Site icon TUNGATARANGA

ಶಿವಮೊಗ್ಗ/ ಆರೋಗ್ಯ ಇಲಾಖೆ ಹಳೇ ಕಟ್ಟಡಗಳ ದ್ವಂಸ…., ದೂಳಿಗೆ ಜನರ ಹಿಡಿಶಾಪವೇಕೆ…?

ಶಿವಮೊಗ್ಗ, ನ.21:

ಆರೋಗ್ಯದ ಬೋಧನೆ ಮಾಡಬೇಕಿರುವ ಶಿವಮೊಗ್ಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಾನು ಮಾಡುವ ಕಾಮಗಾರಿಯ ಲೆಕ್ಕದಲ್ಲಿ ಜನರ ಆರೋಗ್ಯವನ್ನು ಹದಗೆಡಿಸುತ್ತದೆಯೇ? ಇಂತಹ ಪ್ರಶ್ನೆ ಸಾರ್ವಜನಿಕ ವಲಯದಿಂದ ಮೂಡಿದೆ. ಇದಕ್ಕೆ ಕಾರಣವೇನೆಂದರೆ ಇಡೀ ಬಿಹೆಚ್ ರಸ್ತೆ ಚರ್ಚ್ ಎದುರು ಈಗ ದೂಳು ಮಯವಾಗಿದೆ.

ಇದಕ್ಕೆ ಕಾರಣ ಡಿಹೆಚ್ ಓ ಕಛೇರಿಯ ಹಳೆಯ ಕಟ್ಟಡಗಳನ್ನು ಒಡೆದುಹಾಕಲಾಗುತ್ತಿದೆ. ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಹಳೆಯ ಕಟ್ಟಡವನ್ನು ಒಡೆಯುತ್ತಿದ್ದು, ಇಡೀ ಇಲಾಖೆ ಆವರಣ ಹಾಗೂ ಬಿಹೆಚ್ ರಸ್ತೆ ದೂಳುಮಯವಾಗಿದೆ.

ತುಂಬಾ ಹಿಂದಿನ ಅವಧಿಯಲ್ಲಿ ನಿರ್ಮಾಣವಾಗಿದ್ದ ಹಳೆಯ ಕಟ್ಟಡಗಳನ್ನು ತೆರವುಗೊಳಿಸುವ ಮೂಲಕ ಹೊಸ ಕಟ್ಟಡ ಕಟ್ಟುವ ಉದ್ದೇಶದಿಂದ ಈ ಹಳೆಯ ಕಟ್ಟಡಗಳನ್ನು ಜೆಸಿಬಿ ಸೇರಿದಂತೆ ನಾನಾ ಯಂತ್ರಗಳು ಒಡೆಯುತ್ತಿವೆ. ಅಲ್ಲಿದ್ದ ಶಿಕ್ಷಣ ಮತ್ತು ಆರೋಗ್ಯ ಇಲಾಖೆ ಫುಡ್ ಸೇಫ್ಟಿ ಇಲಾಖೆ ಸೇರಿದಂತೆ ಹಲವು ವಿಭಾಗಗಳು ಆರೋಗ್ಯ ಇಲಾಖೆಯ ಹೊಸ ಕಟ್ಟಡದ ನಾನಾ ಜಾಗಗಳಿಗೆ ಬದಲಾವಣೆಗೊಂಡಿವೆ.

ಧೂಳುಮಯವಾದ ಈ ತೆರವು ಕಾರ್ಯಾಚರಣೆಯಿಂದ ಜನರನ್ನು ಕಾಪಾಡಲು ಮ್ಯಾಟ್ ಕಟ್ಟುವಂತಹ ವ್ಯವಸ್ಥೆ ಮಾಡಬಹುದಾಗಿತ್ತು ಅಲ್ಲವೇ ಎಂಬುದು ಸಾರ್ವಜನಿಕರ ಪ್ರಶ್ನೆ.

ಚಿತ್ರಕೃಪೆ: ನಾಗರಾಜ್ ಶಣೈ, ಪತ್ರಕರ್ತರು

Exit mobile version