Site icon TUNGATARANGA

ನಗರದಲ್ಲಿ ಸಂಚರಿಸುವ ಆಟೋಗಳಿಗೆ ಜಿಲ್ಲಾಧಿಕಾರಿ ಡಾ|| ಆರ್.ಸೆಲ್ವಮಣಿ ಖಡಕ್ ವಾರ್ನಿಂಗ್| ಪ್ರತಿ 1.50ಕಿ.ಮೀ.ಗಳಿಗೆ ರೂ.40 | ನಂತರದ ಪ್ರತಿ ಕಿ.ಮೀ.ಗೆ ರೂ20 ರಂತೆ ದರ ನಿಗಧಿಪಡಿಸಿ ನಿರ್ಣಯ | ಮೀಟರ್ ಅಳವಡಿಕೆ ಕಡ್ಡಾಯ

ಶಿವಮೊಗ್ಗ,
ಶಿವಮೊಗ್ಗ ನಗರದಲ್ಲಿ ಸಂಚರಿಸುವ ಆಟೋಗಳಿಗೆ ಪ್ರತಿ ೧.೫೦ಕಿ.ಮೀ.ಗಳಿಗೆ ರೂ40 ಹಾಗೂ ನಂತರದ ಪ್ರತಿ ಕಿ.ಮೀ.ಗೆ ರೂ.೨೦/-ರಂತೆ ದರ ನಿಗಧಿ ಪಡಿಸಿ ನಿರ್ಣಯ ಕೈಗೊಳ್ಳಲಾಗಿದ್ದು, ಎಲ್ಲಾ ಆಟೋಗಳ ಚಾಲಕರು ನಿಗಧಿಪಡಿಸಿದ ದರದಂತೆ ಸೇವೆ ನೀಡಬೇಕೆಂದು ಜಿಲ್ಲಾಧಿಕಾರಿ ಡಾ|| ಆರ್.ಸೆಲ್ವಮಣಿ ಅವರು ಹೇಳಿದರು.


ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಆಟೋ ದರ ನಿಗಧಿ ಮತ್ತು ಸಾರಿಗೆ ಇಲಾಖೆಯ ವಿವಿಧ ವಿಷಯಗಳ ಕುರಿತು ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡು ತ್ತಿದ್ದರು. ಆಟೋ ಚಾಲಕರು ತಮಗೆ ಬೇಕಾದಂತೆ ದರ ನಿಗಧಿಪಡಿಸಿಕೊಂಡು ಸಾರ್ವಜನಿಕರಿಂದ ವಸೂಲು ಮಾಡುತ್ತಿ ರುವ ಬಗ್ಗೆ ಬಂದ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ, ಹಾಗೂ ಕಳೆದ ಆರೇಳು ವರ್ಷಗಳಿಂದ ಆಟೋ ಪ್ರಯಾಣ ದರ ಪರಿಷ್ಕರಣೆಯಾಗದಿರುವು ದನ್ನು ಗಮನಿಸಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದವರು ತಿಳಿಸಿದರು.


ಅಲ್ಲದೇ ಪ್ರತಿ ರಾತ್ರಿ ೧೦ರಿಂದ ಬೆಳಿಗ್ಗೆ ೫ಗಂಟೆಯವರೆಗೆ ಪ್ರಯಾಣದಲ್ಲಿ ಶೇ.೫೦ರಷ್ಟು ಹೆಚ್ಚಿಸಲು ಅನುಮತಿ ನೀಡಿದೆ ಎಂದ ಅವರು, ನಗರದಲ್ಲಿ ಸಂಚರಿಸಲು ಎಲ್ಲಾ ಆಟೋ ಚಾಲಕರು ತಮ್ಮ ಆಟೋಗಳಿಗೆ ಮುಂದಿನ ಒಂದು ತಿಂಗಳ ಕಾಲಾವಧಿಯೊಳಗಾಗಿ ಕಡ್ಡಾಯವಾಗಿ ಮೀಟರ್ ಅಳವಡಿಸಿ ಕೊಳ್ಳಬೇಕು. ತಪ್ಪಿದಲ್ಲಿ ಅಂತಹ ಆಟೋ ಗಳ ಸಂಚಾರಕ್ಕೆ ನೀಡಿದ ಅನುಮ ತಿಯನ್ನು ನಿರಾಕರಿಸುವುದರ ಜೊತೆಗೆ ಚಾಲಕರಿಗೆ ದಂಡ ವಿಧಿಸಲಾಗುವುದು ಎಂದರು.


ಎಲ್ಲಾ ಆಟೋಗಳ ಚಾಲಕರು ತಮ್ಮ ಕರ್ತವ್ಯದ ಅವಧಿಯಲ್ಲಿ ಸಮವಸ್ತ್ರ ಧರಿಸಬೇಕು. ವಾಹನಗಳ ವಿಮೆ ಜಾರಿ ಯಲ್ಲಿರಬೇಕು. ಸಕಾದಲ್ಲಿ ವಾಹನದ ಪರವಾನಗಿ ನವೀಕರಿಸಿಕೊಂಡಿರುವುದು ಕಡ್ಡಾಯವಾಗಿದೆ ಎಂದ ಅವರು, ಸಾರಿಗೆ ನಿಯಮ ಪಾಲನೆ ಮಾಡದ ಆಟೋ ಚಾಲಕರ ವಿರುದ್ಧ ನಿಯಮಾನುಸಾರ ಕ್ರಮ ಅನಿವಾರ್ಯವಾಗಲಿದೆ ಎಂದರು.


ಚಾಲಕರು ತಮ್ಮ ಆಸನದ ಇಕ್ಕೆಲ ಗಳಲ್ಲಿ ಪ್ರಯಾಣಿಕರನ್ನು ಕೂರಿಸಿಕೊಂಡು ಪ್ರಯಾಣಿಸುವುದು, ಶಾಲಾ ಮಕ್ಕಳನ್ನು ನಿಗಧಿಪಡಿಸಿದ ಸಂಖ್ಯೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಕೂರಿಸಿಕೊಂಡು ಸುರಕ್ಷತಾ ಕ್ರಮಗಳನ್ನು ಅನುಸರಿಸದೇ ಅತ್ಯಂತ ವೇಗವಾಗಿ ಸಂಚರಿಸುವುದು ಹಾಗೂ ಸೀಟುಗಳ ಲೆಕ್ಕದಲ್ಲಿ ಪ್ರಯಾಣಿಕರನ್ನು ಕರೆದೊಯ್ಯುವುದು ಸಲ್ಲದು ಎಂದ ಅವರು, ಇಂತಹ ಸಂದರ್ಭಗಳಲ್ಲಿ ಆಟೋ ಚಾಲಕರು ಮುನ್ನೆಚ್ಚರಿಕಾ ಕ್ರಮ ಗಳನ್ನು ಅನುಸರಿಸುವಂತೆ ಸೂಚಿಸಿದರು.


ನಗರದ ರೈಲ್ವೇ ನಿಲ್ದಾಣ ಮತ್ತು ಬಸ್ ನಿಲ್ದಾಣಗಳ ಸಮೀಪದಲ್ಲಿ ಮುಂಗಡ ಪಾವತಿಸುವ ಆಟೋಗಳ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗುವುದು. ನಗರದ ೧೮೦ಕ್ಕೂ ಹೆಚ್ಚು ಸ್ಥಳಗಳಲ್ಲಿರುವ ಆಟೋ ನಿಲ್ದಾಣಗಳ ಪೈಕಿ ಕೆಲವು ನಿಲ್ಧಾಣಗಳಲ್ಲಿ ಸ್ಮಾರ್ಟ್‌ಸಿಟಿ ಕಾಮಗಾರಿಯಿಂದಾಗಿ ಆಟೋ ನಿಲ್ದಾಣ ಅಸ್ತವ್ಯಸ್ಥಗೊಂಡಿವೆ. ಅವುಗಳನ್ನು ತ್ವರಿತವಾಗಿ ದುರಸ್ತಿ ಮಾಡಿಸಿ, ಸುಗಮ ಸಂಚಾರಕ್ಕೆ ಕ್ರಮ ವಹಿಸಲಾಗು ವುದು. ಈ ಬಗ್ಗೆ ಸ್ಮಾರ್ಟ್‌ಸಿಟಿ ಆಯು ಕ್ತರಿಗೆ ಸೂಚಿಸಲಾಗುವುದು ಎಂದರು.


ನಗರದ ಬಿ.ಹೆಚ್. ರಸ್ತೆ, ನೆಹರೂ ರಸ್ತೆ ಸೇರಿದಂತೆ ಪ್ರಮುಖ ಜನಸಂದ ಣಿಯ ಪ್ರದೇಶಗಳಲ್ಲಿ ರಸ್ತೆಯ ಮೇಲೆ ಆಟೋಗಳನ್ನು ನಿಲ್ಲಿಸಿ, ಸಾರ್ವಜನಿಕ ಸಂಚಾರಕ್ಕೆ ಅಡಚಣೆ ಉಂಟು ಮಾಡುತ್ತಿರುವುದು ಕಂಡುಬಂದಿದ್ದು, ಆಟೋ ಚಾಲಕರು ಇಂತಹ ಅವಘಡ ಗಳಿಗೆ ಅವಕಾಶ ನೀಡದಂತೆ ಗಮನಹರಿಸಬೇಕೆಂದರು.


ಸಂಚರಿಸುವ ಇ-ಆಟೋಗಳಿಗೆ ಅನುಕೂಲವಾಗುವಂತೆ ನಗರದ ೪-೫ ಸ್ಥಳಗಳಲ್ಲಿ ಚಾರ್ಜಿಂಗ್ ಪಾಯಿಂಟ್‌ಗ ಳನ್ನು ತೆರೆಯಲು ಇರಬಹುದಾದ ಸಾಧ್ಯಗಳ ಕುರಿತು ಮಾಹಿತಿ ನೀಡುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ಕುಮಾರ್, ಪ್ರೊಬೇಷನರ್ ಅಧಿಕಾರಿ ದಲ್‌ಜೀತ್‌ಕುಮಾರ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಗಂಗಾಧರ್ ಸೇರಿದಂತೆ ಸಂಬಂಧಿತ ವಿವಿಧ ಇಲಾಖೆ ಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಆಟೋ ಚಾಲಕರ ಸಂಘದ ಅಧ್ಯಕ್ಷರು-ಪದಾಧಿಕಾರಿಗಳು ಉಪಸ್ಥಿತರಿದ್ದರು.

Exit mobile version