Site icon TUNGATARANGA

ಶಿವಮೊಗ್ಗ ಜಿಲ್ಲೆಯ 75 ಶಾಲಾ ಕಾಲೇಜುಗಳ ಬಳಿ ತಂಬಾಕು ಉತ್ಪನ್ನ ಮಾರಾಟ/ 828 ದೂರು ದಾಖಲು

ಶಿವಮೊಗ್ಗ, ನ.,07:

ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್, ಎಎಸ್ಪಿ ವಿಕ್ರಮ್ ಮಾರ್ಗದರ್ಶನ ಹಾಗೂ ಸೂಚನೆಯನುಸಾರ ಇಂದು ಶಿವಮೊಗ್ಗ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯ ಶಾಲಾ ಕಾಲೇಜುಗಳ ಆವರಣದಿಂದ 100 ಗಜಗಳ ವ್ಯಾಪ್ತಿಯಲ್ಲಿ ಕಾನೂನು ಬಾಹೀರವಾಗಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಪೆಟ್ಟಿಗೆ ಅಂಗಡಿ, ಜೆರಾಕ್ಸ್ ಅಂಗಡಿ ಮತ್ತು ಬೇಕರಿಗಳ ಮೇಲೆ ಮತ್ತು ಸಾರ್ವಜನಿಕವಾಗಿ ಉಪಟಳ (Public Nuisance) ನೀಡುತ್ತಿದ್ದವರ ಮೇಲೆ ಮಧ್ಯಾಹ್ನದಿಂದ ಸಂಜೆಯವರೆಗೆ ವಿಶೇಷ ಕಾರ್ಯಾಚರಣೆ ನಡೆಸಿ‌ ಜಿಲ್ಲೆಯಲ್ಲಿ ಒಟ್ಟು 75 ಶಾಲಾ ಕಾಲೇಜುಗಳ ಹತ್ತಿರ ಒಟ್ಟು 424 ಕೋಟ್ಪಾ ಪ್ರಕರಣಗಳು ಮತ್ತು 404 ಲಘು ಪ್ರಕರಣಗಳನ್ನು ದಾಖಲಿಸಲಾಗಿದೆ.

ಶಿವಮೊಗ್ಗ ಉಪ ವಿಭಾಗದ 21 ಶಾಲಾ ಕಾಲೇಜುಗಳ ಹತ್ತಿರ 186 ಕೋಟ್ಪಾ ಪ್ರಕರಣಗಳು ಮತ್ತು 68 ಲಘು ಪ್ರಕರಣಗಳನ್ನು, ಶಿಕಾರಿಪುರ ಉಪ ವಿಭಾಗದ 25 ಶಾಲಾ ಕಾಲೇಜುಗಳ ಹತ್ತಿರ 74 ಕೋಟ್ಪಾ ಪ್ರಕರಣಗಳು ಮತ್ತು 106 ಲಘು ಪ್ರಕರಣಗಳು, ಸಾಗರ ಉಪ ವಿಭಾಗದ 10 ಶಾಲಾ ಕಾಲೇಜುಗಳ ಹತ್ತಿರ 51 ಕೋಟ್ಪಾ ಪ್ರಕರಣಗಳು ಮತ್ತು 49 ಲಘು ಪ್ರಕರಣಗಳು, ಭದ್ರಾವತಿ ಉಪ ವಿಭಾಗದ 7 ಶಾಲಾ ಕಾಲೇಜುಗಳ ಹತ್ತಿರ 19 ಕೋಟ್ಪಾ ಪ್ರಕರಣಗಳು ಮತ್ತು 21 ಲಘು ಪ್ರಕರಣಗಳು, ಮತ್ತು ತೀರ್ಥಹಳ್ಳಿ ಉಪ ವಿಭಾಗದ 12 ಶಾಲಾ ಕಾಲೇಜುಗಳ ಹತ್ತಿರ 94 ಕೋಟ್ಪಾ ಪ್ರಕರಣಗಳು ಮತ್ತು 160 ಲಘು ಪ್ರಕರಣಗಳು ಸೇರಿ ಒಟ್ಟು 75 ಶಾಲಾ ಕಾಲೇಜುಗಳ ಹತ್ತಿರ ಒಟ್ಟು 424 ಕೋಟ್ಪಾ ಪ್ರಕರಣಗಳು ಮತ್ತು 404 ಲಘು ಪ್ರಕರಣಗಳನ್ನು ದಾಖಲಿಸಲಾಗಿರತ್ತದೆ.

Exit mobile version