Site icon TUNGATARANGA

ಮೊಲಗಳನ್ನು ಹಿಡಿಯುವ ಸಲುವಾಗಿ ಕಟ್ಟಿದ್ದ ಉರುಳಿನಲ್ಲಿ ಚಿರತೆ ಸಿಕ್ಕಿಕೊಂಡು ಸಾವು !

ಶಿವಮೊಗ್ಗ,
ತಾಲ್ಲೂಕಿನ ತುಪ್ಪೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಣೆ ಹೊಸೂರು ಗ್ರಾಮದಲ್ಲಿ ಮೊಲ ಗಳನ್ನು ಹಿಡಿಯುವ ಸಲುವಾಗಿ ಕಟ್ಟಿದ್ದ ಉರುಳಿನಲ್ಲಿ ಸಿಕ್ಕಿಕೊಂಡು ಐದು ವರ್ಷದ ಗಂಡು ಚಿರತೆ ಸಾವುಕಂಡಿರುವ ಘಟನೆ ವರದಿಯಾಗಿದೆ.


ಜಮೀನಿನ ಅಂಚಿನಲ್ಲಿ ಕಟ್ಟಿದ್ದ ಆಕ್ಸಿಲೇಟರ್ ತಂತಿ ಚಿರತೆಯ ಹಿಂಬದಿಯ ಕಾಲಿಗೆ ಸಿಲುಕಿದೆ.
ಅದು ತಪ್ಪಿಸಿಕೊಳ್ಳಲು ಹರಸಹಾಸ ಪಟ್ಟು ಮರವೇರಿದೆ.

ಆದರೆ ತಂತಿ ಬಿಗಿ ಇದ್ದದ್ದರಿಂದ ದೇಹಕ್ಕೆ ರಕ್ತ ಸಂಚಾರ ಆಗದೇ ಮರದ ಕವಲಿನಲ್ಲಿಯೇ ಸಿಲುಕಿ ಚಿರತೆ ಮೃತ ಪಟ್ಟಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.


ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಚಿರತೆಯ ಕಳೇಬರವನ್ನು ಸುಟ್ಟು ಹಾಕಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ವಲಯ ಅರಣ್ಯಾಧಿ ಕಾರಿ ರಾಮಕೃಷ್ಣ, ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್, ಅರಣ್ಯಾಧಿಕಾರಿ ಸೋಮಶೇಖರ್ ಗೌಡ ಮತ್ತು ಅರಣ್ಯ ಸಿಬ್ಬಂದಿ ಹಾಜರಿದ್ದರು.

Exit mobile version