ಶಿವಮೊಗ್ಗ,ಸೆ.13:
ಜಿಲ್ಲೆಯಲ್ಲಿ ಇಂದು 168 ಕೊರೋನ ಪಾಸಿಟಿವ್ ಪ್ರಕರಣ ಕಾಣಿಸಿಕೊಂಡಿದ್ದು ಒಟ್ಟು ಪಾಸಿಟಿವ್ ಸಂಖ್ಯೆ 10883 ಎಂದು ಜಿಲ್ಲಾ ಹೆಲ್ತ್ ಬುಲಿಟಿನ್ ಪ್ರಕಟಿಸಿದೆ.
ಇಂದು ಸೋಂಕಿನಿಂದ 6 ಜನ ಸಾವುಕಂಡಿದ್ದು, ಇದರಿಂದ ಜಿಲ್ಲೆಯಲ್ಲಿ ಒಟ್ಟು ಸಾವಿನ ಸಂಖ್ಯೆ 202 ಕ್ಕೇರಿದೆ. ಇಂದು 647 ಜನರಿಗೆ ಕೊರೋನ ಪರೀಕ್ಷೆಗೆ ಒಳಪಡಿಸಲಾಗಿದೆ. 609 ಜನರಿಗೆ ನೆಗೆಟಿವ್ ಎಂದು ವರದಿ ಬಂದಿದೆ.
ಇಂದು 255 ಜನ ಸೋಂಕಿನಿಂದ ಗುಣಮುಖರಾಗಿ ಮೆಗ್ಗಾನ್ ಮತ್ತು ಕೋವಿಡ್ ಕೇರ್ ಸೆಂಟರ್ ನಿಂದ ಬಿಡುಗಡೆಗೊಂಡಿದ್ದಾರೆ.
ಇದರಿಂದ ಒಟ್ಟು ಗುಣಮುಖರಾಗಿರುವ ಸಂಖ್ಯೆಯೂ ಸಹ 8741 ಕ್ಕೇರಿದೆ. 197 ಜನ ಕೊರೋನ ಸೋಂಕಿತರು ಮೆಗ್ಗಾನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 206 ಜನ ಕೊರೋನ ಕೇರ್ ಸೆಂಟರ್ ನಲ್ಲಿ, 352 ಜನರಿಗೆ ಖಾಸಗಿ ಆಸ್ಪತ್ರೆಗಳಲ್ಲಿ, 1453 ಜನ ಮನೆಯಲ್ಲಿ ಐಸೋಲೇಷನ್ ಆಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಯುರ್ವೇದಿಕ್ ಕಾಲೇಜಿನ ಆಸ್ಪತ್ರೆಯಲ್ಲಿ 114 ಜನ ಚಿಕಿತ್ಸೆ ಪಡೆಯುತ್ತಿದ್ದು ಒಟ್ಟು ಸಕ್ರಿಯಗೊಂಡ ಕೊರೋನ ಪಾಸಿಟಿವ್ ಸಂಖ್ಯೆ 2332 ಎಂದು ಬುಲಿಟಿನ್ ತಿಳಿಸಿದೆ.
ಸೋಂಕಿನ ಹೆಚ್ಚಳದಿಂದಾಗಿ ಕಂಟೈನ್ಮೆಂಟ್ ಜೋನ್ ಗಳು ಸಹ ಹೆಚ್ಚಾಗಿವೆ. ನಿನ್ನೆಯ ವರೆಗೆ 4878 ಕಂಟೈನ್ಮೆಂಟ್ ಜೋನ್ ಗಳಿದ್ದ ಜಿಲ್ಲೆಯಲ್ಲಿ ಇಂದು ಸಹ 4944 ರಷ್ಟೇ ಕಂಟೈನ್ಮೆಂಟ್ ಜೋನ್ ಗಳಿವೆ. 1645 ಡಿನೋಟಿಫೈಡ್ ಕಂಟೈನ್ಮೆಂಟ್ ಜೋನ್ ಗಳು 1699 ರಷ್ಟೇ ಇದೆ ಎಂದು ಬುಲಿಟಿನ್ ಪ್ರಕಟಿಸಿವೆ.
ತಾಲೂಕು ವಿವರ
ಜಿಲ್ಲೆಯಲ್ಲಿ 168
ಶಿವಮೊಗ್ಗ -114
ಭದ್ರಾವತಿ -16,
ಶಿಕಾರಿಪುರ-16, ತೀರ್ಥಹಳ್ಳಿ-01,
ಸಾಗರ- 15,
ಹೊಸನಗರ–04
ಸೊರಬ- 01
ಇತರೆ ಜಿಲ್ಲೆ- 01
ಮತ್ತದೇ ರಾಜ್ಯದ ವರದಿ ಇಂದೂ ಸಹ ಭಿನ್ನ ವಿಭಿನ್ನ. ಈ ವರದಿಗಿಂತ ಹೆಚ್ಚಿದೆ. ಯಾರನ್ನು, ಯಾವ ವರದಿಯನ್ನು ನಂಬಬೇಕು. ಓದುಗರ ನಿರ್ಧಾರಕ್ಕೆ ಎರಡೂ ಪ್ರತಿ ಗಳನ್ನು ನೀಡಲಾಗಿದೆ.