ಶಿವಮೊಗ್ಗ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ, ಕಾಮಗಾರಿ ಭೂಗತ ವಿದ್ಯುತ್ ಕೇಬಲ್ ಅಳವಡಿಕೆ ಕಾಮಗಾರಿಗಳು, ಅವೈಜ್ಞಾನಿಕತೆಯಿಂದ ನಗರದ ನಾಗರಿಕರು ವಿದ್ಯುತ್ ಸ್ಪರ್ಶಕ್ಕೆ ತುತ್ತಾಗುತ್ತಿದ್ದು, ಕೂಡಲೇ ಕ್ರಮ ಕೈಗೊಳ್ಳಿ ಎಂದು ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್ ಆಗ್ರಹಿಸಿದ್ದಾರೆ.
ಸ್ಮಾರ್ಟ್ ಸಿಟಿ ಯೋಜನೆಯಡಿ ಶಿವಮೊಗ್ಗ ನಗರದಲ್ಲಿ ನಡೆಯುತ್ತಿರುವ ಹಲವಾರು ಕಾಮಗಾರಿಗಳು ಅವೈಜ್ಞಾನಿಕತೆಯಿಂದ ಕೂಡಿದ್ದು, ಜೊತೆಗೆ ಮೆಸ್ಕಾಂ ಇಲಾಖೆಯಿಂದ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ, ಭೂ ಮಾರ್ಗವಾಗಿ ವಿದ್ಯುತ್ ಕೇಬಲ್ ಅಳವಡಿಸಿ ಮನೆಗಳಿಗೆ ವಿದ್ಯುತ್ ಕಲ್ಪಿಸುವ ಕಾಮಗಾರಿ ಪೂರ್ಣಗೊಂಡು ಪ್ರಾಯೋಗಿಕವಾಗಿ ಕೇಬಲ್ಗಳಿಗೆ ವಿದ್ಯುತ್ ನೀಡುವ ಸಂದರ್ಭದಲ್ಲಿ ಹೊಸಮನೆ, ರಾಜೇಂದ್ರ ನಗರ ೧೦೦ ಅಡಿ ರಸ್ತೆ, ಜಯನಗರ ಸೇರಿದಂತೆ ನಗರದ ಹಲವು ಬಡಾವಣೆಗಳಲ್ಲಿ ಅಗ್ನಿ ಸ್ಪರ್ಶ ಕಾಣಿಸಿಕೊಂಡಿದ್ದು,
ಹಲವಾರು ನಾಗರಿಕರಿಗೆ ವಿದ್ಯುತ್ ಸ್ಪರ್ಷವಾಗಿ ಜನ ಭಯಭೀತರಾಗಿದ್ದಾರೆ. ಸಂಬಂಧಪಟ್ಟ ಮೆಸ್ಕಾಂ ಅಧಿಕಾರಿಗಳಿಗೆ ಗುತ್ತಿಗೆದಾರರಿಗೆ ಸಾರ್ವಜನಿಕರು ಹಾಗೂ ಸ್ಥಳೀಯ ಪಾಲಿಕೆ ಸದಸ್ಯರು ದೂರು ನೀಡಿದರೂ ನಿರ್ಲಕ್ಷ?ಯ ಹಾಗೂ ದರ್ಪ ತೋರುತ್ತಿರುವ ಇಂತಹ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಜನರ ಜೀವದ ಜೊತೆಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜೊತೆಗೆ ಅವೈಜ್ಞಾನಿಕವಾಗಿ ವಿದ್ಯುತ್ ಕೇಬಲ್ ಅಳವಡಿಕೆಯಿಂದ ಕಾಮಗಾರಿ ನಡೆಸುವ ಸಂದರ್ಭದಲ್ಲಿ ಕೇಬಲ್ಗಳನ್ನು ಡ್ಯಾಮೇಜ್ ಮಾಡಿದ್ದು, ಅದರ ಮೇಲೆಯೇ ಟಾರ್ ರಸ್ತೆ ಫೇವರ್ ಟೈಲ್ಸ್ ಕಾಂಕ್ರೀಟ್ಗಳನ್ನು ಹಾಕಿದ್ದು, ವಿದ್ಯುತ್ ಕೇಬಲ್ ಮುಖಾಂತರ ವಿದ್ಯುತ್ ಹರಿದಾಗ ವಿದ್ಯುತ್ ಸ್ಫೋಟಗೊಂಡು ಜನರ ಜೀವಕ್ಕೆ ಕುತ್ತು ತರುತ್ತಿರುವ ಘಟನೆಗಳು ನಡೆದಿವೆ
. ಅವೈಜ್ಞಾನಿಕ ಸ್ಮಾರ್ಟ್ ಸಿಟಿ ಕಾಮಗಾರಿಗಳ ವಿರುದ್ಧ ಕಾಮಗಾರಿಗಳ ನಡೆಯುವ ಸಂದರ್ಭದಲ್ಲಿ ಸಾರ್ವಜನಿಕರು ಹಾಗೂ ಸ್ಥಳೀಯ ಮಹಾನಗರ ಪಾಲಿಕೆ ಸದಸ್ಯರುಗಳು ಗುತ್ತಿಗೆದಾರರಿಗೆ ಈ ವಿಚಾರವಾಗಿ ಸುರಕ್ಷತೆಯಿಂದ ಕಾಮಗಾರಿಯನ್ನು ನಿರ್ವಹಿಸಿ ಎಂದು ಹಲವು ಬಾರಿ ತಿಳಿಸಿದರು ತಮ್ಮಗೆ ಮನಬಂದಂತೆ ಕಾಮಗಾರಿಯನ್ನು ನಡೆಸಿ ತಮ್ಮ ಕಾಮಗಾರಿಯ ಬಿಲ್ಲುಗಳನ್ನು ಸಂಬಂಧಪಟ್ಟ ದೊಡ್ಡ ದೊಡ್ಡ ಅಧಿಕಾರಿಗಳಿಗೆ ಕಣ್ಮುಚ್ಚಿ ಕುಳಿತ ಸರ್ಕಾರಕ್ಕೆ ಪರ್ಸೆಂಟೇಜ್ ಕೊಟ್ಟು ಪಡೆದುಕೊಂಡು
ಪಲಾಯನ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.
ಕೂಡಲೇ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಇಂತಹ ಅವಘಡ ಸಂಭವಿಸದ ರೀತಿಯಲ್ಲಿ ಕ್ರಮ ಕೈಗೊಂಡು ಸಂಬಂಧಪಟ್ಟ ಮೆಸ್ಕಾಂ ಅಧಿಕಾರಿಗಳು, ಗುತ್ತಿಗೆದಾರರು, ಸ್ಮಾರ್ಟ್ ಸಿಟಿ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.