Site icon TUNGATARANGA

ಸೋನಿಯಾಗಾಂಧಿ ನಮ್ಮ ದೇಶಕ್ಕಾಗಿ ಅನೇಕ ತ್ಯಾಗ ಮಾಡಿದ್ದಾರೆ ಜನತೆ ಇಂದಿಗೂ ಸಹ ಅವರನ್ನು ನೆನಪಿಸಿಕೊಳ್ಳುತ್ತಾರೆ: ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್

ಶಿವಮೊಗ್ಗ,
ಸೋನಿಯಾಗಾಂಧಿ ಮತ್ತು ಕುಟುಂಬ ಈ ದೇಶಕ್ಕಾಗಿ ಅನೇಕ ತ್ಯಾಗ ಮಾಡಿದೆ. ಈ ದೇಶದ ಜನತೆ ಅವರನ್ನು ಸದಾ ನೆನಪಿಸಿಕೊ ಳ್ಳುತ್ತದೆ ಎಂದು ಮಾಜಿ ಶಾಸಕ ಆರ್.ಪ್ರಸನ್ನ ಕುಮಾರ್ ಹೇಳಿದ್ದಾರೆ.


ಅವರು ಇಂದು ನಗರದ ಗುಡ್‌ಲಕ್ ಆರೋಗ್ಯ ಕೇಂದ್ರದಲ್ಲಿ ಕಾಂಗ್ರೆಸ್ ಅಧಿನಾ ಯಕಿ ಸೋನಿಯಾಗಾಂಧಿ ಅವರ ಹುಟ್ಟು ಹಬ್ಬದ ಅಂಗವಾಗಿ ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ ಆರೋಗ್ಯ ಕೇಂದ್ರದ ನಿವಾಸಿಗಳಿಗೆ ಬೆಡ್‌ಶೀಟ್,ನೈಟಿ ಮತ್ತು ಆಹಾರ ಪದಾರ್ಥಗಳನ್ನು ವಿತರಿಸಿ ಮಾತನಾಡಿದರು.


ಪ್ರಧಾನಿ ಹುದ್ದೆಗೆ ಅವಕಾಶ ಇದ್ದರೂ ಕೂಡ ಸೋನಿಯಾಗಾಂಧಿ ಅವರು ಮನಮೋಹನ್‌ಸಿಂಗ್ ಅವರಿಗೆ ಪ್ರಧಾನಿ ಮಾಡಿದರು. ತನ್ನ ಪತಿ ರಾಜೀವ್‌ಗಾಂಧಿ ಬಾಂಬ್ ದಾಳಿಗೆ ತುತ್ತಾದಾಗ ದೃತಿಗೆಡದೆ ದೇಶ ಸೇವೆಯನ್ನು ಮತ್ತು ಕಾಂಗ್ರೆಸ್ ಪಕ್ಷವನ್ನು ಮುಂದುವರೆಸಿಕೊಂಡು ದೇಶದ ಜನತೆಯ ಸಂಕಷ್ಟಗಳಿಗೆ ಸ್ಪಂದಿಸಿದರು. ಪುತ್ರ ರಾಹುಲ್‌ಗಾಂಧಿ ಕೂಡ ದೇಶದ ಏಕತೆಗಾಗಿ ಇದುವರೆಗೆ ಯಾರು ಮಾಡದ ರೀತಿಯಲ್ಲಿ ೩೫೦೦ ಕಿ.ಮೀ. ಪಾದಯಾತ್ರೆ ನಡೆಸಿ ಭಾರತ್‌ಜೋಡೊ ಅಭಿಯಾನ ಕೈಗೊಂಡಿ ದ್ದಾರೆ. ಈ ಸಂದರ್ಭದಲ್ಲಿ ಸೋನಿಯಾಗಾಂಧಿ ಕುಟುಂಬಕ್ಕೆ ಎಲ್ಲರ ಶುಭ ಹಾರೈಕೆ ಅಗತ್ಯ ಎಂದರು.


ಮಾಜಿ ಮಹಾಪೌರರಾದ ಎಸ್.ಕೆ.ಮರಿ ಯಪ್ಪ ಮಾತನಾಡಿ, ಅಧಿಕಾರಕ್ಕಾಗಿ ಆಸೆ ಪಡದೆ ತ್ಯಾಗ ಮಾಡಿದವರು ಸೋನಿಯಾಗಾಂಧಿ. ತನ್ನ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಬೇಡಿ ಆ ಸಂದರ್ಭದಲ್ಲಿ ಸಾರ್ವಜನಿಕರ ಸೇವೆಮಾಡಿ ಎಂದು ಕರೆ ನೀಡಿದ್ದಾರೆ. ಅದರ ಅಂಗವಾಗಿ ಇಂದು ಅನೇಕ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಎಂದರು.


ಗ್ರಾಮಾಂತರ ಕ್ಷೇತ್ರದ ಸ್ಪರ್ಧಾಕಾಂಕ್ಷಿ ಡಾ.ಶ್ರೀನಿವಾಸ ಕರಿಯಣ್ಣ ಮಾತನಾಡಿ, ನಮ್ಮ ದೇಶಕ್ಕೆ ಸೋನಿಯಾಗಾಂಧಿ ಕುಟುಂಬದ ತ್ಯಾಗ ಮತ್ತು ಬಲಿದಾನ ಯಾರೂ ಕೂಡ ಮರೆಯುವಹಾಗಿಲ್ಲ. ಅವರ ಹುಟ್ಟು ಹಬ್ಬದ ಸಂದರ್ಭದಲ್ಲಿ ಸಾಮಾಜಿಕ ಚಟುವಟಿಕೆಗಳ ಮೂಲಕ ಉತ್ತಮ ಕಾರ್ಯವನ್ನು ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ಮಾಡುತ್ತಿದೆ ಎಂದರು.


ಈ ಸಂದರ್ಭದಲ್ಲಿ ಗುಡ್‌ಲಕ್ ಆರೋಗ್ಯ ಕೇಂದ್ರದ ನಿವಾಸಿಗಳಿಗೆ ಬೆಡ್ ಶೀಟ್ ಮತ್ತಿತರ ವಸ್ತುಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ವಿನಯ್‌ತಾಂಡ್ಲೆ, ಪ್ರಮುಖರಾದ ಮಂಜುನಾಥ್ ಬಾಬು, ರಂಗನಾಥ್, ಶಿವಾನಂದ್, ಸುನೀಲ್, ಚಿನ್ನಪ್ಪ, ಪ್ರಭಾಕರ್, ಮಲ್ಲಿಕಾರ್ಜುನ್, ವಿನೋದ್, ಬಾಲಾಜಿ, ಮೋಹನ್, ಗುಡ್‌ಲಕ್ ಆರೋಗ್ಯ ಕೇಂದ್ರದ ಅಧ್ಯಕ್ಷರಾದ ರವೀಂದ್ರನಾಥ್ ಐತಾಳ್, ಪಂಚಾಕ್ಷರಿ ಹಿರೇಮಠ್, ಶಿವಪ್ಪಗೌಡ ಮತ್ತಿತರರಿದ್ದರು.

Exit mobile version