಮ್ಮದೇ ವರ್ಚಸ್ಸಿನ ಶೈಲಿಯಲ್ಲಿ ಅತ್ಯಂತ ಪ್ರಮುಖವಾದ ಹತ್ತು ಹಲವು ವಿಷಯಗಳನ್ನು ಸರ್ಕಾರದ ಗಮನಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ ಹಾಗೆಯೇ ತಮ್ಮದು ಆಡಳಿತ ಪಕ್ಷವಾದರೂ ಸಹ ಇರುವ ಅಂಕಿ ಅಂಶಗಳ ಬಗ್ಗೆ, ನೋವು ನಲಿವುಗಳ ಬಗ್ಗೆ, ಸಮಸ್ಸೆಗಳ ಬಗ್ಗೆ ಮನದಟ್ಟು ಮಾಡಿಕೊಡುವ ಮಾತನಾಡಿದ್ದಾರೆ.
ಗ್ರಾಮ ಪಂಚಾಯಿತಿಯ ಸದಸ್ಯರ ಮಾಸಿಕ ವೇತನದಿಂದ ಹಿಡಿದು ಪ್ರತಿ ಗ್ರಾಮಗಳ ಅಭಿವೃದ್ಧಿಗೆ ಮಾಡಬಹುದಾದ ಹಾಗೂ ಗ್ರಾಮ ಪಂಚಾಯಿತಿ ಮೂಲಕ ಕೈಗೊಳ್ಳಬಹುದಾದ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಿ ಅಲ್ಲಿ ನ್ಯಾಯ ಉಳಿಸಿಕೊಡುವ ಕಾರ್ಯ ಮಾಡಿದ್ದಾರೆ.ಡಿಎಸ್ ಅರುಣ್ ಅವರು ಒಂದು ವರ್ಷ ಶಾಸಕರಾಗಿ ಸಾರ್ಥಕ ಸೇವೆ ಸಲ್ಲಿಸಿದ್ದು, ಅವರು ನಂತರದ ದಿನಗಳಲ್ಲಿ ಇನ್ನಷ್ಟು ಹೊಸತನದ ಕಾರ್ಯಕ್ರಮಗಳನ್ನು ಜಿಲ್ಲೆಗೆ ಹಾಗೂ ತಮ್ಮ ಕ್ಷೇತ್ರಕ್ಕೆ ತರಲಿ ಎಂಬುದು ಅವರ ಅಭಿಮಾನಿಗಳ ಹೆಬ್ಬಯಕೆ.
ಮೂರು ಜಿಲ್ಲೆ ವ್ಯಾಪ್ತಿಯ ಈ ವಿಶಾಲ ಕ್ಷೇತ್ರದಲ್ಲಿ ಈಗಲೂ ಜನ ಸಂಪರ್ಕ ಹಾಗೂ ಜನಪ್ರತಿನಿಧಿಗಳ ಸಂಪರ್ಕದಲ್ಲಿರುವ ಡಿ ಎಸ್ ಅರುಣ್ ಅವರಿಗೆ ಮತದಾರರು ಹಾಗೂ ವಿಶೇಷವಾಗಿ ಅವರ ಕಳಕಳಿ ಕಾರ್ಯಕ್ರಮಗಳನ್ನು ಗಮನಿಸಿರುವ ಅಭಿಮಾನಿಗಳು ಅಭಿನಂದಿಸಿದ್ದಾರೆ.
DS ಅರುಣ್ ಅವರ ಮನದ ಮಾತು
ಆತ್ಮೀಯರೇ , 2021 ರ ವಿಧಾನ ಪರಿಷತ್ ಚುನಾವಣೆಯಲ್ಲಿ ಶಿವಮೊಗ್ಗ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ನಿಮ್ಮೆಲ್ಲರ ಆಶೀರ್ವಾದದಿಂದ ಗೆದ್ದು ನಿಮ್ಮ ಸೇವೆಗೆಯ್ಯಲು ಅವಕಾಶ ಸಿಕ್ಕಿ ಇಂದಿಗೆ ಒಂದು ವರ್ಷ ಯಶಸ್ವಿಯಾಗಿ ಪೂರೈಸಿದ್ದೇನೆ.
ಕಾರ್ಯಕರ್ತರ ಶ್ರಮ, ಹಿರಿಯರ ಆಶೀರ್ವಾದ, ಮಹಾನಗರ ಪಾಲಿಕೆಯ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರುಗಳ ವಿಶ್ವಾಸ ಮತ್ತು ಸಹಕಾರದಿಂದ ಈ ಚುನಾವಣೆಯಲ್ಲಿ ನನಗೆ ನಿಮ್ಮ ಸೇವೆ ಮಾಡಲು ಅವಕಾಶ ಸಿಕ್ಕಿದೆ ಅಂದರೆ ಇದರ ಹಿಂದೆ ಹಗಲು ರಾತ್ರಿ ದುಡಿದ ಸಾವಿರಾರು ಕಾರ್ಯಕರ್ತರ ಬೆವರಿನ ಫಲವಿದೆ. ಇಂದು ನಾನು ಶಾಸಕ ಸ್ಥಾನವನ್ನು ಅಲಂಕರಿಸಿದ್ದೇನೆ ಅಂದರೆ ಅದು ನೀವೆಲ್ಲರು ನನಗೆ ಕೊಟ್ಟ ಜವಬ್ದಾರಿ.
ಒಡ ಹುಟ್ಟಿದ ಅಣ್ಣತಮ್ಮನಂತೆ ನನ್ನೊಂದಿಗೆ ನಿಂತು, ಕಷ್ಟ ಕಾಲದಲ್ಲಿ ನೀವೆಲ್ಲ ಜೊತೆಯಾಗಿ ಹೆಗಲು ಕೊಟ್ಟು ಡಿ ಎಸ್ ಅರುಣ್ ನಿಮ್ಮೊಂದಿಗೆ ನಾವಿದ್ದೇವೆ ಎನ್ನುವ ಧೈರ್ಯದ ಮಾತು, ಚುನಾವಣೆ ಘೋಷಣೆಯಾದ ದಿನದಿಂದ ಚುನಾವಣಾ ಫಲಿತಾಂಶದ ದಿನದವರೆಗೂ ನನ್ನೊಂದಿಗೆ ನಿಂತ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು, ಮಾಧ್ಯಮ ಮಿತ್ರರ ಸಹಕಾರ , ಸ್ನೇಹಿತರೆಲ್ಲರ ಸಹಾಯ ಸಹಕಾರದಿಂದ ನಾನು ಈ ಜಾಗದಲ್ಲಿದ್ದೇನೆ.
ಬಿಜೆಪಿ ಪಕ್ಷದ ಅಭ್ಯರ್ಥಿಯಾದ ನನ್ನನ್ನು ಗೆಲ್ಲಿಸಲು ಎಲ್ಲರು ಮಾಡಿದ ಶ್ರಮ ನನ್ನ ಜೀವನದಲ್ಲಿ ಎಂದಿಗೂ ಮರೆಯಲಾರೆ. ಮುಂದಿನ ದಿನದಲ್ಲಿ ನಮ್ಮ ಶಿವಮೊಗ್ಗ ಸ್ಥಳೀಯ ಸಂಸ್ಥೆಗಳ ಕ್ಷೇತ್ರವನ್ನು ಬೆಳೆಸಿ ಅಭಿವೃದ್ಧಿ ಕೆಲಸವನ್ನು ಮಾಡಲು ನಿಮ್ಮೆಲ್ಲರ ಸಲಹೆ, ಸಹಕಾರ ನೀಡಬೇಕೆಂದು ಕೇಳಿಕೊಳ್ಳುತ್ತೇನೆ.
ಡಿ ಎಸ್ ಅರುಣ್
ಶಾಸಕರು, ವಿಧಾನಪರಿಷತ್
ಶಿವಮೊಗ್ಗ