Site icon TUNGATARANGA

ಭದ್ರಾವತಿ ದಡಂಘಟ್ಟದಲ್ಲಿ ಮಗುವನ್ನು ಕೊಂದ ಬೀದಿನಾಯಿಗಳು…, ಅವುಗಳ ನಿಯಂತ್ರಣದ ಹೆಸರಿನಲ್ಲಿ ಎಷ್ಟು ತಿಂದಿದೆ ತಾಲ್ಲೂಕು ಆಡಳಿತ!

ಭದ್ರಾವತಿ, ನ.30:

ನಾಲ್ಕು ವರುಷದ ಮಗುವಿನ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿ ಮಗುವಿನ ಸಾವಿಗೆ ಕಾರಣವಾಗಿದೆ. ಘಟನೆ ತಾಲೂಕಿನ ದಡಂಘಟ್ಟದಲ್ಲಿ ಸಂಭವಿಸಿದೆ.

ಸಯ್ಯದ್ ನಸ್ರುಲ್ಲಾ ಎಂಬುವರು ಮನೆಯ ಮುಂದಿನ ಅಂಗಳದಲ್ಲಿ ಭತ್ತದ ಮಿಷಿನ್ ನಲ್ಲಿ ಭತ್ತ ಬೇರ್ಪಡಿಸುವ ಕೆಲಸ ಮಾಡುವ ವೇಳೆ ಮಗುವನ್ನ ಬೈಕ್ ಮೇಲೆ ಕೂರಿಸಿದ್ದರು. ಬೈಕ್ ನಿಂದ ಮಗು ಕೆಳಗಿಳಿದಿದೆ. ಮಗು ಬೈಕ್ ನಿಂದ ಕೆಳಗಿಳಿಯುತ್ತಿದ್ದಂತೆ 7 ರಿಂದ 8 ನಾಯಿಗಳು ದಾಳಿ ನಡೆಸಿವೆ.

ಮಗುವನ್ನ ಸಿಕ್ಕ ಸಿಕ್ಕಕಡೆ ಕಚ್ಚಿವೆ. ಮಗುವಿನ ರಕ್ಷಣೆಗೆ ದಾವಿಸಿದ ನಸ್ರುಲ್ಲಾ ಮಗುವನ್ನ‌ ಉಳಿಸಿಕೊಳ್ಳುವ ಪ್ರಯತ್ನಿಸಿದ್ದಾರೆ. ಘಟನೆ 4 ಗಂಟೆಯ ಸಮಯಕ್ಕೆ ನಡೆದಿದೆ. ಮಗುವನ್ನ ತಕ್ಷಣವೇ ಮೆಗ್ಗಾನ್ ಗೆ ಕರೆದುಕೊಂಡು ಬಂದಿದ್ದಾರೆ.

ಆದರೆ ಮಗು 6 ಗಂಟೆಯ ಸುಮಾರಿಗೆ ಕೊನೆ ಉಸಿರು ಎಳೆದಿದೆ. ಮೃತ ಮಗುವನ್ನ ಸೈಯ್ಯದ್ ಮದನಿ ಎಂದು ಗುರುತಿಸಲಾಗಿದೆ. ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಘಟನೆ ಬಳಿಕ ಬೀದಿ ನಾಯಿಗಳ ವಿರುದ್ಧ ಗ್ರಾಮಸ್ಥರಲ್ಲಿ ಭಯ ಉಂಟಾಗಿದೆ.

ಈ ಕರ್ಮಕಾಂಡದ ವಿವರ

ಪತ್ರಿಕೆಯ ವಾಟ್ಸಪ್ ಗುಂಪುಗಳಲ್ಲಿ ಹಾಗೂ ಇತರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಈ ವೈರಲ್ ವಿಡಿಯೋ ಭದ್ರಾವತಿ ಆಡಳಿತದ ಬೇಜವಾಬ್ದಾರಿತನವನ್ನು ಎತ್ತಿ ಹಿಡಿಯುತ್ತಿದೆಯೇ? ಭದ್ರಾವತಿ ಗ್ರಾಮಾಂತರ ಠಾಣಾ ಪೊಲೀಸ್ ಇಲಾಖೆಯ ವ್ಯಾಪ್ತಿಯನ್ನು ನೋಡಿಕೊಳ್ಳಬೇಕಾದ ತಹಶೀಲ್ದಾರರ ಕಚೇರಿಯ ಕರ್ಮಕಾಂಡವೂ ಗೊತ್ತಿಲ್ಲ.

ಭದ್ರಾವತಿ ಸಮೀಪದ ಧಡಂಘಟ್ಟ ಗ್ರಾಮದಲ್ಲಿ ಸುಮಾರು ಏಳೆಂಟು ನಾಯಿಗಳು ಸುಮಾರು ಐದು ವರ್ಷದ ಬಾಲಕನನ್ನು ಹಿಗ್ಗಾಮುಗ್ಗಾ ಕಚ್ಚಿವೆ. ಈ ವೈರಲ್ ಆಗಿರುವ ವಿಡಿಯೋ ವಿಷಯ ಹಿಡಿದು ಭದ್ರಾವತಿ ಗ್ರಾಮಾಂತರ ಪೊಲೀಸರಿಗೆ ಅಲ್ಲಿನ ಇನ್ಸ್ಪೆಕ್ಟರ್ ಗುರುರಾಜ್ ಅವರಿಗೆ ತುಂಗಾತರಂಗ ಪತ್ರಿಕೆ ಸಂಪರ್ಕಿಸಿದಾಗ ಐದಾರು ನಾಯಿಗಳು ಕಚ್ಚಿರುವುದು ಸತ್ಯ ಎಂದಿದ್ದಾರೆ.

ಈ ಮಗು ಈಗ ಶಿವಮೊಗ್ಗ ಮೆಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಹಳ್ಳಿಯೊಂದರ ಭಾಗದಲ್ಲೇ ಈ ರೀತಿ ಆದರೆ ನಗರ ವ್ಯಾಪ್ತಿಯಲ್ಲಿ ನಾಯಿಗಳಿಗೆ ಆಪರೇಷನ್ ಮಾಡುತ್ತೇವೆ ಅವುಗಳ ಸಂತಾನ ಚಿಕಿತ್ಸೆ ಮಾಡುತ್ತೇವೆ ಎಂದು ಭೊಂಬಡಿ ಬಜಾಯಿಸಿ ಲಕ್ಷಾಂತರ ಹಣ ಬಳಸುವ ನಗರದ ನಗರಸಭೆ ಕಥೆ ಏನು? ಹಾಗೆಯೇ ಖರ್ಚು ಮಾಡುತ್ತಿರುವ ಹಣದ ಲೆಕ್ಕ ಯಾರಿಗಾದರೂ ಗೊತ್ತೇ?

ಹೋಗಲಿ ಬಿಡಿ ಇಲ್ಲಿ ನಡೆದಿರುವ ಘಟನೆಯ ಮಗುವಿನ ಪರಿಸ್ಥಿತಿಯನ್ನು ಶಿವಮೊಗ್ಗ ಮೆಗಾನ್ ಆಸ್ಪತ್ರೆಯಲ್ಲಿ ಆ ಮಗು ಚಿಕಿತ್ಸೆ ಪಡೆಯುತ್ತಿರುವ ವಿಧಾನ ಗೊತ್ತೇ? ದಯಮಾಡಿ ಅವರ ಬದುಕು ಹಾಗೂ ಅಲ್ಲಿನ ಸಾಮ್ರಾಜ್ಯದ ನಡುವೆ ನಮ್ಮ ತನ ಹಾಗೂ ಹಳ್ಳಿಯ ಜನ ಜೀವನ ಹಾಳಾಗಬಾರದು . ಉಳಿದುಕೊಳ್ಳಬೇಕು. ಅಲ್ಲಿನ ಗ್ರಾಮ ಪಂಚಾಯಿತಿ ಏನನ್ನು ಮಾಡುತ್ತಿದೆ ಎಂದು ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ.

ಭದ್ರಾವತಿ ಶಾಸಕ ಸಂಗಮೇಶ್ವರ ಅವರು ಈಗ ಈ ಎದ್ದೇಳಲೇಬೇಕು. ಅಲ್ಲಿನ ಜನ ಈಗ ಸಿಟ್ಟಿಗೆದ್ದರೆ ನಿಮಗೇ ಕಿರಿಕ್ ಇದೆಯಂತೆ. ನೋಡಿ

Exit mobile version