Site icon TUNGATARANGA

shimoga / ಕ್ರಿಕೆಟ್ ಆಡಿ, ನೋಡಿ ಆನಂದಿಸಿದ ಪತ್ರಕರ್ತರು..!

ಇಂದು ಪತ್ರಕರ್ತರು ತಮ್ಮ ಜಂಜಾಟಗಳಿಗೆ ಕೆಲವು ಗಂಟೆಗಳ ಕಾಲ ವಿರಾಮ ಹಾಕಿದ್ದರು. ಸದಾ ಒತ್ತಡಗಳ ನಡುವೆ ಸಮಯ ಕಳೆಯುತ್ತಿದ್ದ ಪತ್ರಕರ್ತರು ಪೆಸಿಟ್ ಕಾಲೇಜಿನ ಕ್ರೀಡಾಂಗಣದಲ್ಲಿ ಕ್ರಿಕೆಟ್ ಆಡಿ, ನೋಡಿ ಆನಂದಿಸಿ ದರು.


ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆ ವತಿಯಿಂದ ಪತ್ರಕರ್ತರ ಕ್ರೀಡಾಕೂಟ ೨೦೨೨ರ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿ ಇಂದು ಪೆಸಿಟ್ ಕಾಲೇ ಜಿನ ಮೈದಾನದಲ್ಲಿ ಆರಂಭವಾ ಯಿತು. ಸಂಸದ ಬಿ.ವೈ. ರಾಘವೇಂದ್ರ ಅವರು ಪಂದ್ಯಾವಳಿಗೆ ಬ್ಯಾಟಿಂಗ್ ಮಾಡುವುದರ ಮೂಲಕ ಚಾಲನೆ ನೀಡಿದರು.


ಈ ಸಂದರ್ಭದಲ್ಲಿ ಮಾತನಾ ಡಿದ ಅವರು, ಕ್ರೀಡೆಗಳು ಮನುಷ್ಯನ ಮನಸ್ಸನ್ನು ಅರಳಿಸುತ್ತವೆ. ಅದರಲ್ಲೂ ಸೌಹಾರ್ದ ಪಂದ್ಯಾವಳಿಗಳು ತುಂಬಾ ಆನಂದ ನೀಡುತ್ತವೆ. ಪ್ರೀತಿ ವಿಶ್ವಾಸ ವನ್ನು ಮೂಡಿಸುತ್ತವೆ. ಕಷ್ಟಗಳ ಮರೆಸುತ್ತವೆ. ಜೊತೆಗೆ ಕ್ರಿಯಾಶೀಲತೆ ಹೆಚ್ಚಿಸಿ ಸಾಮರಸ್ಯಕ್ಕೂ ಕಾರಣ ವಾಗುತ್ತದೆ. ಅದರಲ್ಲೂ ಪತ್ರಕರ್ತರು ಸದಾ ಒತ್ತಡದಲ್ಲೇ ಇರುತ್ತಾರೆ ಆ ಒತ್ತಡ ನಿವಾರಣೆಗೆ ಇಂತ ಹ ಕ್ರೀಡಾ ಚಟುವಟಿಕೆಗಳು ಬೇಕಾಗುತ್ತವೆ ಎಂದರು.


ಗ್ರಾಮಾಂತರ ಶಾಸಕ ಕೆ.ಬಿ. ಅಶೋಕ್ ನಾಯ್ಕ ಮಾತನಾಡಿ, ಕ್ರೀಡೆ ಯಿಂದ ಲವಲವಿಕೆ ಉಂಟಾ ಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಭಾರತೀಯರು ಕ್ರೀಡಾ ಚಟುವಟಿಕೆ ಗಳಲ್ಲಿ ತೊಡಗುತ್ತಿರುವುದು ಸಂತಸದ ವಿಷಯವಾಗಿದೆ. ಆರೋಗ್ಯದ ಜೊತೆಗೆ ಸಾಮರಸ್ಯವೂ ಮೂಡು ತ್ತದೆ. ಪಂದ್ಯಾವಳಿಯಲ್ಲಿ ಯಾವುದೇ ಸಣ್ಣ ಬೇಸರ ಮಾಡಿಕೊಳ್ಳಬಾರದು. ಇದು ಸೌಹಾರ್ದಯುತ ಪಂದ್ಯಾವಳಿ ಎಂದರು.


ಕಾರ್ಯಕ್ರಮದಲ್ಲಿ ಮೇಯರ್ ಶಿವಕುಮಾರ್, ಉಪಮೇಯರ್ ಲಕ್ಷ್ಮಿ ಶಂಕರನಾಯ್ಕ, ಮಾಜಿ ಮೇಯರ್ ಸುವರ್ಣಾ ಶಂಕರ್, ಪಾಲಿಕೆ ಸದಸ್ಯೆ ಆರತಿ ಆ.ಮ. ಪ್ರಕಾಶ್, ಜಿಲ್ಲಾಧಿಕಾರಿ ಸೆಲ್ವಮಣಿ ಎಸ್.ಪಿ. ಮಿಥುನ್ ಕುಮಾರ್, ಅಪರ ಜಿಲ್ಲಾಧಿಕಾರಿ ನಾಗೇಂದ್ರ ಹೊನ್ನಳ್ಳಿ, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಕೆ.ವಿ. ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ವಿ.ಟಿ. ಅರುಣ್, ಉಪಾಧ್ಯಕ್ಷ ಆರ್.ಎಸ್. ಹಾಲಸ್ವಾಮಿ, ಹುಚ್ರಾಯಪ್ಪ, ರಾಜ್ಯ ನಿರ್ದೇಶಕ ಎನ್. ರವಿಕುಮಾರ್. ವಿಶೇಷ ಆಹ್ವಾನಿತ ಜಿ. ಪದ್ಮನಾಭ್, ಖಜಾಂಚಿ ರಂಜಿತ್, ಕೆ.ಆರ್. ಸೋಮನಾಥ್, ದೀಪಕ್ ಸಾಗರ್, ಹೆಚ್.ಎನ್.ಮಂಜುನಾಥ್ ಸೇರಿದಂತೆ ಹಲವರಿದ್ದರು.

Exit mobile version