Site icon TUNGATARANGA

ದರೋಡೆಗೆ ಯತ್ನ/ ಜಯನಗರ ಠಾಣೆ ಇನ್ಸ್ ಸ್ಪೆಕ್ಟರ್ ಮಾದಪ್ಪ ಅವರ ತಂಡದಿಂದ ಬರ್ಜರಿ ಬೇಟೆ.., ಕಿರಾತಕರನ್ನು ಸೆದೆಬಡಿದದ್ದು ಹೇಗೆ ಗೊತ್ತಾ?

ಶಿವಮೊಗ್ಗ,ನ.18;

ನಗರದ ಜನಜಂಗುಳಿ ಇರುವ ಜಾಗದಲ್ಲೇ ದರೋಡೆ, ಸರಗಳ್ಳತನ, ಸುಲಿಗೆ ಪ್ರಕರಣಗಳು ಇತ್ತೀಚಿಗೆ ಹೆಚ್ಚುತ್ತಿವೆ. ಈ ನಡುವೆ ಶಿವಮೊಗ್ಗ ಜಯನಗರ ಪೊಲೀಸರು ಖಡಕ್ ಕ್ರಮ ಕೈಗೊಂಡಿದ್ದಾರೆ.

ಇಲ್ಲಿನ ಜಯನಗರ ಪೊಲೀಸ್ ಠಾಣೆ ಪೊಲೀಸ್ ಇನ್ಸ್ ಸ್ಪೆಕ್ಟರ್ ಹಾಗೂ ಕ್ರಿಮಿನಲ್ ಗಳಿಗೆ ಕಂಟಕವಾಗಿರುವ ಅಧಿಕಾರಿ ಎಂದೇ ಹೆಸರಾದ ಪಿಐ ಮಾದಪ್ಪ ಅವರ ತಂಡದ ಭರ್ಜರಿ ಬೇಟೆ ಇದು. ಈ ಮಾದಪ್ಪರ ತಂಡ ದರೋಡೆಕಾರರ ವಿರುದ್ದ ಕಾರ್ಯಾಚರಣೆ ನಡೆಸಿದೆ.

ದರೋಡೆಗೆ ಸಂಚು ನಡೆಸಲು ಹೊಂಚು ಹಾಕುತ್ತಿದ್ದ 5 ಜನರನ್ನ ಬಂಧಿಸಿ ಮಾರಕಾಸ್ತ್ರ, ಖಾರದ ಪುಡಿ, ದೊಣ್ಣೆ ಮತ್ತು ಬೈಕ್ ಗಳನ್ನ ವಶಪಡಿಸಿಕೊಳ್ಳಲಾಗಿದೆ.


ರವೀಂದ್ರ ನಗರದ ಪಾರ್ಕ್ ನಲ್ಲಿ ಹಾಥಿನಗರದ ನಿವಾಸಿ ವಸಂತ್ (31), ಕಾಶಿಪುರದ ನಿವಾಸಿ ರಾಜು (28) ಗೋವಿಂದ (27), ಹೊಳೆಬೆನವಳ್ಳಿಯ ಅಭಿಲಾಶ ಯಾನೆ ಜಂಗಲ್ ಅಭಿ (21), ವೆಂಕಟೇಶ ನಗರದ ಸಂತೋಷ್ (29) ಐವರು ಮಾರಕಾಸ್ತ್ರಗಳನ್ನ ಹೊಂದಿದ್ದು ದರೋಡೆಗೆ ಯೋಜನೆಯನ್ನ ರೂಪಿಸುತ್ತಿದ್ದರು ಎನ್ನಲಾಗಿದೆ.
ಜಯನಗರ ಪೊಲೀಸ್ ಠಾಣೆ ಪಿಐ ಮಾದಪ್ಪ ಸಂಜೆ 8-30 ರ ವೇಳೆಗೆ ಗಸ್ತು ತಿರುಗುವಾಗ ಈ ಐವರು ಪತ್ತೆಯಾಗಿದ್ದಾರೆ. ಈ ಐವರನ್ನ ವಶಕ್ಕೆ ಪಡೆದು ಇವರನ್ನ ತಪಾಸಣೆ ನಡೆಸಿದಾಗ ದೊಣ್ಣೆ, ಒ಼ಂದು ಕಬ್ಬಿಣದ ರಾಡು, ಎರಡು ಚಾಕು ಹಾಗೂ 50 ಗ್ರಾಂ ಖಾರದ ಪುಡಿ ಪತ್ತೆಯಾಗಿದೆ.
ಈ ಮಾರಕಾಸ್ತ್ರಗಳನ್ನ‌ ಯಾಕೆ ಇಟ್ಟುಕೊಂಡಿದ್ದೀರಿ ಎಂದು ಪ್ರಶ್ನಿಸಿದಾಗ ಬಾಯಿ ಬಿಡದ ಐನಾತಿಗಳನ್ನ ಠಾಣೆಗೆ ಕರೆತಂದು ವಿಚಾರಣೆಗೆ ಒಳಪಡಿಸಿದಾಗ ಹಣ, ಆಭರಣ ಸುಲಿಗೆಗೆ ಈ ಮಾರಕಾಸ್ತ್ರಗಳನ್ನ ಇರುವುದಾಗಿ ಬಾಯಿಬಿಟ್ಟಿದ್ದಾರೆ. ಇವರನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ.

Exit mobile version