ಶಿವಮೊಗ್ಗ,ಸೆ.13:
ಶಿವಮೊಗ್ಗದಿಂದ ಎನ್ ಆರ್ ಪುರಕ್ಕೆ ತೆರಳುತ್ತಿದ್ದ ಸೆಲೆರಿಯೋ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಒಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು ಮೂವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಶಿವಮೊಗ್ಗದಿಂದ ಎನ್ಆರ್ ಪುರಕ್ಕೆ ತೆರಳುತ್ತಿದ್ದ ಕೆಂಪು ಬಣ್ಣದ ಸೆಲೆರಿಯೋ ಕಾರು ಕಾಚಿನಕಟ್ಟೆಯ ಬಳಿ ಮರವೊಂದಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಹೊಡೆದ ರಭಸಕ್ಕೆ ಕಾರಿನಲ್ಲಿದ್ದ ನಾಲ್ವರಲ್ಲಿ ಒಬ್ಬ ಸಾವನ್ನಪ್ಪಿದ್ದಾರೆ. ಉಳಿದ ಮೂವರ ಸ್ಥಿತಿ ಗಂಭೀರವಾಗಿದೆ. ಕಾರನ್ನ ಕಟ್ ಮಾಡುವ ಮೂಲಕ ಕಾರಿನಲ್ಲಿದ್ದ ಜನರನ್ನ ಹೊರಗೆ ತೆಗೆಯಲಾಗಿದೆ. ಅತಿವೇಗದ ಚಾಲನೆ ಅಥವಾ ಡ್ರಿಂಕ್ ಡ್ರೈವ್ ನಿಂದಾಗಿ ಈ ಅಪಘಾತಕ್ಕೆ ಕಾರಣವಿರಬಹುದು ಎಂದು ಶಂಕಿಸಲಾಗಿದೆ. ಇವರೆಲ್ಲಾ ಎನ್ ಆರ್ ಪುರದ ನಿವಾಸಿಗಳು ಎಂದು ಹೇಳಲಾಗುತ್ತಿದೆ. ಇದು ಪ್ರಾಥಮಿಕ ವರದಿಯಾಗಿದೆ. ಇವರ ಹೆಸರು ಇನ್ನೂ ತಿಳಿದುಬರಬೇಕಿದೆ. ತುಂಗಾ ನಗರ ಪೊಲೀಸ್ ಎಸೈ ತಿರುಮಲೇಶ್ ಹಾಗು ತಂಡ ಸ್ಥಳಕ್ಕೆ ಭೇಟಿ ನೀಡಿದೆ.
ಸಾಗರ CPI ಗೆ ಹೃದಯಾಘಾತ?
ಶಿವಮೊಗ್ಗ,ಸೆ.16:
ಜಿಲ್ಲೆಯ ಸಾಗರ ಗ್ರಾಮಾಂತರ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ಸುನೀಲ್ ಕುಮಾರ್ ಅವರಿಗೆ ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ನಿನ್ನೆ ತಡರಾತ್ರಿ ಬ್ಯಾಕೋಡು ಗ್ರಾಮದಲ್ಲಿ ನಡೆದಿದ್ದ ಜೋಡಿ ಕೊಲೆ ತನಿಖೆಗೆ ತೆರಳಿ ಶವಗಳನ್ನು ಶವಾಗಾರಕ್ಕೆ ಸಾಗಿಸಿದ ನಂತರ ಸರ್ಕಲ್ ಇನ್ಸ್ ಪೆಕ್ಟರ್ ಸುನೀಲ್ ಕುಮಾರ್ ಇಂದು ಬೆಳಗ್ಗೆ ಆರು ಗಂಟೆಗೆ ಮನೆಗೆ ಬಂದಿದ್ದರು.
ಮನೆಗೆ ಬಂದ ಕೆಲ ಹೊತ್ತಿನಲ್ಲೇ ಸುನೀಲ್ ಕುಮಾರ್ ಅವರಿಗೆ ಹೃದಯಾಘಾತವಾಗಿದೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಶಿವಮೊಗ್ಗದ ನಾರಾಯಣ ಹೃದಯಾಲಯಕ್ಕೆ ದಾಖಲಿಸಲಾಗಿದೆ.