ಶಿವಮೊಗ್ಗ:- ಶಿವಮೊಗ್ಗ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಹಿಂದುಳಿದ ವರ್ಗಗಳ ನಾಯಕರು, ಸಹಕಾರಿ ಹಾಗೂ ಧಾರ್ಮಿಕ ಕ್ಷೇತ್ರದ ಪ್ರಮುಖರು ಹಾಗೂ ಮಾಜಿ ಶಿವಮೊಗ್ಗ ಮಹಾನಗರಪಾಲಿಕೆ ಮೇಯರ್ ಎಸ್.ಕೆ. ಮರಿಯಪ್ಪ ಅವರು ಇಂದು ಬೆಳಿಗ್ಗೆ ಬೆಂಗಳೂರಿನ ಕೆಪಿಸಿಸಿ ಕಛೇರಿಯಲ್ಲಿ ಕಾಂಗ್ರೆಸ್ ಚುನಾವಣಾಧಿಕಾರಿಗೆ ತಮ್ಮ ನಾಮಪತ್ರ ಅರ್ಜಿ ಸಲ್ಲಿಸಿದರು.
ಎಸ್.ಕೆ. ಮರಿಯಪ್ಪ ಅವರು ಹಾಲಿ ಹೌಸಿಂಗ್ ಸೊಸೈಟಿ ಹಾಗೂ ಕೋಟೆ ಶ್ರೀ ಮಾರಿಕಾಂಬಾ ದೇವಳ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನಗರದ ವಿವಿಧ ವಾರ್ಡುಗಳಲ್ಲಿ ಸ್ಪರ್ಧಿಸಿ ಐದು ಬಾರಿ ಕಾಪೆರ್Çರೇಟರ್ ಆಗಿ ಗೆದ್ದ ಹಿರಿಮೆ ಹೊಂದಿದ್ದಾರೆ. ಶಿವಮೊಗ್ಗದ ಪ್ರತಿಷ್ಠಿತ ಸಿಟಿ ಬ್ಯಾಂಕ್ ಅಧ್ಯಕ್ಷರಾಗಿ, ಹಾಲಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜಿಲ್ಲಾ ಸಹಕಾರಿ ಯೂನಿಯನ್ ಮತ್ತು ಎಪಿಎಂಸಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಸಹಕಾರ ಕ್ಷೇತ್ರದ ಸಾಧನೆಗಾಗಿ ಅವರಿಗೆ ಪ್ರತಿಷ್ಠಿತ ಪ್ರಶಸ್ತಿಗಳು ಲಭಿಸಿವೆ. ನೇರ ನಡೆನುಡಿ ಹಾಗೂ ದಕ್ಷ ಆಡಳಿತಕ್ಕೆ ಮರಿಯಪ್ಪರ ಹೆಸರು ಮುಂಚೂಣಿಯಲ್ಲಿದೆ.
ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ಈ ಬಾರಿ ಎಸ್.ಕೆ. ಮರಿಯಪ್ಪ ಅವರಿಗೆ ಶಿವಮೊಗ್ಗ ಕ್ಷೇತ್ರದ ಟಿಕೇಟ್ ನೀಡಿದರೆ ಈ ಕ್ಷೇತ್ರ ಬಿಜೆಪಿ ಹಿಡಿತದಿಂದ ಕೈತಪ್ಪಿ ಕಾಂಗ್ರೆಸ್ ವಶಕ್ಕೆ ಬರುವುದು ಖಚಿತ ಎಂದು ಈ ಸಂದರ್ಭದಲ್ಲಿ ಹಾಜರಿದ್ದ ಗಣ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮರಿಯಪ್ಪರ ತಂದೆ ಎಂ. ಕೆಂಚಪ್ಪ ಅವರು ಈ ಹಿಂದೆ ನಗರಸಭೆ ಸದಸ್ಯರಾಗಿದ್ದರು. ಕಾಂಗ್ರೆಸ್‍ನ ಅತ್ಯಂತ ನಿಷ್ಟಾವಂತರಾಗಿದ್ದರು. ಹಾಗೆಯೇ ಮರಿಯಪ್ಪ ಅವರು ಸಹ ಕಾಂಗ್ರೆಸ್‍ನ ನಿಷ್ಟಾವಂತ ಕಾರ್ಯಕರ್ತರಾಗಿದ್ದು, ರಾಜಕೀಯ ಕ್ಷೇತ್ರದಲ್ಲಿ ಅಜಾತಶತ್ರು ಎಂಬ ಹಿರಿಮೆ ಹೊಂದಿದ್ದಾರೆ. ಇದನ್ನು ಕಾಂಗ್ರೆಸ್ ಹೈಕಮಾಂಡ್ ಗಮನಿಸ ಬೇಕು ಎಂಬುದು ಬಹುತೇಕರ ಅಭಿಪ್ರಾಯ.
ಶಿವಮೊಗ್ಗ ವಿಧಾನಸಭಾ ಕ್ಷೇತ್ರಕ್ಕೆ ಮರಿಯಪ್ಪ ಅವರು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಸಿಟಿ ಬ್ಯಾಂಕ್ ಅಧ್ಯಕ್ಷ ಎಂ. ಉಮಾಶಂಕರ ಉಪಾಧ್ಯಾಯ, ನಗರಪಾಲಿಕೆ ಕಾಪೆರ್Çರೇಟರ್ ಶಾಮೀರ್‍ಖಾನ್, ಮಾಜಿ ಕಾಪೆರ್Çರೇಟರ್ ಸಯ್ಯದ್ ಮಜರ್, ಕಾಂಗ್ರೆಸ್ ಹಿಂದುಳಿದ ವರ್ಗಗಳ ನಾಯಕ ಎಸ್.ಪಿ. ಶೇಷಾದ್ರಿ, ಕಾಂಗ್ರೆಸ್ ಸೇವಾದಳ ಅಧ್ಯಕ್ಷ ಮಂಜುನಾಥ ಬಾಬು, ಪ್ರಮುಖರಾದ ಸುನಿಲ್, ನವಿನ್ ದಳವಾಯಿ, ಚಿನ್ನಪ್ಪ, ಪ್ರಭಾಕರ ಗೌಡ, ಎಂ.ಆರ್. ಪ್ರಕಾಶ್ (ಡಿಚ್ಚಿ) ಇನ್ನಿತರ ಗಣ್ಯರು ಉಪಸ್ಥಿತರಿದ್ದರು.