ವೀರಶೈವ ಕಲ್ಯಾಣ ಮಂದಿರ ಆಡಳಿತ ಮಂಡಳಿ ನೇತೃತ್ವದಲ್ಲಿ ದಾನಿಗಳ ಸಹಕಾರದಿಂದ ಸುಮಾರು ೮ ಕೋಟಿ ರೂ. ವೆಚ್ಚದಲ್ಲಿ ಜೆ.ಹೆಚ್. ಪಟೇಲ್ ಬಡಾವಣೆಯಲ್ಲಿ ನಿರ್ಮಿಸಿರುವ ನೂತನ ವೀರಶೈವ ಸಾಂಸ್ಕೃತಿಕ ಭವನದ ಉದ್ಘಾಟನಾ ಸಮಾರಂಭ ನ. ೧೮ ರಂದು ನಡೆಯಲಿದೆ ಎಂದು ಆಡಳಿತ ಮಂಡಳಿ ಗೌರವ ಕಾರ್ಯದರ್ಶಿ ಎನ್.ಜೆ. ರಾಜಶೇಖರ್ ಹೇಳಿದರು.
ಅವರು ಇಂದು ವೀರಶೈವ ಕಲ್ಯಾಣ ಮಂದಿರದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವೀರಶೈವ ಕಲ್ಯಾಣ ಮಂದಿರ ೧೯೬೨ ರಲ್ಲಿಯೇ ಆರಂಭವಾಗಿ ಬಡವರ ಮದುವೆ ಮತ್ತಿತರ ಕಾರ್ಯಕ್ರಮಗಳಿಗೆ ವರದಾನವಾಗಿತ್ತು. ಸೇವೆಯ ರೂಪದಲ್ಲಿ ನಾವು ಈ ಕಲ್ಯಾಣ ಮಂದಿರವನ್ನು ಲಾಭವಿಲ್ಲದೇ ಆರಂಭಿಸಿದ್ದೆವು. ಈಗ ಅದರ ಮುಂದಿನ ಭಾಗವಾಗಿ ಜೆ.ಹೆಚ್. ಪಟೇಲ್ ಬಡಾವಣೆಯಲ್ಲಿ ಸುಸಜ್ಜಿತ ಸಾಂಸ್ಕೃತಿಕ ಭವನ ನಿರ್ಮಿಸಿದ್ದೇವೆ ಎಂದರು.
ಈ ಭವನದಲ್ಲಿ ಸುಮಾರು ೧೪ ರೂಂಗಳಿವೆ. ಅಡುಗೆ ಮನೆ, ವಿಶಾಲವಾದ ಹಾಲ್ ಹೊಂದಿದ್ದು ಕೇವಲ ೧.೨೦ ಲಕ್ಷ ರೂ.ನಲ್ಲಿ ಮದುವೆಗಳಿಗೆ ಸಮುದಾಯ ಭವನ ನೀಡಲಾಗುವುದು. ಮಧ್ಯಮ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ಈ ಶುಲ್ಕ ನಿಗದಿಪಡಿಸಲಾಗಿದೆ. ಈ ಸಾಂಸ್ಕೃತಿಕ ಭವನದಲ್ಲಿ ಕೇವಲ ಮದುವೆಗಳಲ್ಲದೇ ಸಮಾಜ ಸುಧಾರಕರ ಕಾರ್ಯಕ್ರಮಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ನಡೆಯಲಿವೆ. ಸಭಾಂಗಣಕ್ಕೆ ಶ್ರೀಮತಿ ಮೈತ್ರಾ ದೇವಿ, ಬಿ.ಎಸ್.ಯಡಿಯೂರಪ್ಪ ಸಭಾಂಗಣ ಎಂದು ಹೆಸರಿಡಲಾಗಿದೆ ಎಂದರು.
ನ. ೧೮ ರಂದು ಬೆಳಗ್ಗೆ ಗೋ ಪೂಜೆ, ವಾಸ್ತು ಹೋಮ ಮುಂತಾದ ವಿಶೇ? ಪೂಜೆಗಳು ನಡೆಯಲಿವೆ. ನಂತರ ಸಭಾ ಕಾರ್ಯಕ್ರಮ ೧೨.೦೫ ಕ್ಕೆ ನಡೆಯಲಿದ್ದು, ಬಾಳೆಹೊನ್ನೂರು ರಂಭಾಪುರಿ ಶ್ರೀಗಳಾದ ಡಾ. ವೀರ ಸೋಮೇಶ್ವರ ರಾಜದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸುವರು. ಯಡಿಯೂರು ಕ್ಷೇತ್ರದ ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿ, ಮಳಲಿ ಮಠದ ಡಾ. ಗುರು ನಾಗಭೂ?ಣ ಶಿವಾಚಾರ್ಯ ಸ್ವಾಮೀಜಿ, ಬಿಳಕಿ ಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಲಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಾಂಸ್ಕೃತಿಕ ಭವನ ಉದ್ಘಾಟಿಸಲಿದ್ದಾರೆ ಎಂದರು.
ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಪ್ರಸಾದ ಮಂದಿರ, ಸಂಸ
ದ ಬಿ.ವೈ. ರಾಘವೇಂದ್ರ ಕೊಠಡಿಗಳ ಉದ್ಘಾಟಿಸುವರು. ಟಿ.ವಿ. ಈಶ್ವರಪ್ಪ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಶಾಸಕರಾದ ಆಯನೂರು ಮಂಜುನಾಥ್, ಎಸ್.ರುದ್ರೇಗೌಡ, ಡಿ.ಎಸ್. ಅರುಣ್, ಮೇಯರ್ ಶಿವಕುಮಾರ್, ರಾಜ್ಯ ಸರ್ಕಾರ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ?ಡಾಕ್ಷರಿ, ಸೂಡಾ ಅಧ್ಯಕ್ಷ ಎನ್.ಜೆ. ನಾಗರಾಜ್ ಸೇರಿದಂತೆ ಹಲವು ಮುಖಂಡರು
ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು ಎಂದರು.
ಗೋಷ್ಠಿಯಲ್ಲಿ ಪ್ರಮುಖರಾದ ಟಿ.ವಿ. ಈಶ್ವರಯ್ಯ, ಕೆ.ಆರ್. ವೀರಣ್ಣ, ಎಸ್.ಎನ್. ರುದ್ರಮುನಿ ಸಜ್ಜನ್, ಎಂ.ಎನ್. ಒಡೆಯರ್, ಎಸ್.ಪಿ. ಜಗನ್ನಾಥ್, ಎಸ್.ಎಸ್. ಜ್ಯೋತಿಪ್ರಕಾಶ್, ಜೆ. ವಿರೂಪಾಕ್ಷಪ್ಪ, ಹೆಚ್.ವಿ.ಸತೀಶ್, ಎನ್.ಜೆ. ಪರಮೇಶ್ವರಪ್ಪ, ಈಶ ಪ್ರಭು, ಎನ್.ಜಿ.ಪರಮೇಶ್ವರಪ್ಪ, ಪಿ.ಎಸ್.ಹಾಲಸ್ವಾಮಿ, ಹೆಚ್.ಎಲ್.ರವಿ, ಎಂ.ಮಂಜುನಾಥ್, ಎಂ.ಪಿ.ನಂದೀಶ್ ಮುಂತಾದವರಿದ್ದರು.