ಶಿವಮೊಗ್ಗ,
ನಗರದ ವಿವಿಧೆಡೆಯಲ್ಲಿ ಅಕ್ರಮವಾಗಿ ಫುಟ್ ಪಾತ್ ಆಕ್ರಮಿಸಿಕೊಂ ಡಿರುವವರಿಗೆ ಎಚ್ಚರಿಕೆ ನೀಡಿ ಕಾರ್ಯಾಚರಣೆ ಮೂಲಕ ತೆರವುಗೊಳಿ ಸಲಾಯಿತು.
ಗಾಂಧಿಬಜಾರ್ ನ ರಾಮಣ್ಣ ಶ್ರೇಷ್ಠಿ ಪಾರ್ಕ್, ಚೋರ್ ಬಜಾರ್, ಸಿದ್ದಯ್ಯ ವೃತ್ತ, ಎಂಕೆಕೆ ರಸ್ತೆ, ಶಿವಪ್ಪ ನಾಯಕ ವೃತ್ತ, ಬಸವೇಶ್ವರ ಸ್ಕೂಲ್ ಮುಂಭಾಗ, ವೀರಶೈವ ಕಲ್ಯಾಣ ಮಂದಿರ ಸೇರಿದಂತೆ ಹಲವು ಕಡೆಗಳಲ್ಲಿ ಮಹಾನಗರ ಪಾಲಿಕೆ ಸಿಬ್ಬಂದಿಗಳು ಪೊಲೀಸ್ ಇಲಾಖೆ ಸಹಕಾರದೊಂದಿಗೆ ತೆರವುಗೊಳಿಸಿದರು.
ಈ ಕಾರ್ಯಾಚರಣೆಯಲ್ಲಿ ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ, ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್, ಆಯುಕ್ತ ಮಾಯಣ್ಣ ಗೌಡ ಭಾಗವಹಿಸಿದ್ದು ವಿಶೇಷವಾಗಿತ್ತು. ಫುಟ್ಪಾತ್ ಆಕ್ರಮಿಸಿಕೊಂಡವರಿಗೆ ಈ ಹಿಂದೆ ಹಲವು ಬಾರಿ ತೆರವುಗೊಳಿಸುವಂತೆ ಎಚ್ಚರಿಕೆ ನೀಡಲಾಗಿತ್ತು. ಆದರೂ, ಕೂಡ ಒತ್ತುವರಿ ಮುಂದುವರಿದಿತ್ತು. ಅನೇಕ ಬಾರಿ ಎಚ್ಚರಿಕೆ ಕೊಟ್ಟರೂ ಕೂಡ ತೆರವುಗೊಳಿಸದೆ ಇದ್ದುದರಿಂದ ಮೂವರು ಅದಿಕಾರಿಗಳು ತ್ರಿಮೂರ್ತಿಯಂತೆ ಕಾರ್ಯಾಚರಣೆ ಇಳಿದು ತೆರವುಗೊಳಿಸಿದರು.
ನಗರದ ವಿವಿಧೆಡೆ ಅಧಿಕಾರಿಗಳ ನೇತೃತ್ವದಲ್ಲಿ ಪಾಲಿಕೆ ಸಿಬ್ಬಂದಿಗಳು ಪುಟ್ ಪಾತ್ ತೆರವುಗೊಳಿಸಿದರು.