ಶಿವಮೊಗ್ಗದ ಪ್ರತಿಷ್ಠಿತ ಎನ್.ಯೂ ಆಸ್ಪತ್ರೆಯಲ್ಲಿ ಮೊದಲ ರೊಬೋಟಿಕ್ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದಿದ್ದು ರೋಗಿಯು ಯಾವುದೇ ತೊಂದರೆಗಳಿಲ್ಲದೇ ಅತ್ಯಂತ ವೇಗವಾಗಿ ಚೇತರಿಕೆ ಕಂಡಿದ್ದಾರೆ. ಆಪರೇಷನ್ ಮುಗಿದ ಬಳಿಕ ಅತ್ಯಂತ ಕಡಿಮೆ ಅವಧಿಯಲ್ಲೇ ಎದ್ದು ಓಡಾಡಲು ಸಾಧ್ಯವಾಗಿರುವ ಕಾರಣ ಅವರು ಆಸ್ಪತ್ರೆಯ ಪರಿಣಿನಿತ ವೈದ್ಯರಾದ ರೊಬೋಟಿಕ್ ಸರ್ಜನ್ ಡಾ ಪ್ರದೀಪ್, ಎಲ್ಲಾ ತಜ್ಞ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳಿಗೆ ಧನ್ಯವಾದ ಹೇಳಿದ್ದಾರೆ.
ಶಿವಮೊಗ್ಗದ ಸೀಮಾ (ಹೆಸರು ಬದಲಾಯಿಸಲಾಗಿದೆ) ಎಂಬ ಮಹಿಳಾ ರೋಗಿ ಕಳೆದ ಕೆಲವು ಸಮಯದಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಚಿಕಿತ್ಸೆಗಾಗಿ ಎನ್.ಯು ಆಸ್ಪತ್ರೆಗೆ ದಾಖಲಾದ ಅವರನ್ನು ಇತ್ತೀಚೆಗೆ ಅಳವಡಿಸಿಕೊಂಡಿದ್ದ ಅತ್ಯಾಧುನಿಕ ಶಸ್ತ್ರಚಿಕಿತ್ಸಾ ವಿಧಾನ ರೊಬೋಟಿಕ್ ಪದ್ದತಿಯಲ್ಲಿ ಆಪರೇಟ್ ಮಾಡಲಾಯಿತು. ರೊಬೋಟಿಕ್ ಚಿಕಿತ್ಸೆಗೆ ಒಳಪಟ್ಟ ಮೊದಲ ಪೇಷೆಂಟ್ ಎನ್ನುವ ವಿಶೇಷತೆ ಸೀಮಾ ಅವರದ್ದು.
ಆಪರೇಷನ್ ನಂತರ ಅವರಲ್ಲಿ ಸಾಕಷ್ಟು ವೇಗದ ಚೇತರಿಕೆ ಕಂಡುಬಂದಿದೆ. ಆಪರೇಷನ್ ಅವಧಿಯಲ್ಲಿ ಅವ ರಕ್ತ ನಷ್ಟವೂ ಕಡಿಮೆ ಪ್ರಮಾಣದಲ್ಲಿತ್ತು. ಬೇರೆ ಸೈಡ್ ಎಫೆಕ್ಟ್ ಗಳೂ ಕಂಡು ಬಂದಿಲ್ಲ. ಸೂಕ್ತ ಮತ್ತು ಎಚ್ಚರಿಕೆ ವೈದ್ಯಕೀಯ ನಿಗಾದ ಪರಿಣಾಮ ಅವರು ಎದ್ದು ನಡೆದಾಡುವಂತಾಗಿದ್ದಾರೆ. ಆಪರೇಷನ್ ಮುಗಿದ ಒಂದೇ ವಾರದಲ್ಲಿ ಅವರು ಮರಳಿ ತಮ್ಮ ಉದ್ಯೋಗ ನಡೆಸುವಂತಾಗಿದ್ದಾರೆ.
ಈ ಬಗ್ಗೆ ಎನ್ ಯೂ ಆಸ್ಪತ್ರೆ ವೈದ್ಯಕೀಯ ಬಳಗಕ್ಕೆ ಕೃತಜ್ಞತೆ ಅರ್ಪಿಸಿರುವ ಸೀಮಾ ಅವರು, ತಮಗೆ ಸೂಕ್ತ ವಿಶ್ವಾಸಾರ್ಹ ಚಿಕಿತ್ಸೆ ನೀಡಿದ ಡಾ ಪ್ರದೀಪ್ ಅವರಿಗೆ ವಿಶೇಷವಾಗಿ ಕೃತಜ್ಞತೆ ಅರ್ಪಿಸಿದ್ದಾರೆ. ಎನ್ ಯೂ ಆಸ್ಪತ್ರೆಯ ಡಾಕ್ಟರ್ ಹಾಗೂ ನರ್ಸ್ ಸ್ನೇಹಮಯವಾಗಿ ವರ್ತಿಸುತ್ತಾರೆ, ಆಪ್ತ ಭಾವ ಮೂಡಿಸುತ್ತಾರೆ. ಎನ್ ಯೂ ಆಸ್ಪತ್ರೆ ಉಳಿದ ಆಸ್ಪತ್ರೆಗಳಂತಲ್ಲ ಇಲ್ಲಿ ಎಲ್ಲರನ್ನೂ ಸಮಾನವಾಗಿ ಪರಿಗಣಿಸಿ ಚಿಕಿತ್ಸೆ ನೀಡುತ್ತಾರೆ ಎಂದರು.