Site icon TUNGATARANGA

SPECIAL NEWS/ ಇಂಡಿಯಾ ಸೈಬರ್ ಕಾಪ್ ಪಟ್ಟಿಯಲ್ಲಿ ಶಿವಮೊಗ್ಗದ ಸೈಬರ್ ಪೊಲೀಸ್ Inspector ಗುರುರಾಜ್

ಇಂಡಿಯಾ ಸೈಬರ್ ಕಾಫ್ ಆಫ್ ಇಯರ್ ಪ್ರಶಸ್ತಿಯ ಪಟ್ಟಿಯಲ್ಲಿ ಶಿವಮೊಗ್ಗ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿದ್ದ ಕೆ.ಟಿ. ಗುರುರಾಜ್ ಅವರು ಸ್ಥಾನ ಪಡೆದಿದ್ದಾರೆ.

ಶಿವಮೊಗ್ಗ ಸೈಬರ್ ಕ್ರೈಂ ಠಾಣೆಯಲ್ಲಿ ಅವರು ಸಲ್ಲಿಸಿದ ಸೇವೆಯ ಸಮಯದಲ್ಲಿ ಹಲವು ಪ್ರಮುಖ ದೂರುಗಳನ್ನು ಆದರಿಸಿ ರಾಜ್ಯ, ದೇಶ ವಿದೇಶಗಳ ವಂಚಕರಿಂದ ಆಗಿದ್ದ ವಂಚನೆಯನ್ನು ಪತ್ತೆ ಹಚ್ಚುವಲ್ಲಿ ಹಾಗೂ ನೊಂದ ವ್ಯಕ್ತಿಗೆ ನ್ಯಾಯ ಕೊಡಿಸುವಲ್ಲಿ ಗುರುರಾಜ್ ಹಾಗೂ ಅವರ ಪೊಲೀಸ್ ತಂಡ ಸಾಕಷ್ಟು ಶ್ರಮಿಸಿ ಯಶಸ್ಸು ಸಾಧಿಸಿತ್ತು.

ಹೆಣ್ಣು ಮಕ್ಕಳ ಅಶ್ಲೀಲ ಚಿತ್ರ ಹಾಕಿದ್ದ ಹಂಗಾಮಿ ಶಿಕ್ಷಕನಿಗೆ 20 ವರ್ಷ ಜೈಲು

ಶಿಕ್ಷೆ ಸೊರಬ ತಾಲೂಕಿನ ಹಂಗಾಮಿ ಶಿಕ್ಷಕನೋರ್ವ ಚಿಕ್ಕ ಹೆಣ್ಣು ಮಕ್ಕಳ ದೃಶ್ಯಾವಳಿಗಳ ಚಿತ್ರಣಗಳನ್ನು ವಾಟ್ಸಾಪ್ ಫೇಸ್ ಬುಕ್ ಮೂಲಕ ಕಳುಹಿಸುತ್ತಿದ್ದ ಪ್ರಕರಣವೊಂದನ್ನು ಬೇದಿಸಿದ ಗುರುರಾಜ್ ನೇತೃತ್ವದ ತಂಡ ಆರೋಪಿ ಹಂಗಾಮಿ ಶಿಕ್ಷಕನಿಗೆ 20 ವರ್ಷಗಳ ಜೈಲು ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿತ್ತು. ಇದು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದು, ಯಾವುದೇ ಮಕ್ಕಳ ಲೈಂಗಿಕ ದೃಶ್ಯಾವಳಿಗಳನ್ನು ಚಿತ್ರಣಗಳನ್ನು ಫೇಸ್ಬುಕ್ ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಹರಿದುಬಿಡುವುದು ಅಪರಾಧವಾಗಿರುತ್ತದೆ. ಈ ಅಂಶವನ್ನು ಮುಂದಿಟ್ಟುಕೊಂಡು ಗುರುರಾಜ್ ಅವರ ತಂಡ ಹತ್ತಾರು ಪ್ರಮುಖ ಘಟನಾವಳಿಗಳನ್ನು ಪತ್ತೆ ಹಚ್ಚಿ ಆರೋಪಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಅಂದು ಗುರುರಾಜ್ ಅವರ ಜೊತೆ ಪೊಲೀಸ್ ಸಿಬ್ಬಂದಿಗಳಾದ ನರಸಿಂಹಮೂರ್ತಿ, ನಾಗೇಶ್, ಚಿದಂಬರ, ವಿರೂಪಾಕ್ಷಪ್ಪ, ಎಎಸೈ. ಚಂದ್ರಶೇಖರ್, ಕುಮಾರ್ ಕುಮಾರ್ ಬಣಕಾರ್, ನಿರ್ಮಲ ಗಿರೀಶ್ ಸ್ವಾಮಿ, ಚಾಲಕ ಪ್ರಕಾಶ್ ಹಾಗೂ ಇತರರು ಕರ್ತವ್ಯ ನಿರ್ವಹಿಸಿದ್ದರು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಕ್ಲಿಷ್ಟಕರವಾದ ಹಲವು ಸಮಸ್ಯೆಗಳನ್ನು ಅತ್ಯುತ್ತಮವಾಗಿ ಭೇದಿಸಿದ ತನಿಖಾಧಿಕಾರಿಗಳಿಗೆ ಕೊಡ ಮಾಡುವ ಇಂಡಿಯಾ ಸೈಬರ್ ಕಾಪ್ ಆಫ್ ಇಯರ್ ಪ್ರಶಸ್ತಿಗೆ ಗುರುರಾಜ್ ನಾಮನಿರ್ದೇಶನಗೊಂಡಿದ್ದಾರೆ.

ಗುರುರಾಜ್ ರವರು ಹುಣಸೋಡು ಬಾಂಬ್ ಸ್ಫೋಟ, ಹರ್ಷ ಕೊಲೆ, ಫೆಕ್ಸಿ ಗಲಾಟೆ, ಶಂಕಿತ ಉಗ್ರರ ಪತ್ತೆ ಪ್ರಕರಣ ಸೇರದಂತೆ ಹಲವು ಪ್ರಕರಣಗಳನ್ನು ತಮ್ಮ ತಂಡದ ಜೊತೆ ಪತ್ತೆ ಹಚ್ವುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇತ್ತೀಚೆಗಷ್ಟೇ ಕಡೂರು ಪೊಲೀಸ್ ಟ್ರೈನಿಂಗ್ ಸೆಂಟರ್ ನಲ್ಲಿ ಉಪನ್ಯಾಸಕರಾಗಿ ವರ್ಗಾವಣೆಗೊಂಡು ಕಾರ್ಯನಿರ್ವಹಿಸುತ್ತಿರುವ ಗುರುರಾಜ್ ಅವರು ಈ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವುದು ಸಂತಸದ ವಿಷಯ. ಅವರಿಗೆ ಈ ಪ್ರಶಸ್ತಿ ಲಭಿಸಲಿ ಎಂದು ಶಿವಮೊಗ್ಗ ಜನತೆ ಶುಭ ಕೋರುತ್ತದೆ. ಗುರುರಾಜ್ ಅವರ ಜೊತೆ ಮಧ್ಯಪ್ರದೇಶ ಭೂಪಾಲ್ ನ ಸೈಬರ್ ಅಂಡ್ ಹೈಟೆಕ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ನೀತೂ ಕನಸರಿಯಾ ಹಾಗೂ ಮುಂಬೈನ ವೆಸ್ಟ್ ರೀಸನ್ ಸೈಬರ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸುವರ್ಣ ಶಿಂದೆ ಅವರು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ

Exit mobile version