ಶಿವಮೊಗ್ಗ,
ರಾಜ್ಯದಲ್ಲಿ ಯಾವುದೇ ಕಾರಣಕ್ಕೆ ಮುಸ್ಲಿಂ ಮಹಿಳೆಯರ ಕಾಲೇಜು ಸ್ಥಾಪನೆ ಆಗುವುದಿಲ್ಲ ಎಂದು ಮಾಜಿ ಸಚಿವ, ಶಾಸಕ ಕೆ.ಎಸ್. ಈಶ್ವರಪ್ಪ ಸ್ಪಷ್ಟ ಪಡಿಸಿದ್ದಾರೆ.
ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಮುಸ್ಲಿಂ ಕಾಲೇಜು ಸ್ಥಾಪನೆಯ ಪ್ರಸ್ತಾವನೆಯೇ ಇಲ್ಲ ಎಂದು ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಹೇಳಿದ್ದಾರೆ. ಹೀಗಿರುವಾಗ, ಯಾವುದೋ ಅಟೆಂಡರ್ ಹೇಳುವ ಮಾತುಗಳಿಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಮುಸ್ಲಿಂ ಮಹಿಳಾ ಕಾಲೇಜು ಸ್ಥಾಪನೆ ಆಗುವುದಿಲ್ಲ ಎಂದಿದ್ದಾರೆ.
ಅಧಿಕೃತ ಕಾರ್ಯಕ್ರಮದ ನಿಮಿತ್ತ ತೆರಳುತ್ತಿದ್ದ ರಾಜ್ಯಪಾಲ ಥಾವರ ಚಂದ್ ಗೆಲ್ಹೋಟ್ ಅವರು ಅಲ್ಪಾವಧಿ ಕಾಲ ನಗರದಲ್ಲಿ ತಂಗಿದ್ದು, ಈ ವೇಳೆ ಶಾಸಕ ಕೆ.ಎಸ್. ಈಶ್ವರಪ್ಪ ಅವರೊಂದಿಗೆ ಚರ್ಚೆ ನಡೆಸಿದ್ದಾರೆ.
ಕಾರವಾರದಿಂದ ಬೆಂಗಳೂರಿಗೆ ಹೆಲಿಕಾಪ್ಟರ್ ಮೂಲಕ ರಾಜ್ಯಪಾಲರು ತೆರಳುತ್ತಿದ್ದರು. ಈ ವೇಳೆ ಹೆಲಿಕಾಪ್ಟರ್’ಗೆ ಇಂಧನ ತುಂಬಿಸಿಕೊಳ್ಳುವ ಸಲುವಾಗಿ ನಗರದ ಸರ್ಕಿಟ್ ಹೌಸ್ ಬಳಿಯಿ ರುವ ಹೆಲಿಪ್ಯಾಡ್’ನಲ್ಲಿ ಸುಮಾರು ೧ ಗಂಟೆಗಳ ಕಾಲ ಇಳಿಸಲಾಗಿತ್ತು.
ಈ ವೇಳೆ ಶಾಸಕ ಈಶ್ವರಪ್ಪನವರು ತೆರಳಿ ರಾಜ್ಯಪಾಲರನ್ನು ಸ್ವಾಗತಿಸಿ, ಅಭಿನಂದಿಸಿ, ಕೆಲ ಕಾಲ ಅವರೊಂದಿಗೆ ಚರ್ಚೆ ನಡೆಸಿದರು.
ಈ ಕುರಿತಂತೆ ಮಾತನಾಡಿದ ಈಶ್ವರಪ್ಪ, ರಾಜ್ಯಪಾಲರು ಕೆಲಕಾಲ ಶಿವಮೊಗ್ಗದಲ್ಲಿ ತಂಗುವ ವಿಚಾರ ತಿಳಿಯಿತು. ಹೀಗಾಗಿ, ಆಗಮಿಸಿ ಇಡಿ ಶಿವಮೊಗ್ಗ ಜನತೆಯ ಪರವಾಗಿ ಗೌರವಾನ್ವಿತ ರಾಜ್ಯಪಾಲರನ್ನು ಸ್ವಾಗತಿಸಿ, ಅಭಿನಂದಿಸಿದ್ದೇನೆ ಅಷ್ಟೇ ಎಂದರು.
ರಾಜ್ಯಪಾಲರ ಭೇಟಿಯ ವೇಳೆ ಡಿಸಿ ಡಾ.ಸೆಲ್ವ ಮಣಿ, ಎಸ್‌ಪಿ ಮಿಥುನ್ ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.