Site icon TUNGATARANGA

ಸರ್ಕಾರಿ ನೌಕರರ ಏಳನೇ ವೇತನ ಆಯೋಗದ ಸಮಿತಿ ರಚನೆ/ ನೌಕರರಲ್ಲಿ ಸಂತ: ಅಧ್ಯಕ್ಷ ಷಡಾಕ್ಷರಿ ಅಭಿನಂದನೆ

ಸರ್ಕಾರಿ ನೌಕರರಿಗೆ 7 ನೇ ವೇತನ ಆಯೋಗದ ರಚನೆಯ ಆದೇಶ ಹೊರಡಿಸಿದ್ದು. ಕಳೆದ ವಾರ 7 ನೇ ಆಯೋಗದ ಅಧ್ಯಕ್ಷರಾಗಿ ಸುಧಾಕರ್ ಅವರನ್ನು ನೇಮಿಸಲಾಗಿದೆ. ಈ ಆಯೋಗದಲ್ಲಿ ಮೂವರು ಅಧಿಕಾರಿಗಳನ್ನ ನೇಮಿಸಲಾಗಿದೆ. ಇದು ಏಳನೆ ವೇತನ ಆಯೋಗ ಆರಂಭದ ಸೂಚನೆಯಾಗಿದ್ದು ಎಲ್ಲಾ ಸರ್ಕಾರಿ ನೌಕರರು ಸಂತಸಗೊಂಡಿದ್ದಾರೆಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ತಿಳಿಸಿದರು.


ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರಿ ನಿವೃತ್ತ ಮುಖ್ಯಕಾರ್ಯದರ್ಶಿ ಸುಧಾಕರ್, ಸದಸ್ಯರಾಗಿ ಪಿ.ಬಿ.ರಾಮಮೂರ್ತಿ, ಶ್ರೀಕಾಂತ್ ಬಿ ವನವಳ್ಳಿ, ಹೆಪ್ಸಿಬಾ ರಾಣಿ ಕೊರ್ಲಾಪಾಟಿ ರನ್ನ ನೇಮಿಸಿರುವ ಮುಖ್ಯಮಂತ್ರಿ ಬೊಮ್ನಾಯಿ ಹಾಗೂ ಸರ್ಕಾರಕ್ಕೆ ಸಂಘ ಕೃತಜ್ಞತೆ ಸಲ್ಲಿಸುತ್ತದೆ ಎಂದರು.
ಇದೇ ಸಂದರ್ಭದರಲ್ಲಿ ಬಿಎಸ್ ಯಡಿಯೂರಪ್ಪರಿಗೆ ಅಭಿನಂದನೆ ಸಲ್ಲಿಸಲಿದ್ದೇನೆ ಎಂದ ಅಧ್ಯಕ್ಷ ಷಡಾಕ್ಷರಿ, ಇದುವರೆಗೂ ಐದೂವರೆ ವರ್ಷ ಕ್ಕೊಮ್ಮೆ ಆಯೋಗ ರಚನೆ ಆಗ್ತಾ ಇತ್ತು. ಈ ಬಾರಿ 4 ವರ್ಷ 7 ತಿಂಗಳಿಗೆ ರಚನೆ ಆಗಿದೆ ಆಯೋಗಕ್ಕೆ ವರದಿ ನೀಡಲು 6 ತಿಂಗಳ ಗಡುವು ನೀಡಲಾಗಿದೆ. ಇದರಿಂದ ಈ ವೇತನ ಸಮಿತಿ ರಚನೆ ಆಗಿದೆ ಎಂದರು.


ಇದುವರೆಗೆ ಆಯೋಗದಲ್ಲಿ ನೌಕರರ ಸುಧಾರಣೆ, ನೌಕರರ ತರಬೇತಿ ಮೊದಲಾದ ವಿಷಯಗಳನ್ನ ಸೇರಿಸಲಾಗಿತ್ತು. ಆದರೆ ಈ ಬಾರಿ ನೌಕರರ ಆಯೋಗದಲ್ಲಿ ವೇತನ ಭತ್ಯೆಗಳನ್ನ ಪರಿಷ್ಕರಿಸಲು ತಿಳಿಸಲಾಗಿದೆ. ಹಾಗಾಗಿ ಆಯೋಗಕ್ಕೆ ವರದಿ ನೀಡಲು ಹೆಚ್ಚಿನ ಸಮಯ ತೆಗೆದುಕೊಳ್ಳುವುದಿಲ್ಲ ಎಂದರು.


ಆಯೋಗ ರಚನೆ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಕಚೇರಿ ತಯಾರಾಗುತ್ತಿದೆ. ಮುಖ್ಯಸ್ಥರ ಆಹ್ವಾನ, ಕಮಿಟಿ ರಚನೆಗೆ ಒಂದು ತಿಂಗಳಾಗುತ್ತದೆ ಮಾರ್ಚ್ ನಲ್ಲಿ 7 ನೇ ವೇತನ ಆಯೋಗ ಜಾರಿಗೊಳ್ಳುವ ನಿರೀಕ್ಷೆ ಇದೆ.‌12 ಸಾವಿರ ಕೋಟಿ ಹಣ ಸರ್ಕಾರಕ್ಕೆ ಹೆಚ್ಚುವರಿಯಾಗಲಿದೆ. 40% ಲಾಭ ಸರ್ಕಾರಿ ನೌಕರರಿಗೆ 5, ಲಕ್ಷ 23 ಸಾವಿರ ಸರ್ಕಾರಿ ನೌಕರರು ಸೇರಿ 11 ಲಕ್ಷ ಕುಟುಂಬಸ್ಥರಿಗೆ ಅನುಕೂಲವಾಗಲಿದೆ ಎಂದರು.
15 ಸಾವಿರ ಕೋಟಿ ಆದಾಯ ಕಲೆಕ್ಟ್ ಆಗುತ್ತಿದೆ.‌ಸರ್ಕಾರದ ನಿರೀಕ್ಷೆ ಹೆಚ್ಚಾಗಲಿದೆ. ಮಾರ್ಚ್ ನಲ್ಲಿ ಅನುಷ್ಠಾನಗೊಳಿಸಬೇಕಿದೆ. ಸರ್ಕಾರ ನಿರೀಕ್ಷೆಗಿಂತ ಹೆಚ್ಚುಕೆಲಸ ಮಾಡಲು ನೌಕರರು ಸಿದ್ದರಿದ್ದಾರೆ.


ಪುಣ್ಯಕೋಟಿ ಯೋಜನೆಗೆ ಭರಪೂರ ರೆಸ್ಪಾನ್ಸ್ ದೊರೆಯುತ್ತಿದೆ. ಗೋವುಗಳ ಉಳಿಸುವ ಕೆಲಸ ಇದರಿಂದ ಆಗುತ್ತಿದ್ದು, 6 ಲಕ್ಷ ಜನರಲ್ಲಿ 100 ಜನರು ವಿರೋಧಿಸಿದರೆ ಅದು ವಿರೋಧವಲ್ಲ. ಡಿ ದರ್ಜೆ ನೌಕರರು ಅವರೇ ಮುಂದು ಬಂದು ಅನುದಾನ ನೀಡುತ್ತಿದ್ದಾರೆ ಎಂದರು.
ಈ ಪುಣ್ಯಕೋಟಿ ಯೋಜನೆಗೆ ನಿಲ್ಲುವುದಿಲ್ಲ. ಮುಂದಿನ ದಿನಗಳಲ್ಲಿ ಸರ್ಕಾರಿ ನೌಕರರ ಸಂಘ ಸರ್ಕಾರಿ ಶಾಲೆಗಳನ್ನ ದತ್ತು ಪಡೆಯಲಿದೆ, ಶಾಲೆ ಮಕ್ಕಳನ್ನೂ ದತ್ತು ತೆಗೆದುಕೊಳ್ಳಲು ಯೋಜಿಸಲಾಗುತ್ತಿದೆ, ಗಡಿಭಾಗದ ಶಾಲೆಗಳನ್ನ ದತ್ತು ತೆಗೆದುಕೊಳ್ಳುವ ನಿರೀಕ್ಷೆ ಇದೆ.
ಸುದ್ದಿಗೋಷ್ಠಿಯಲ್ಲಿ ಸಂಘದ ಮುಖಂಡರಾದ ಮೋಹನ್ ಕುಮಾರ್, ದಿನೇಶ್, ಕೃಷ್ಣಮೂರ್ತಿ, ಮಾರುತು ಮೊದಲಾದವರು ಉಪಸ್ಥಿತರಿದ್ದರು.

Exit mobile version