Site icon TUNGATARANGA

ಸಹಾಯಕ ಪ್ರಾಧ್ಯಾಪಕರ ನೇಮಕಾತಿ: ನ್ಯಾಯಾಂಗ ತನಿಖೆಗೆ ಒತ್ತಾಯ

ಶಿವಮೊಗ್ಗ,
ನೂತನ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆಯನ್ನು ನ್ಯಾಯಾಂಗ ತನಿಖೆಗೆ ಒತ್ತಾಯಿಸಿ ಹಾಗೂ ಅತಿಥಿ ಉಪನ್ಯಾಸಕರನ್ನು ಸೇವೆಯಲ್ಲಿ ವಿಲೀನಗೊಳಿಸಬೇಕೆಂದು ಆಗ್ರಹಿಸಿ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ ವತಿಯಿಂದ ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಢಳಿತದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.


ರಾಜ್ಯದ ೪೩೦ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗಳಲ್ಲಿ ಅನೇಕ ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿ ರುವ ಸಾವಿರಾರು ಅತಿಥಿ ಉಪನ್ಯಾಸಕರು ನೂತನ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆಯಿಂದ ಹಾಗೂ ಪ್ರಸಕ್ತ ಸಾಲಿನಲ್ಲಿ ಕಾರ್ಯಭಾರದ ಕೊರತೆಯಿಂದಾಗಿ ತಾತ್ಕಾಲಿಕ ಹುದ್ದೆಯಿಂದ ಈ ಬಾರಿ ಕೆಲಸ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ ಎಂದು ಮನವಿಯಲ್ಲಿ ಅಸಮಾಧಾನ ವ್ಯಕ್ತಪಡಿಸಲಾಗಿದೆ.


ಕಳೆದ ೨ ದಶಕಗಳಿಂದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಬೆನ್ನೆಲುಬಾಗಿ ನಿಂತು ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ ಅತಿಥಿ ಉಪನ್ಯಾ ಸಕರು ಅತ್ಯಂತ ಕನಿಷ್ಠ ಗೌರವಧನ ಪಡೆದು ನಿಸ್ವಾರ್ಥ ಸೇವೆ ಸಲ್ಲಿಸುತ್ತಾ ಬಂದಿದ್ದು, ಇಂದೋ, ನಾಳೆಯೋ ತಾತ್ಕಾಲಿಕ ಹುದ್ದೆಗೆ ಭದ್ರತೆ ನೀಡಬಹುದೆಂಬ ನಿರೀಕ್ಷೆಯಲ್ಲಿದ್ದರೂ ಸಹ ಸರ್ಕಾರ ಕವಡೆ ಕಾಸಿನ ಕಿಮ್ಮತ್ತು ನೀಡಲಿಲ್ಲ ಎಂದು ದೂರಿದರು.


ಇದುವರೆಗೆ ಸುಮಾರು ೮ಸಾವಿರ ಅತಿಥಿ ಉಪನ್ಯಾಸಕರು ಬೋಧನಾ ಅನುಭವ, ಕೌಶಲ್ಯ, ವಿದ್ಯಾರ್ಹತೆ ಹೊಂದಿದ್ದರೂ ಸಹ ಖಾಯಂ ಉದ್ಯೋಗ ಅವಕಾಶದಿಂದ ವಂಚಿತರಾಗುತ್ತಲೇ ಬಂದಿದ್ದೇವೆ. ಈಗ ನಾವೆಲ್ಲರೂ ಶಾಶ್ವತ ನಿರುದ್ಯೋಗಿಗಳು ಹಾಗೂ ಶಾಶ್ವತ ಅತಿಥಿಗಳು. ಪ್ರತಿ ನೂತನ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ನಾವುಗಳು ಆಯ್ಕೆಯಾಗಿ ಬರುವುದು ಬೆರಳೆಣಿಕೆಯಷ್ಟು ಮಾತ್ರ. ನೂತನ ೧೨೪೨ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪಾರದರ್ಶಕವಾಗಿ ನಡೆದಿಲ್ಲ ಎಂಬ ದೂರುಗಳು ಬಂದಿವೆ.

ನೇಮಕಾತಿ ಪರೀಕ್ಷೆಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಸರ್ಕಾರವೇ ಸಿಸಿಬಿ ತನಿಖೆ ನಡೆಸುತ್ತಿದೆ. ಕೆಲವರ ಮೇಲೆ ಮೊಕದ್ದಮೆ ದಾಕಲು ಮಾಡಿದ್ದು ಆಯ್ಕೆ ಪ್ರಕ್ರಿಯೆಯಲ್ಲಿರುವ ೫೦೦ ಅಭ್ಯರ್ಥಿಗಳಿಗೆ ಸಿಸಿಬಿ ನೋಟೀಸ್ ನೀಡಿರುವುದರಿಂದ ಕೂಡಲೇ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.


ಪ್ರತಿಭಟನೆಯಲ್ಲಿ ಸಮಿತಿಯ ರಾಜ್ಯಾಧ್ಯಕ್ಷ ಡಾ. ಸೋಮಶೇಖರ್ ಹೆಚ್. ಶಿಮೊಗ್ಗಿ, ಡಾ. ಎಂ.ಸಿ. ನರಹರಿ, ಸರ್ವಜ್ಞಮೂರ್ತಿ, ಸತೀಶ್ ಎಸ್;ವಿ. ವಸಂತಕುಮಾರ್ ಎ.ರೂಪ ಮತ್ತಿತರರಿದ್ದರು.

Exit mobile version