Site icon TUNGATARANGA

ನ.16 ರಿಂದ ಮುಷ್ಟಿ ಅಕ್ಕಿ ಯೋಜನೆ ರಾಷ್ಟ್ರೀಯ ಅನ್ನದಾನ ಸಮಿತಿ ಸದಸ್ಯ ಕೆ.ಈ. ಕಾಂತೇಶ್

ಶಿವಮೊಗ್ಗ,
ಶಬರಿಮಲೈ ಅಯ್ಯಪ್ಪ ಸ್ವಾಮಿ ಸೇವಾ ಸಮಾಜಂ (ಎಸ್‌ಎಎಎಸ್) ಶಿವಮೊಗ್ಗ ಘಟಕದ ವತಿಯಿಂದ ಶಬರಿಮಲೈ ಸನ್ನಿಧಾನದಲ್ಲಿ ನೀಡುವ ಅನ್ನದಾನಕ್ಕಾಗಿ ಮುಷ್ಟಿ ಅಕ್ಕಿ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಷ್ಟ್ರೀಯ ಅನ್ನದಾನ ಸಮಿತಿ ಸದಸ್ಯ ಕೆ.ಈ. ಕಾಂತೇಶ್ ಹೇಳಿದರು.


ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಎಸ್‌ಎಎಎಸ್ ಸಂಘಟನೆಯು ಕಳೆದ ೧೮ ವರ್ಷಗ ಳಿಂದ ರಾಷ್ಟ್ರಾದ್ಯಂತ ಧಾರ್ಮಿಕ ಸಾಮಾಜಿಕ ಸೇವೆ ಮಾಡುತ್ತಾ ಬಂದಿದೆ. ಇದರ ಮುಂದುವರಿದ ಭಾಗವಾಗಿ ಇದೆ ಮೊದಲ ಬಾರಿ ಶಿವಮೊಗ್ಗ ನಗರ ಘಟಕದ ವತಿಯಿಂದ ನಗರದ ಭಕ್ತಾದಿಗಳಿಂದ ಕನಿಷ್ಟ ಒಂದು ಮುಷ್ಟಿ ಅಕ್ಕಿಯನ್ನು ಸಂಗ್ರಹಿಸಿ ಶಬರಿಮಲೈ ಸನ್ನಿಧಾನದ ಅನ್ನದಾನಕ್ಕಾಗಿ ಕಳಿಸಿಕೊಡಲಾಗುವುದು ಎಂದರು.


ಈ ಕಾರ್ಯ ನ.೧೬ರಿಂದ ೨೦ರವರೆಗೆ ನಗರದಾ ದ್ಯಂತ ಅಯ್ಯಪ್ಪ ರಥ ಸಂಚರಿಸಲಿದ್ದು, ಈ ರಥದಲ್ಲಿ ಅಕ್ಕಿ, ಬೇಳೆ, ಕಾಳು ಅಡಿಗೆ ಎಣ್ಣೆ ಸಂಗ್ರಹ ಅಭಿಯಾನ ನಡೆಯಲಿದೆ. ಅಯ್ಯಪ್ಪ ರಥಕ್ಕೆ ನ.೧೬ರಂದು ಬೆಳಿಗ್ಗೆ ೮-೩೦ಕ್ಕೆ ರಾಮಣ್ಣ ಶ್ರೇಷ್ಠಿ ಪಾರ್ಕಿನ ದೇವಸ್ಥಾನದಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಚಾಲನೆ ನೀಡುವರು. ಈ ಸಂದರ್ಭದಲ್ಲಿ ಬಸವಕೇಂದ್ರದ ಶ್ರೀ ಮರುಳಸಿದ್ದಸ್ವಾಮೀಜಿ ಉಪಸ್ಥಿತರಿರುವರು ಎಂದರು.


ಡಿ.೧೬ರಂದು ಶುಭಮಂಗಳ ಕಲ್ಯಾಣ ಮಂದಿರದ ಆವರಣದಲ್ಲಿ ಸಾರ್ವಜನಿಕ ಪಡಿಪೂಜೆ ಹಾಗೂ ಮಹಾಶಕ್ತಿ ಪೂಜೆ ಕಾರ್ಯಕ್ರಮ ಜರುಗಲಿದೆ. ಕಾಂii ಕ್ರಮದ ವಿಶೇಷ ಪ್ರಸಾದವಾದ ‘ಅರವಣ ಪಾಯಸವನ್ನು ಮುಷ್ಟಿ ಅಕ್ಕಿ ಯೋಜನೆಯಲ್ಲಿ ಭಾಗವಹಿಸಿದೆ ಪ್ರತಿ ಮನೆಗೂ ತಲುಪಿಸಲಾಗುವುದು. ಈ ಕಾರ್ಯಕ್ರಮಕ್ಕೆ ಎಲ್ಲಾ ಭಕ್ತರು ತಮ್ಮ ತನು-ಮನ ಧನವನ್ನು ನೀಡಿ ಅಯ್ಯಪ್ಪ ಸ್ವಾಮಿಯ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕೆಂದು ಮನವಿ ಮಾಡಿದರು.


ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎನ್.ಡಿ. ಸತೀಶ್, ಎನ್.ಜೆ. ನಾಗರಾಜ್, ಜಗದೀಶ್, ಸಂತೋ ಷ್, ಪುರುಷೋತ್ತಮ್, ಮಂಜುನಾಥ್, ಶಂಕರ್, ಶಿವಕುಮಾರ್, ಪ್ರದೀಪ್ ಇದ್ದರು.

Exit mobile version