Site icon TUNGATARANGA

ಶಿವಪ್ಪನಾಯಕ ಮಾಲ್ ಗುತ್ತಿಗೆ ಅವಧಿ ಪ್ರಕರಣ  – ತನಿಖಾ ವರದಿ ಬಹಿರಂಗಗೊಳಿಸಲು ಆಗ್ರಹಿಸಿ  – ಮೇಯರ್ ಕಛೇರಿ ಮುತ್ತಿಗೆ – ಕಾಂಗ್ರೆಸ್ ಪಕ್ಷದ ಪಾಲಿಕೆ ಸದಸ್ಯರು ಹಾಗೂ ಮುಖಂಡರ ಬಂಧನ.

           ಶಿವಪ್ಪನಾಯಕ ಮಾರುಕಟ್ಟೆ ಗುತ್ತಿಗೆ ಅವಧಿಗೆ ಸಂಬಂಧಿಸಿದ ತನಿಖಾ ವರದಿ ಬಂದು 5 ತಿಂಗಳಾದರೂ ಸಭೆಯನ್ನು ಕರೆಯದ ಮೇಯರ್ ವಿರುದ್ಧ ಹಾಗೂ ಕಿಕ್ ಬ್ಯಾಕ್  ಪಡೆದ ಬಿಜೆಪಿಯ ಪಾಲಿಕೆ ಸದಸ್ಯರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ

ಕಾಂಗ್ರೆಸ್ ಪಕ್ಷದ ಪಾಲಿಕೆ ಸದಸ್ಯರು ಹಾಗೂ ಪಕ್ಷದ ಮುಖಂಡರಿಂದ ಮಹಾನಗರ ಪಾಲಿಕೆಯ ಮೇಯರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿನೆ  ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಪಾಲಿಕೆ ಸದಸ್ಯರುಗಳನ್ನು ಹಾಗೂ ಮುಖಂಡರನ್ನು ಪೊಲೀಸರು ಬಂಧಿಸಿದರು.

          ಈ ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ , ಶಿವಮೊಗ್ಗ ನಗರದ ಮಾಜಿ ಶಾಸಕರಾದ ಕೆಬಿ ಪ್ರಸನ್ನ ಕುಮಾರ್ ವಿಧಾನ ಪರಿಷತ್ನ ಮಾಜಿ ಸದಸ್ಯರಾದ ಆರ್.ಪ್ರಸನ್ನ ಕುಮಾರ್,

ಪಾಲಿಕೆಯ ವಿರೋಧಪಕ್ಷದ ನಾಯಕಿ ರೇಖಾರಂಗನಾಥ್, ಪಾಲಿಕೆ ಸದಸ್ಯರಾದ ಎಚ್ ಸಿ ಯೋಗೇಶ್ ,ಶಮೀರ್ ಖಾನ್, ಆರ್ ಸಿ ನಾಯ್ಕ ,ಯಮುನ ರಂಗೇಗೌಡ, ಮಾಜಿ ಮೇಯರ್ ಎಸ್ ಕೆ ಮರಿಯಪ್ಪ, ಪಕ್ಷದ ಮುಖಂಡರಾದ ಎಸ್ ಪಿ ದಿನೇಶ್ ಎನ್ ರಮೇಶ್ ಎಸ್ ಪಿ ಶೇಷಾದ್ರಿ, ರವಿಕುಮಾರ್,  ಕೆ ದೇವೇಂದ್ರಪ್ಪ, ಕಾಂಗ್ರೆಸ್ ರಾಜ್ಯ ಪ್ರಧಾನ

ಕಾರ್ಯದರ್ಶಿ ಎಂ ಪ್ರವೀಣ್ ಕುಮಾರ್ , ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಪಿ. ಗಿರೀಶ್ , ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಸಿಂಗ್ ,ಯುವ ಕಾಂಗ್ರೆಸ್ ನಗರಾಧ್ಯಕ್ಷರುಗಳಾದ ಬಿ. ಲೋಕೇಶ್ ,ಎಸ್.ಕುಮರೇಶ್ , ಪುಷ್ಪಕ್  ಕುಮಾರ, ಎಸ್ಎಂ ಶರತ್, ಪವನ್ ಶಿವಣ್ಣ, ಆರಿಫ್, ತಂಗರಾಜ್ ಕವಿತಾ, ಸುವರ್ಣ ನಾಗರಾಜ್, ಸ್ಟೆಲ್ಲಾ ಮಾರ್ಟಿನ್, ಚಂದ್ರಿಕಾ, ಕೆಎಲ್ ಪವನ್, ನದೀಮ್, ಮಸ್ತಾನ್ ,ಸುಹಾಸ್ ಗೌಡ ಹಾಗೂ ಹಲವಾರು ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತ , ಉಪಸ್ಥಿತರಿದ್ದರು

Exit mobile version