Site icon TUNGATARANGA

ವಿಧಾನಸಭಾ ಚುನಾವಣೆಯಲ್ಲಿ ಆಶೀರ್ವದಿಸಿ ಕಳಿಸಿದರೆ ಮಂತ್ರಿಯಾಗಿ ವಾಪಾಸ್ ಬರುತ್ತೇನೆ: ಮಾಜಿ ಶಾಸಕ ಮಧು ಬಂಗಾರಪ್ಪ

ಸಾಗರ : ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನನ್ನನ್ನು ಆಶೀರ್ವದಿಸಿ ಕಳಿಸಿದರೆ ಮಂತ್ರಿಯಾಗಿ ವಾಪಾಸ್ ಬಂದು ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಶ್ರಮಿಸುತ್ತೇನೆ ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ತಿಳಿಸಿದರು.


ತಾಲ್ಲೂಕಿನ ತಾಳಗುಪ್ಪದಲ್ಲಿ ಅವರು ಕಾಂಗ್ರೇಸ್ ಪಕ್ಷದ ಬೂತ್ ಮಟ್ಟದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.


ಆನರು ಆಶೀರ್ವಾದ ಮಾಡಿದರೆ ಮಾತ್ರ ಅಧಿಕಾರಕ್ಕೆ ಬರಲು ಸಾಧ್ಯ. ಕಾರ್ಯಕರ್ತರನ್ನು, ಜನರನ್ನು ತಲುಪಿ ಅವರ ಸಮಸ್ಯೆಗೆ ಸ್ಪಂದಿಸುವುದು ಶಾಸಕರಾಗಿರುವವರ ಆದ್ಯ ಕರ್ತವ್ಯ. ಸದ್ಯದ ಸ್ಥಿತಿಯಲ್ಲಿ ಸೊರಬ ಕ್ಷೇತ್ರದ ಜನಪ್ರತಿನಿಧಿಗಳು, ಅಧಿಕಾರಿಗಳ ಹಣದ ಹಿಂದೆ ಬಿದ್ದಿದ್ದಾರೆ. ಈ ಅವಧಿಯಲ್ಲಿ ಸೊರಬದಲ್ಲಿ ೧೫ ಜನ ತಹಶೀಲ್ದಾರರು ವರ್ಗಾವಣೆಯಾಗಿರುವುದೇ ಸಾಕ್ಷಿ. ಮುಂದಿನ ದಿನಗಳಲ್ಲಿ ಜನರು ಸಮಸ್ಯೆಯಿಂದ ಮುಕ್ತರಾಗಲು ಕಾಂಗ್ರೇಸ್ ಅಧಿಕಾರಕ್ಕೆ ಬರುವುದು ಅತ್ಯಾಗತ್ಯ ಎಂದರು.


ಕಳೆದ ಬಾರಿ ನಾನು ಸೋತಿದ್ದರಿಂದ ಕ್ಷೇತ್ರವು ಅಭಿವೃದ್ದಿಯಲ್ಲಿ ಹಿನ್ನೆಡೆ ಅನುಭವಿಸಿದೆ. ಜನರು ನೀಡಿದ ತೀರ್ಪಿಗೆ ನಾನು ತಲೆಬಾಗುತ್ತೇನೆ. ಆದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷವನ್ನು ಗೆಲ್ಲಿಸಲು ಕಾರ್ಯಕರ್ತರು ಈಗಿನಿಂದಲೇ ಕ್ಷೇತ್ರವ್ಯಾಪ್ತಿಯಲ್ಲಿ ಕೆಲಸ ಮಾಡಲು ಕರೆ ನೀಡಿದರು.


ಇದೇ ಸಂದರ್ಭದಲ್ಲಿ ವಿವಿಧ ಪಕ್ಷಗಳಿಂದ ೫೦ಕ್ಕೂ ಹೆಚ್ಚು ಜನರು ಕಾಂಗ್ರೇಸ್ ಸೇರ್ಪಡೆಗೊಂಡರು. ಕೂಡ್ಲಿಮಠದದಲ್ಲಿ ಮುವತ್ತಕ್ಕೂ ಹೆಚ್ಚು ಮನೆಗಳನ್ನು ಒಕ್ಕಲೆಬ್ಬಿಸಲು ಮುಂದಾಗಿರುವುದರ ವಿರುದ್ದ ತಾವು ನ್ಯಾಯದ ಪರವಾಗಿ ನಿಲ್ಲುತ್ತೇವೆಂದು ಸ್ಥಳೀಯರಿಗೆ ಭರವಸೆ ನೀಡಿದರು.
ಕಾಂಗ್ರೇಸ್ ಪ್ರಮುಖರಾದ ಕೆರೆಯಪ್ಪ ಎನ್., ಗುರು, ಅಶೋಕ ಬರದವಳ್ಳಿ, ಹುಚ್ಚಪ್ಪ ಮಂಡಗಳಲೆ, ಶಿವಮೂರ್ತಿ, ಗಣಪತಿ ಜಿ.ಆರ್., ನಾರಾಯಣ ಗುಡ್ಡೆಮನೆ, ಪರಶುರಾಮ್, ಮಧು, ಮಂಜು ಕನ್ನಡಿಗ, ಹುಲ್ತಿಕೊಪ್ಪ ಗಣಪತಿ ಇನ್ನಿತರರು ಹಾಜರಿದ್ದರು

Exit mobile version