Site icon TUNGATARANGA

ಪ್ಲೆಕ್ಸಿಯಲ್ಲಿ ಮಿಂಚೋ ಆತುರ: “ಸೌಜನ್ಯ” ಮರೆತರಾ…? ಶಿವಮೊಗ್ಗದ ಈ ಪ್ಲೆಕ್ಸಿಗೆ ಸಾರ್ವಜನಿಕರ ಟೀಕೆ…!

ಹುಡುಕಾಟದ ವರದಿ

ಶಿವಮೊಗ್ಗ,ನ.03:

ಶಿವಮೊಗ್ಗ ನಗರದಲ್ಲಿ ಇಂದು ಒಕ್ಕಲಿಗರ ಸಮುದಾಯ ಭವನದ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿದೆ. ಆದಿಚುಂಚನಗಿರಿ ಮಹಾ ಸಂಸ್ಥಾನದ ಜಗದ್ಗುರು ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಹಾಗೂ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಂದ ಗುದ್ದಲಿ ಪೂಜೆ ನಡೆದಿದೆ.

ಈ ಕಾರ್ಯಕ್ರಮದ ವಿಚಾರದಲ್ಲಿ ಒಂದಿಷ್ಟು ಪ್ರಚಾರಪ್ರಿಯರು ಅದರಲ್ಲೂ ತಮ್ಮನ್ನು ತಾವು ವಿಶೇಷ ಎಂದು ಗುರುತಿಸಿಕೊಳ್ಳಲು ಮುಂದಾಗಿರುವವರು ಶಿವಮೊಗ್ಗ ನಗರದ ಪ್ರಮುಖ ರಸ್ತೆಗಳಲ್ಲಿ ವಿಶೇಷವಾಗಿ ಆದಿಚುಂಚನಗಿರಿ ಶಾಖಾ ಮಠದ ರಸ್ತೆಯಲ್ಲಿ ಸಾಲುಸಾಲಾಗಿ ಫೆಕ್ಸಿಗಳನ್ನು ಹಾಕಿಕೊಂಡು ಸಂಭ್ರಮಿಸಿರುವುದು ಸರಿಯಷ್ಟೇ.

ಆದರೆ, ಇಲ್ಲೊಂದು ಪ್ಲೆಕ್ಸಿಯಲ್ಲಿ ಅತ್ಯಂತ ಬೇಸರವನ್ನು ತರಿಸುವಂತೆ ಚಿತ್ರಣಗಳನ್ನು ಹಾಕಿಸಿಕೊಂಡಿದ್ದಾರೆ. ಅಂತೆಯೇ ಆದಿಚುಂಚನಗಿರಿ ಮಹಾ ಸಂಸ್ಥಾನದ ಪೂಜ್ಯ ಜಗದ್ಗುರು ಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಜಿಯವರ ಭಾವಚಿತ್ರವನ್ನು ದೊಡ್ಡದಾಗಿಯೇ ಹಾಕಿದ್ದಾರೆ.

ಆದರೆ, ಒಕ್ಕಲಿಗರ ಯುವ ವೇದಿಕೆಯನ್ನು ಹಾಗೂ ಅದರಲ್ಲಿನ ನಾಯಕರನ್ನು ಗುರುತಿಸಿಕೊಳ್ಳುವ ಹುಚ್ಚಿನಲ್ಲಿ ಶ್ರೀಗಳ ಭಾವಚಿತ್ರದ ಮೇಲೆ ತಮ್ಮ ಭಾವಚಿತ್ರಗಳನ್ನು ಹಾಕಿಕೊಂಡಿರುವುದು ಸರಿಯಲ್ಲ ಎಂಬ ಆಕ್ಷೇಪ ಕೇಳಿಬಂದಿದೆ.ಈ ಮಾತನ್ನು ಒಕ್ಕಲಿಗ ಸಮುದಾಯದ ಹಲವರು ನಿಮ್ಮ ತುಂಗಾತರಂಗ ಮೂಲಕ ಕೇಳಿದ್ದಾರೆ.

ಭಾವಚಿತ್ರಗಳನ್ನು ಹಾಕಿಕೊಳ್ಳುವ ಪೂರ್ವದಲ್ಲಿ ಒಂದಿಷ್ಟು ಯೋಚಿಸಬೇಕಿತ್ತು. ತಮ್ಮನ್ನು ತಾವು ಹೀರೋಗಳೆಂದು ಕರೆದುಕೊಳ್ಳುವ ಬದಲು ಶ್ರೀಗಳಿಗೆ ಗೌರವ ಕೊಡಬೇಕಿತ್ತು ಎಂದಿದ್ದಾರೆ.

ಚರ್ಚೆ ಇನ್ನೇನಿದ್ದರೂ ಜನರದ್ದು ಹಾಗೂ ಒಕ್ಕಲಿಗ ಸಮುದಾಯದ್ದಷ್ಟೇ..! ಇಲ್ಲಿ ಪತ್ರಿಕೆ ಏನನ್ನೂ ಹೇಳಿಲ್ಲ. ಸರಿಯೋ ತಪ್ಪೋ ಎಂದು ಜನರ ಪರದ ಪ್ರಶ್ನೆ ಕೇಳಿದೆ.

Exit mobile version