Site icon TUNGATARANGA

shimoga / ಸ್ಮಾರ್ಟ್‌ಸಿಟಿಯ ಕಳಪೆ ಕಾಮಗಾರಿ ಕೆಲವೇ ತಿಂಗಳುಗಳಲ್ಲಿ ಪೀಸ್ ಪೀಸ್ ಅದಾ ಕಲ್ಲಿನ ಕಲ್ಲಿನ ರೇಲಿಂಗ್ಸ್ !

ನಗರದ ಗೋಪಿವೃತ್ತದಲ್ಲಿ ನಗರ ಸೌಂದರ್ಯ ಕರಣ ಯೋಜನೆಯಡಿ ಸ್ಮಾರ್ಟ್‌ಸಿಟಿ ವತಿಯಿಂದ ನಿರ್ಮಿಸಿದ ಕಲ್ಲಿನ ರೇಲಿಂಗ್ಸ್ ಬಿದ್ದು ಪೀಸ್ ಪೀಸ್ ಆಗಿದ್ದು, ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ.


ನಗರದ ಅಲಂಕಾರಕ್ಕೆ ಬಳಸಿದ್ದ ರೇಲಿಂಗ್ ಪ್ರಾರಂಭದಲ್ಲೇ ಅಲಗಾಡುತ್ತಿರುವ ಬಗ್ಗೆ ಮತ್ತು ಕಳಪೆ ಕಾಮಗಾರಿ ಬಗ್ಗೆ ಅನೇಕ ಪತ್ರಿಕೆಯಲ್ಲಿ ಎಚ್ಚರಿಕೆ ಲೇಖನಗಳು ಪ್ರಕಟವಾಗಿದ್ದವು ಮತ್ತು ಅಪಾಯಕಾರಿ ಸ್ಥಿತಿ ಬಗ್ಗೆ ಗಮನ

ಸೆಳೆಯಲಾಗಿತ್ತು. ಆದರೂ ಕೂಡ ಸ್ಮಾರ್ಟ್‌ಸಿಟಿ ಅಧಿಕಾರಿಗಳು ಈ ಬಗ್ಗೆ ತಲೆಕೆಡಿಸಿಕೊಂ ಡಿಲ್ಲ. ಪರಿಣಾಮ ಕಾಮಗಾರಿ ಮುಗಿದು ಕೆಲವೇ ತಿಂಗಳು ಕಳೆಯುವುದರೊಳಗೆ

ಕಲ್ಲಿನ ರೇಲಿಂಗ್‌ಗಳು ಬಿದ್ದು ಪೀಸ್ ಪೀಸ್ ಆಗಿವೆ. ಕಂಬಗಳು ಒರಗಿ ನಿಂತಿವೆ. ಸದಾ ಸಾರ್ವಜನಿಕರು ಓಡಾಡುವ ಈ ಜನನಿಬಿಡ ಪ್ರದೇಶಗಳಲ್ಲಿ ಈ ರೀತಿಯ ಕಾಮಗಾರಿಗಳು ಎಷ್ಟು ಅಪಾಯಕಾರಿ ಎಂಬುದು ಅಧಿಕಾರಿಗಳು ಮನಗಾಣಬೇಕು. ಮಹಿಳೆಯರು, ಮಕ್ಕಳು, ಪಾದಚಾರಿಗಳು ಓಡಾಡುವ ಕಡೆ ಈ ರೀತಿಯ ಕಳಪೆ ಕಾಮಗಾರಿ ಮಾಡಿದ್ದಲ್ಲಿ ಅಪಾಯ ಕಟ್ಟಿಟ್ಟಬುತ್ತಿ.


ಇನ್ನಾದರೂ ಸ್ಮಾರ್ಟ್‌ಸಿಟಿ ಅಧಿಕಾರಿಗಳು ತುರ್ತು ಗಮನಹರಿಸಿ ಕೋಟ್ಯಾಂತರ ವೆಚ್ಚದ ಕಾಮಗಾರಿಗಳನ್ನು ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು. ಸಾರ್ವಜನಿಕರ ತೆರಿಗೆ ಹಣವನ್ನು ಪೋಲು ಮಾಡಬಾರದೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Exit mobile version