Site icon TUNGATARANGA

ಎಡಿಜಿಪಿ ಅಲೋಕ್ ಕುಮಾರ್ ಸುದ್ದಿಗೋಷ್ಠಿ: ಶಿವಮೊಗ್ಗದ ಬಗ್ಗೆ ಹೇಳಿದ್ದೇನು.?

ಶಿವಮೊಗ್ಗ : ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಶಿವಮೊಗ್ಗ ಸೇರಿದಂತೆ ಹಲವೆಡೆ ಪೊಲೀಸ್ ಸಿಬ್ಬಂದಿಗಳಿಗೆ ಹಾಗೂ ಅಧಿಕಾರಿಗಳಿಗೆ ಸರಿಯಾಗಿ ರಜೆ ಸಿಗುತ್ತಿಲ್ಲ. ೩೦ದಿನ ಬೇಸರದಿಂದ ಕೆಲಸ ಮಾಡುವ ಬದಲು ಇಪ್ಪತ್ತೇ ಇಪ್ಪತ್ತು ದಿನ ಆಸಕ್ತಿಯಿಂದ ಕೆಲಸ ಮಾಡಬಹುದು. ಪೊಲೀಸ್ ಸಿಬ್ಬಂದಿಗಳಿಗೆ ಸೂಕ್ತ ಸಂದರ್ಭದಲ್ಲಿ ರಜೆ ದೊರಕುವಂತೆ ಮಾಡಲು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಎಡಿಜಿಪಿ ಅಲೋಕ್ ಕುಮಾರ್ ಸೂಚನೆ ನೀಡಿದರು.


ಅವರು ಇಂದು ಮದ್ಯಾಹ್ನ ಪತ್ರಿಕಾಗೋಷ್ಟಿಯನ್ನುದ್ದೇಶಿ ಮಾತನಾಡುತ್ತಾ, ಸಾರ್ವಜನಿಕ ಸಂರಕ್ಷಣೆ ಅತಿಮುಖ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸರು ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯವಿದ್ದರೆ ಮಾತ್ರ ರಕ್ಷಣೆ ಕಾರ್ಯ ಸುಲಭವಾಗುತ್ತದೆ. ಹೀಗಾಗಿ ಅವಶ್ಯಕತೆಗನುಗುಣವಾದ ಸೌಕರ್ಯಗಳನ್ನು ನೀಡುವುದು ಅಗತ್ಯವಾಗಿದೆ ಎಂದರು.


ಶಿವಮೊಗ್ಗದಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರನ್ನೊಳಗೊಂಡ ಎಎಸ್‌ಪಿ ವಿಕ್ರಮ್, ಪ್ರಭಾರ ಎಎಸ್‌ಪಿಗಳಾದ ರೋಹನ್, ಜೀತೇಂದ್ರ, ಶಾಂತವೀರ್, ಡಿವೈಎಸ್‌ಪಿ ಬಾಲರಾಜ್ ಸೇರಿದಂತೆ ಹಲವರ ತಂಡ ಬಿಗಿಯಾಗಿದೆ. ಬೇರೆ ಜಿಲ್ಲೆಗಳಿಗೆ ಹೋಲಿಸಿಕೊಂಡಂತೆ

ಶಿವಮೊಗ್ಗ ಬೆಟರ್ ಎಂದರು.
ಹಿಂದೆ ಪೊಲೀಸ್ ಇಲಾಖೆಯಲ್ಲಿನ ಕರ್ತವ್ಯದ ಅವಧಿಯಲ್ಲಿ ಮಾಡಿದ ಕಾರ್ಯಾಚರಣೆಗಳಿಗೆ ಅನುಗುಣವಾಗಿ ಸಿಬ್ಬಂದಿಗಳಿಗೆ ಪ್ರಶಂಸಿಸುವ ಹಾಗೂ ಅವರ ಸೇವಾವಧಿ ಪುಸ್ತಕದಲ್ಲಿ ದಾಖಲಿಸುವ ಕಾರ್ಯ ನಡೆಯುತ್ತಿತ್ತು. ಈಗ ನಿಂತಿದೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ನೂತನ ಜಿಲ್ಲಾ ರಕ್ಷಣಾಧಿಕಾರಿಗಳು ಆ ಕೆಲಸವನನ್ನು ಇಂದಿನಿಂದಲೇ ಮಾಡಿ ಬೆನ್ನುತಟ್ಟುತ್ತಾರೆ ಎಂದರು.


ಶಿವಮೊಗ್ಗ ಪೊಲೀಸರಿಗೆ ಮಾನಸಿಕ ಹಾಗೂ ದೈಹಿಕವಾದ ಸಮಸ್ಯೆಗಳನ್ನು ನೋಡಿಕೊಳ್ಳಲು, ಮನೋಸ್ಥೈರ್ಯ ತುಂಬಲು ವೆಲ್‌ವಿಂಗ್ ಅಧಿಕಾರಿ ಇದ್ದಾರೆ. ಪೊಲೀಸರ ಆಲ್ಕೋಹಾಲ್, ಮಾನಸಿಕ ಒತ್ತಡ, ಕೌಟುಂಬಿಕ ಸಮಸ್ಯೆ ಅವುಗಳನ್ನು ಬಗೆಹರಿಸಲು ಮುಂದಾಗುವಂತೆ ಸೂಚಿಸಿದರು.
ಪರೀಕ್ಷಾ ವರದಿ ನಂತರ ತನಿಖೆ
ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರ ಸಹೋದರನ ಪುತ್ರ ಚಂದ್ರಶೇಖರ್ ಸಾವಿನ ಪ್ರಕರಣ ಕುರಿತು ಸಮಗ್ರವಾದ ಪರಿಶೀಲನೆ ನಡೆಯುತ್ತಿದೆ. ದೇಹಸಿಕ್ಕ ಸ್ಥಳದಲ್ಲಿ ದ್ರೋಣ್ ಕ್ಯಾಮೆರಾದ ಮೂಲಕ ಪರಿಶೀಲಿಸಲಾಗಿದೆ. ಅವರ ಶವ ಪರೀಕ್ಷೆ ನಂತರ ವರದಿ ಹಾಗೂ ಮತ್ತಿತ್ತರ ವರದಿಗಳನ್ನು ಆಧರಿಸಿದ ತನಿಖೆ ನಡೆಸಲಾಗುತ್ತದೆ ಎಂದು ಅಲೋಕ್ ಕುಮಾರ್ ತಿಳಿಸಿದರು.
ಶಿವಮೊಗ್ಗದಲ್ಲಿ ಉಗ್ರಗಾಮಿ ಮೂಲದ ಹಲವರನ್ನು ನಮ್ಮ ಪೊಲೀಸರು ಎಡೆಮೂರಿ ಕಟ್ಟಿದ್ದಾರೆ. ನಾಪತ್ತೆಯಾಗಿರುವವರನ್ನು ಹಿಡಿಯುತ್ತಾರೆ ಎಂದ ಅವರು, ಇದರ ವಿಚಾರಣೆ ಬೇರೆ ಸಂಸ್ಥೆಗೆ ನೀಡುತ್ತೀರಾ ಎಂಬ ಪ್ರಶ್ನೆಗೆ ನಾವೇ ಕಂಡುಹಿಡಿಯುತ್ತೇವೆ. ನಮ್ಮ ಬಗ್ಗೆ ನಂಬಿಕೆ ಇಲ್ಲವೇ ಎಂದು ಮರುಪ್ರಶ್ನಿಸಿದರು.


ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ಕುಮಾರ್, ದಾವಣಗೆರೆ ಪೂರ್ವ ಪೊಲೀಸ್ ನಿರೀಕ್ಷಕ ತ್ಯಾಗರಾಜ್, ಎಎಸ್‌ಪಿಗಳಾದ ವಿಕ್ರಮ್, ರೋಹನ್, ಜಿತೇಂದ್ರ, ಶಾಂತವೀರ್ ಇದ್ದರು.

ಶಿವಮೊಗ್ಗ ಪೊಲೀಸ್ ಪೇರೆಡ್ ಮೈದಾನದಲ್ಲಿಂದು ಎಡಿಜಿಪಿ ಅಲೋಕ್‌ಕುಮಾರ್ ಅವರು ಪೊಲೀಸ್ ಅಧಿಕಾರಿಗಳು ಹಾಗೂ ಕುಟುಂಬಗಳ ಸದಸ್ಯರೊಂದಿಗೆ ವಿಚಾರ ವಿನಿಮಯ ಮಾಡಿಕೊಂಡು ಪೊಲೀಸರ ಕರ್ತವ್ಯಕ್ಕೆ ಪೂರಕವಾಗಿ ಕುಟುಂಬದಲ್ಲಿ ಸಹಕರಿಸುವಂತೆ ವಿನಂತಿಸಿದರು.

Exit mobile version