Site icon TUNGATARANGA

ಶಿವಮೊಗ್ಗ/ ರಾಜ್ಯಮಟ್ಟದ ಪ್ರಶಸ್ತಿಗೆ ಆಯ್ಕೆಯಾದ ಶ್ರೀ ಮೈಲಾರೇಶ್ವರ ಗೋರವರ ಡಮರುಗ ಕುಣಿತದ ಜಾನಪದ ಕಲಾ ತಂಡ


ಶಿವಮೊಗ್ಗ:ಡಿ:12: ರಾಜ್ಯಮಟ್ಟದ ಶ್ರೀ ಕನಕದಾಸರ ಕೀರ್ತನೋತ್ಸವ ಕನಕ ಕಲಾ ವೈಭವ, ಕನಕ ಕಥಾಕೀರ್ತನ ಮಹೋತ್ಸವ ಸಮ್ಮೇಳನ ತರಬೇತಿ ಕಾರ್ಯಾಗಾರದಲ್ಲಿ ಜಾನಪದ ಶೈಲಿಯಲ್ಲಿ ಗೋರವರ ಡಮರುಗ ಕುಣಿತದಲ್ಲಿ ಅತ್ತ್ಯುತ್ತಮ ಪ್ರದರ್ಶನ ನೀಡಿ ರಾಜ್ಯಮಟ್ಟದ ಪ್ರಶಸ್ತಿಗೆ ಶ್ರೀ ಮೈಲಾರೇಶ್ವರ ಗೋರವವರ ಡಮರುಗ ಕುಣಿತ ಜಾನಪದ ಕಲಾ ತಂಡ ಆಯ್ಕೆ ಯಾಗಿದೆ ಎಂದು ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಯೋಗಾಚಾರ್ಯ ಪತಂಜಲಿ ಜೆ.ನಾಗರಾಜ್ ಹೇಳಿದರು.


ಕುವೆಂಪಿ ರಂಗಮಂದಿರದಲ್ಲಿಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆ, ಪತಂಜಲಿ ಶ್ರೀ ಕನಕದಾಸರ ಅಧ್ಯಯನ ಕೇಂದ್ರ, ಪತಂಜಲಿ ಕರ್ನಾಟಕ ಜಾನಪದ ಕಲಾ ಕೇಂದ್ರ, ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶಿವಮೊಗ್ಗ ಇವರ ಸಹಕಾರದೊಂದಿಗೆ ಏರ್ಪಡಿಸಿದ್ದ ರಾಜ್ಯಮಟ್ಟದ ಜಾನಪದ ಸಮ್ಮೇಳನದಲ್ಲಿ ಸಮಗ್ರವಾಗಿ ಪ್ರಶಸ್ತಿಯನ್ನು ಪಡೆದು ರಾಜ್ಯಮಟ್ಟದ ಪ್ರಶಸ್ತಿಗೆ ಶಿವಮೊಗ್ಗ ನಗರದ ಬಿ.ಹೆಚ್.ರಸ್ತೆಯ ಶ್ರೀ ಮೈಲಾರೇಶ್ವರ ಗೋರವರ ಡಮರುಗ ಕುಣಿತ ಜಾನಪದ ಕಲಾ ತಂಡ ಆಯ್ಕೆಯಾಗಿದೆ.
ರಾಜ್ಯಮಟ್ಟದ ಸಮ್ಮೇಳನಕ್ಕೆ ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ ಜಿಲ್ಲೆಯಿಂದ ೨೫ಕ್ಕೂ ಹೆಚ್ಚು ಜಾನಪದ ಕಲಾ ತಂಡದ ಕಲಾವಿದರು ಭಾಗವಹಿಸಿ ತಮ್ಮ ಕಲಾ ಪ್ರದರ್ಶನವನ್ನು ನೀಡಿದ್ದಾರೆಎಂದು ಹೇಳಿದರು.
ರಾಜ್ಯಮಟ್ಟದ ಸಮಗ್ರ ಪ್ರಶಸ್ತಿಗೆ ಭಾಜನರಾದ ಶ್ರೀ ಮೈಲಾರೇಶ್ವರ ಗೋರವರ ಡಮರುಗ ಕುಣಿತ ಜಾನಪದ ಕಲಾ ತಂಡದ ಗೋರವರ ಕುಣಿತ ಜಾನಪದ ನೃತ್ಯರೂಪಕದ ಕಲಾವಿದರಾದ ಅಧ್ಯಕ್ಷ ಪಿ.ರಾಜಣ್ಣ(ಗೊಲ್ಲ),ಉಪಾಧ್ಯಕ್ಷ ಮೈಲಾರಪ್ಪ, ಪ್ರಧಾನ ಕಾರ್ಯದರ್ಶಿ ಎನ್.ಮಾಲತೇಶ್, ಕಾರ್ಯದರ್ಶಿ ಶಿವಣ್ಣ, ಖಜಾಂಚಿ ಹರೀಶ್, ನಿರ್ದೇಶಕರಾದ ನಿಂಗರಾಜು,ಸಂಗಮೇಶ, ಸಂಜು, ಹೆಚ್.ಸಂತೋಷ್, ಅಶೋಕ್, ಸಂಜು, ಚಂದ್ರಪ್ಪ, ಅಣ್ಣಪ್ಪ, ಸಂತೋಷ್, ಕೃಷ್ಣ, ಚಂದ್ರು ಇವರಿಗೆ ಪತಂಜಲಿ ಕರ್ನಾಟಕ ಜಾನಪದ ಕಲಾ ಕೇಂದ್ರದ ರಾಜ್ಯಾಧ್ಯಕ್ಷ ರಾಷ್ಟ್ರಪತಿ ಪದಕ ವಿಜೇತ ವೀರಗಾಸೆ ಕಲಾವಿದ ಜಿ.ಈ.ಶಿವಾನಂದಪ್ಪ, ಕೇಂದ್ರ ಸರ್ಕಾರದ ಸಂಗೀತ ನಾಟಕ ಆಕಾಡೆಮಿ ಪ್ರಶಸ್ತಿ ಪುರಸ್ಕೃತ,ಕರ್ನಾಟಕ ಜಾನಪದ ಆಕಾಡೆಮಿ ಸದಸ್ಯೆ ಸೋಬಾನೆ ಪದ ಜಾನಪದ ಕಲಾವಿದೆ ಲಕ್ಷ್ಮೀದೇವಮ್ಮ ಮುಗಳಿ ಅಭಿನಂದಿಸಿದ್ದಾರೆ.

Exit mobile version