Site icon TUNGATARANGA

ಬೆಳಗ್ಗಿನಿಂದಲೇ ಸ್ಮಾರ್ಟ್‌ಸಿಟಿ ವೀಕ್ಷಣೆ ಮಾಡಿ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡ: ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ

ಇಂದು ಬೆಳಗ್ಗಿನಿಂದಲೇ ಸ್ಮಾರ್ಟ್‌ಸಿಟಿ ವೀಕ್ಷಣೆ ಮಾಡಿದ ಮಾಜಿ ಸಚಿವ ಹಾಗೂ ಶಿವಮೊಗ್ಗ ನಗರ ಶಾಸಕ ಕೆ.ಎಸ್.ಈಶ್ವರಪ್ಪನವರು ಕೆಲವು ಕಡೆ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.


ರಸ್ತೆ ಮಧ್ಯದಲ್ಲಿರುವ ಕೆಲವು ಹೊಂಡಗಳು ಮತ್ತು ಯುಜಿ ಕೇಬಲ್‌ಗಳ ನಿಯಂತ್ರಣ ಬಾಕ್ಸ್ ಕೆಳಗಡೆ ಅಪಾಯಕಾರಿ ಸ್ಥಿತಿಯಲ್ಲಿ ಇರುವ ಕೇಬಲ್‌ಗಳ ಬಗ್ಗೆ ಪತ್ರಕರ್ತರು ಗಮನ ಸೆಳೆದಾಗ ಈ ಬಗ್ಗೆ ಕಂಟ್ರಾಕ್ಟರ್‌ಗಳಿಗೆ ಈಗಾಗಲೆ ಸೂಚನೆ ನೀಡಿದ್ದು, ಎಲ್ಲಾ ಕಾಮಗಾರಿಯನ್ನು ಅಚ್ಚುಕಟ್ಟಾಗಿ ಮುಗಿಸಿ ಮುಕ್ತಾಯ ಹಂತದಲ್ಲಿ ಕೂಡ ಯಾವುದೇ ಲೋಪವಾಗದಂತೆ ಸಣ್ಣಪುಟ್ಟ

ಲೋಪಗಳನ್ನು ಬಿಡದೆ ಸರಿಪಡಿಸಬೇಕೆಂದು ತಾಕೀತು ಮಾಡಿದ್ದೇನೆ. ಏನಾದರೂ ಲೋಪವಿದ್ದಲ್ಲಿ ಗಮನಕ್ಕೆ ತರುವಂತೆ ಅವರು ಹೇಳಿದರು.
ಐಬಿ ಸರ್ಕಲ್‌ನಲ್ಲಿ ಹೆದ್ದಾರಿ ಇಲಾಖೆಯ ಸಲಹೆ ಪಡೆದು ಕಾನೂನಿಗೆ ಧಕ್ಕೆಯಾಗದಂತೆ ಸೂಕ್ತ ಸ್ಥಳದಲ್ಲಿ ಆ ಪ್ರದೇಶದಲ್ಲಿ ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿಯ ಪ್ರತಿಮೆ ಸ್ಥಾಪಿಸಲು ಕೂಡ ಸ್ಮಾರ್ಟ್ ಸಿಟಿ ಕ್ರಮಕೈಗೊಂಡಿದ್ದು, ಆ ಸ್ಥಳವನ್ನು ಮತ್ತು ಸಂಪೂರ್ಣ ಪ್ರವಾಸಿಮಂದಿರದ ವೃತ್ತವನ್ನು ಸೌಂದರೀಕರಣ ಮಾಡಲಾಗುವುದು ಎಂದರು.


ಆರು ಅಡಿ ಎತ್ತರದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳ ಪ್ರತಿಮೆಯನ್ನು ನೀಡಲು ಆದಿಚುಂಚನಗಿರಿ ಸಂಸ್ಥಾನ ಮುಂದೆ ಬಂದಿದ್ದು, ಸ್ಮಾರ್ಟ್‌ಸಿಟಿ ವತಿಯಿಂದ ಆದಿಚುಂಚನಗಿರಿ ಶಾಲೆಯ ಬಳಿಯ ವೃತ್ತದಲ್ಲಿ ಪ್ರತಿಮೆ ಸ್ಥಾಪನೆಗೆ ಕಾಮಗಾರಿ ಪ್ರಾರಂಭವಾಗಿದೆ.
ರಾಜೇಂದ್ರ ನಗರದಲ್ಲಿ ಅತ್ಯಾಧುನಿಕ ಷೆಟಲ್ ಬ್ಯಾಡ್ಮಿಂಟನ್ ಇನ್‌ಡೋರ್ ಸ್ಟೇಡಿಯಂನ್ನು ಕೂಡ ಇಂದು ಉದ್ಘಾಟಿಸಲಾಯಿತು.

ಬಳಿಕ ದೀನದಯಾಳ್ ರಸ್ತೆ ಶರಾವತಿ ನಗರ ಐಬಿ ಸರ್ಕಲ್, ಹಾಲ್ಕೊಳ ಸರ್ಕಲ್, ಗೋಪಾಳ, ಮಹಾವೀರ ಸರ್ಕಲ್, ಕೇಂದ್ರ ಲೈಬ್ರರಿ, ಶಿವಪ್ಪ ನಾಯಕ ಅರಮನೆ ನವೀಕರಣಗೊಳಿಸುತ್ತಿದ್ದು, ಆ ಕಾಮಗಾರಿಯನ್ನು ಕೂಡ ವೀಕ್ಷಿಸಿ ಬೇಗನೆ ಮುಗಿಸುವಂತೆ ನಿರ್ದೇಶನ ನೀಡಿದರು. ಮಹಾವೀರ ವೃತ್ತದಲ್ಲಿ ಅಳವಡಿಸಿದ ನೂತನ ಸಿಗ್ನಲ್ ವ್ಯವಸ್ಥೆ ಡಿಸ್‌ಪ್ಲೇ ಬೋರ್ಡ್‌ನ್ನು ವೀಕ್ಷಿಸಿದರು.


ಈ ಸಂದರ್ಭದಲ್ಲಿ ಸೂಡಾ ಅಧ್ಯಕ್ಷ ನಾಗರಾಜ್, ಮೇಯರ್ ಶಿವಕುಮಾರ್, ಉಪ ಮೇಯರ್ ಲಕ್ಮ್ಷೀಶಂಕರ್‌ನಾಯ್ಕ್, ಪಾಲಿಕೆ ಸದಸ್ಯರಾದ ಸುವರ್ಣಶಂಕರ್, ಆರತಿ ಆ.ಮ. ಪ್ರಕಾಶ್, ಸುರೇಖಾ ಮುರುಳೀಧರ್, ಸುನಿತಾ ಅಣ್ಣಪ್ಪ, ಆಯುಕ್ತರಾದ ಮಾಯಣ್ಣಗೌಡ ಹಾಗೂ ಸ್ಮಾರ್ಟ್‌ಸಿಟಿ, ಮಹಾನಗರ ಪಾಲಿಕೆ, ನಗರ ನೀರು ಸರಬರಾಜು ಮಂಡಳಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Exit mobile version