Site icon TUNGATARANGA

ಬ್ಯಾರಿಸ್ ಸಂಸ್ಥೆಯ ವಿಚಾರವಾಗಿ ತಲೆಕೆಡಿಸಿಕೊಳ್ಳದ ಮೇಯರ್ ವಿರುದ್ದ ನಾಳೆ ಬೆಳಗ್ಗೆ ಕಾಂಗ್ರೆಸ್ ಕಾರ್ಯಕರ್ತರಿಂದ ಮೇಯರ್ ಕಛೇರಿಯ ಮುತ್ತಿಗೆ


ಶಿವಪ್ಪ ನಾಯಕ ಮಾರುಕಟ್ಟೆ ಗುತ್ತಿಗೆ ಅವಧಿಗೆ ಸಂಬಂಧಿಸಿದ ತನಿಖಾ ವರಧಿ ಬಂದು 5 ತಿಂಗಳಾದರೂ ಸಭೆಯನ್ನು ಕರೆಯದ ಮೇಯರ್ ವಿರುದ್ಧ ಕಾಂಗ್ರೆಸ್ ಪಕ್ಷದ ಪಾಲಿಕೆ ಸದಸ್ಯರು ಹಾಗೂ ಪಕ್ಷದ ಮುಖಂಡರಿಂದ ಮಹಾನಗರ ಪಾಲಿಕೆಯ ಮೇಯರ್ ಕಚೇರಿ ಮುತ್ತಿಗೆ.


ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ದಿನಾಂಕ: ೧೨-೦೪-೨೦೨೧ ಸಾಮಾನ್ಯ ಸಭೆಯಲ್ಲಿ ಬ್ಯಾರಿಸ್ ಸಂಸ್ಥೆಯವರು ೯೯ ವರ್ಷ ಶಿವಪ್ಪ ನಾಯಕ ಮಾಲ್ ಅನ್ನು ಅವರ ಸಂಸ್ಥೆಗೆ ಬಾಡಿಗೆ ಆಧಾರದ ಮೇಲೆ ಮುಂದುವರೆಸಲು ಕೇಳಿಕೊಂಡಿದ್ದರು. ಈ ವಿಚಾರವಾಗಿ ನಗರದ ಅನೇಕ ಸಂಘ ಸಂಸ್ಥೆಗಳು ಕಾಂಗ್ರೆಸ್ ಪಕ್ಷದ ಪಾಲಿಕೆ ಸದಸ್ಯರುಗಳು ವಿರೋಧವನ್ನು ವ್ಯಕ್ತಪಡಿಸಿದರು.

ಒಂದು ಹಂತದಲ್ಲಿ ಸಾಮಾನ್ಯ ಸಭೆ ತಾರತಮ್ಯಕ್ಕೆ ಹೋಗಿತ್ತು. ಮಾಧ್ಯಮದಲ್ಲಿ ಸಹ ಶಿವಮೊಗ್ಗ ನಗರದ ಅನೇಕ ನಾಗರೀಕರು ವಿರೋಧವನ್ನು ವ್ಯಕ್ತಪಡಿಸಿದರು. ಅನೇಕ ಮಾಧ್ಯಮಗಳಲ್ಲಿ ಇದನ್ನು ಕಂಡಿಸಿದರು. ಬಹಳ ಮುಖ್ಯವಾದ ವಿಷಯವೇನೆಂದರೆ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಗೆ ಈ ವಿಷಯವನ್ನು ತರಲು ಹೇಳಿದವರು ಯಾರು? ಹಾಗೂ ಸಭೆಗೆ ತಂದವರು ಯಾರು? ಏಕೆಂದರೆ ಅವಧಿ ಮುಗಿಯುವ ೩ ತಿಂಗಳ ಮುಂಚಿತವಾಗಿ ಮಾತ್ರ ಬ್ಯಾರಿಸ್ ಸಂಸ್ಥೆಯವರು ಬಾಡಿಗೆ ಮುಂದುವರಿಸಲು ಕೇಳುವ ಅಧಿಕಾರವಿರುತ್ತದೆ.

ಆದುದ್ದರಿಂದ ಈ ವಿಚಾರವಾಗಿ ಬಹಳಷ್ಟು ಚರ್ಚೆಗಳು ನಡೆದವು. ಸಾಮಾಜಿಕ ಜಾಲತಾಣದಲ್ಲಿ ಪ್ರತಿ ನಿತ್ಯ ಇದರ ಬಗ್ಗೆ ಚರ್ಚೆಯಾಗಿತ್ತಿತ್ತು. ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಈ ವಿಚಾರವಾಗಿ ವಿರೋಧ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ರವರು ಹೋರಾಟ ಮಾಡಿ ಇದರ ಬಗ್ಗೆ ಸೂಕ್ತ ತನಿಕೆ ಆಗಬೇಕೆಂದು ಮಹಾಪೌರರಿಗೆ ಒತ್ತಾಯ ಮಾಡಿದರು. ಆ

ಗ ಮಹಾಪೌರರು ಸಾಮಾನ್ಯ ಸಭೆಯನ್ನು ೧೫ ನಿಮಿಷ ಮುಂದೂಡಿದರು ತದನಂತರ ಪೂಜ್ಯ ಮಹಾಪೌರರು ೫ ಜನ ಮಹಾನಗರ ಪಾಲಿಕೆಯ ಸದಸ್ಯರು ಹಾಗೂ ಅಧಿಕಾರಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸಿದರು ಸಮಿತಿ ವರದಿ ಬರಲು ಸುಮಾರು ೧೪ ತಿಂಗಳುಗಳಾಗಿದ್ದು, ಈಗ ಸಮಿತಿ ವರದಿ ೫ ತಿಂಗಳು ಕಳೆದರೂ, ಹಲವಾರು ಬಾರಿ ಪ್ರತಿಭಟಿಸಿ ಮನವಿಯನ್ನು ನೀಡಿದರು, ಇತ್ತೀಚಿಗೆ ದಿನಾಂಕ ೨೧.೧೧.೨೦೨೨ ರಂದು ಪತ್ರಿಕಾಗೋಷ್ಠಿ ನಡೆಸಿ ಒಂದು ವಾರಗಳ ಗಡುವು ನೀಡಲಾಗಿತ್ತು ಇಲ್ಲದಿದ್ದಲ್ಲಿ ಪಾಲಿಕೆ

ಕಚೇರಿಗೆಮುತ್ತಿಗೆ ಹಾಕಿ ಬೀಗ ಹಾಕುತ್ತೇವೆ ಎಂದು ಎಚ್ಚರಿಕೆಯನ್ನು ಕೊಟ್ಟಿದ್ದೆವು, ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಮಹಾನಗರ ಪಾಲಿಕೆಯ ಮೇಯರ್ ಕಚೇರಿಗೆ ನಾಳೆ ಬೆಳಿಗ್ಗೆ ೧೧ ಗಂಟೆಗೆ ಕಾಂಗ್ರೆಸ್ ಪಕ್ಷದ ಎಲ್ಲಾ ಪಾಲಿಕೆ ಸದಸ್ಯರು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಮುತ್ತಿಗೆ ಹಾಕಲಾಗುವುದು.

ಈ ಪ್ರತಿಭಟನೆಗೆ ಪಕ್ಷದ ಎಲ್ಲಾ ಕಾರ್ಯಕರ್ತರು ಆಗಮಿಸಬೇಕೆಂದು ಕೋರಿಕೊಳ್ಳುತ್ತೇನೆ.

Exit mobile version