Site icon TUNGATARANGA

ಪ್ರಭು ಹಲ್ಲೆ ಆರೋಪಿ ಅಸ್ಲಾಂ ಕಾಲಿಗೆ ಪೊಲೀಸರ ಗುಂಡೇಟು, ಬಂಧನ ಎಲ್ಲಿ ಗೊತ್ತಾ?

ಶಿವಮೊಗ್ಗ, ನ.05:

ಶಿವಮೊಗ್ಗ ನಗರದ ಅಶೋಕ್ ಪ್ರಭು ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎರಡನೇ ಆರೋಪಿ ಅಸ್ಲಾಂನ ಕಾಲಿಗೆ ಗುಂಡೇಟು ಹೊಡೆಯುವ ಮೂಲಕ ದೊಡ್ಡಪೇಟೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾತ್ ಇಂದಿಲ್ಲಿ ಹೇಳಿದರು.

ಪ್ರಭು ಮೇಲೆ ನಡೆದ ಹಲ್ಲೇ ವಿಷಯಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಆಸಿಫ್ ನನ್ನು ಬಂಧಿಸಲಾಗಿದ್ದು, ಅಸ್ಲಾಂ ಶಿವಮೊಗ್ಗ ರಾಶಿ ಡೆವೆಲಪರ್ಸ್ ಲೇಔಟ್ ನಲ್ಲಿ ಇರುವ ಬಗ್ಗೆ ಖಚಿತ ಮಾಹಿತಿ ಪಡೆದ ದೊಡ್ಡಪೇಟೆ ಪೊಲೀಸ್ ಸಬ್ ಇನ್ಸ್ ಸ್ಪೆಕ್ಟರ್ ವಸಂತ್ ಅವರು ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದಾಗ ಅಸ್ಲಾಂ ಪೊಲೀಸ್ ಸಿಬ್ಬಂದಿ ರಮೇಶ್ ಅವರಿಗೆ ಚಾಕು ಬೀಸಲು ಮುಂದಾಗಿದ್ದಾನೆ ಎಂದು ಇಂದು ಬೆಳಿಗ್ಗೆ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ ರಮೇಶ್ ಅವರ ತೋಳಿಗೆ ಗಾಯವಾಗಿದೆ. ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ರಕ್ಷಣೆ ಜೊತೆಗೆ ವಸಂತವರು ಅಸ್ಲಾಂ ಕಾಲಿಗೆ ಗುಂಡು ಹಾರಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಇಬ್ಬರನ್ನು ಬಂಧಿಸಲಾಗಿದ್ದು, ಇನ್ನಿಬ್ಬರು ಅಪ್ರಾಪ್ತರೆಂದು ಶಂಕಿಸಲಾಗುತ್ತಿದೆ. ಅವರ ಮಾಹಿತಿಯನ್ನು ನಂತರ ನೀಡಲಾಗುತ್ತದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಅಪರ ಜಿಲ್ಲಾ ರಕ್ಷಣಾಧಿಕಾರಿ ವಿಕ್ರಂ ಆಮ್ಟೆ, ಡಿವೈ ಎಸ್ಪಿ ಬಾಲರಾಜ್ , ಎಸೈ ವಸಂತ್ ಉಪಸ್ಥಿತರಿದ್ದರು.

Exit mobile version