Site icon TUNGATARANGA

ವಿನಾಕಾರಣ ಕಾರು ಜಖಂಗೊಳಿದ ಹರ್ಷ ಸಹೋದರಿ ಅಶ್ವಿನಿ ವಿರುದ್ದ ದೂರು ದಾಖಲು


ಶಿವಮೊಗ್ಗ, ಅ.23:
ವಿನಾಕಾರಣ ಕಾರೊಂದನ್ನು ಜಖಂಗೊಳಿಸಿದ ಪ್ರಕರಣಕ್ಕೆ ಸಂಭವಿಸಿದಂತೆ ಹರ್ಷನ ಸಹೋದರಿ ಅಶ್ವಿನಿ ಸೇರಿದಂತೆ ಹಲವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


ಸಯ್ಯದ್ ಪರ್ವೀಜ್ ಎಂಬುವರು ತಮ್ಮ ಕಾರನ್ನ ಮನೆಯ ಮುಂದೆ ನಿಲ್ಲಿಸಿದ್ದರು. ಕೆಎ 36 ಎಂ 2736 ಕ್ರಮ ಸಂಖ್ಯೆಯ ಇನೋವಾ ಕಾರನ್ನು ಸೀಗೆಹಟ್ಟಿ ನಿವಾಸಿ ಅಶ್ವಿನಿ ಮತ್ತು 10 ರಿಂದ 15 ಜನರ ಗುಂಪೊಂದು ಕಲ್ಲಪ್ಪನ ಕೇರಿಯಿಂದ ಗುಂಪಾಗಿ ಬಂದ ಬೈಕ್ ಸವಾರರು ಕಾರಿನ ಎಡಭಾಗದ ಹೆಡ್ ಲೈಟ್, ಸೈಡ್ ಡೋರ್, ಬ್ಯಾಕ್ ಸೈಡ್ ಮಡ್ ಗಾರ್ಡ್ ಜಖಂಗೊಳಿಸಿದ್ದಾರೆ.


ಜೈ ಶ್ರೀರಾಮ್ ಎಂದು ಕೂಗುತ್ತಾ ಬಂದ ಗುಂಪು ಕೇಸರಿ ಬಾವುಟ ಹಿಡಿದುಕೊಂಡು ಬಂದು ಕಾರಿಗೆ ಹಾನಿಯನ್ನುಂಟು ಮಾಡಿರುವುದಾಗಿ ಪರ್ವೀಜ್ ದೂರನಲ್ಲಿ ದಾಖಲಿಸಿದ್ದಾರೆ. ಸಯ್ಯದ್ ಪರ್ವೀಜ್ ಇತ್ತೀಚೆಗಷ್ಟೆ ಅಸ್ಲಾಂ ಎಂಬುವರಿಗೆ ಸೇರಿದ್ದ ಈ ಕಾರನ್ಮು ಖರೀದಿಸಿದ್ದರು. ಕಾರು ಮಾಲೀಕರ ಹೆಸರು ಬದಲಾವಣೆಗೆ ಆರ್ ಟಿ ಓ ಕಚೇರಿಗೆ ಅರ್ಜಿ ಸಲ್ಲಿಸಿದ್ದರು.
ಅಶ್ವಿನಿ ಹಾಗೂ 10 ರಿಂದ 15 ಜನರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಸಯ್ಯದ್ ಪರ್ವೇಜ್ ದೊಡ್ಡ ಪೇಟೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

Exit mobile version